Modi Maldives Visit: ಅಂದು ಅವಮಾನಿಸಿ ಇಂದು ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿಯನ್ನು ಆಹ್ವಾನಿಸಿದ ಮಾಲ್ಡೀವ್ಸ್
ಅಂದು ಅವಮಾನ ಮಾಡಿ ಇಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಯನ್ನು ಮಾಲ್ಡೀವ್ಸ್ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿದೆ. ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವ ಚಾಕಚಕ್ಯತೆ ಪ್ರಧಾನಿಗಿದೆ. ಮಾಲ್ಡೀವ್ಸ್ನ 60ನೇ ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ತೆರಳಲಿದ್ದಾರೆ. ಎರಡು ವರ್ಷಗಳಿಂದ ಭಾರತ ಹಾಗೂ ಮಾಲ್ಡೀವ್ಸ್ನ ಸಂಬಂಧ ತೀರಾ ಹದಗೆಟ್ಟಿತ್ತು. ನೇರವಾಗಿಯೇ ಅಲ್ಲಿನ ಸಚಿವರು ಪ್ರಧಾನಿ ಮೋದಿ ವಿರುದ್ಧ ಅಪಪ್ರಚಾರ ಮಾಡಿದ್ದರು. ಅದಕ್ಕೆ ಭಾರತವು ಮಾಲ್ಡೀವ್ಸ್ ಹೆಸರೆತ್ತದೆ ಭಾರತದ ಲಕ್ಷ್ಯದ್ವೀಪ ಮಾಲ್ಡೀವ್ಸ್ಗಿಂತಲೂ ಸುಂದರವಾಗಿ ಹೆಚ್ಚಿನ ಜನರು ಅಲ್ಲಿಗೆ ಭೇಟಿ ನೀಡಬೇಕೆಂದು ಮೋದಿ ಹೇಳಿದ್ದರು

ನವದೆಹಲಿ, ಜುಲೈ 23: ಅಂದು ಅವಮಾನ ಮಾಡಿ ಇಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಯನ್ನು ಮಾಲ್ಡೀವ್ಸ್ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿದೆ. ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವ ಚಾಕಚಕ್ಯತೆ ಪ್ರಧಾನಿಗಿದೆ. ಮಾಲ್ಡೀವ್ಸ್ನ 60ನೇ ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ತೆರಳಲಿದ್ದಾರೆ. ಎರಡು ವರ್ಷಗಳಿಂದ ಭಾರತ ಹಾಗೂ ಮಾಲ್ಡೀವ್ಸ್ನ ಸಂಬಂಧ ತೀರಾ ಹದಗೆಟ್ಟಿತ್ತು. 2023ರಲ್ಲಿ ಇಂಡಿಯಾ ಔಟ್ ಅಭಿಯಾನವನ್ನು ಮಾಲ್ಡೀವ್ಸ್ ಸರ್ಕಾರ ಆರಂಭಿಸಿತ್ತು.
ನೇರವಾಗಿಯೇ ಅಲ್ಲಿನ ಸಚಿವರು ಪ್ರಧಾನಿ ಮೋದಿ ವಿರುದ್ಧ ಅಪಪ್ರಚಾರ ಮಾಡಿದ್ದರು. ಅದಕ್ಕೆ ಭಾರತವು ಮಾಲ್ಡೀವ್ಸ್ ಹೆಸರೆತ್ತದೆ ಭಾರತದ ಲಕ್ಷ್ಯದ್ವೀಪ ಮಾಲ್ಡೀವ್ಸ್ಗಿಂತಲೂ ಸುಂದರವಾಗಿ ಹೆಚ್ಚಿನ ಜನರು ಅಲ್ಲಿಗೆ ಭೇಟಿ ನೀಡಬೇಕೆಂದು ಮೋದಿ ಹೇಳಿದ್ದರು. ಅದಾದ ಬಳಿಕ ಮಾಲ್ಡೀವ್ಸ್ ಹೋಗುವ ಭಾರತೀಯರ ಸಂಖ್ಯೆಯಲ್ಲಿ ಗಮನಾರ್ಹ ಕಡಿತ ಉಂಟಾಗಿತ್ತು. ಆದರೆ ಕೇವಲ ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಮಾಲ್ಡೀವ್ಸ್‌ಗೆ ಇದರಿಂದ ದೊಡ್ಡ ಹೊಡೆತ ಬಿದ್ದಿತ್ತು.
ಇದೀಗ ಮತ್ತೆ ಭಾರತದೊಂದಿಗಿನ ಸಂಬಂಧವನ್ನು ಸರಿಯಾಗಿಸಿಕೊಂಡು ಪ್ರವಾಸಿಗರನ್ನು ಆಕರ್ಷಿಸಲು ಮಾಲ್ಡೀವ್ಸ್ ಮುಂದಾಗಿದೆ. ಮೊಹಮ್ಮದ್ ಮುಯಿಝು ಮಾಲ್ಡೀವ್ಸ್ ಅಧ್ಯಕ್ಷರಾದ ಬಳಿಕ ಪ್ರಧಾನಿ ಮೋದಿ ಮೊದಲ ಬಾರಿಗೆ ಮಾಲ್ಡೀವ್ಸ್‌ಗೆ ತೆರಳುತ್ತಿದ್ದಾರೆ. ಪ್ರಧಾನಿ ಜುಲೈ 25 ಮತ್ತು 26 ರಂದು ಮಾಲ್ಡೀವ್ಸ್‌ನಲ್ಲಿರುತ್ತಾರೆ.
ಮತ್ತಷ್ಟು ಓದಿ: ಮತ್ತಷ್ಟು ಓದಿ: Narendra Modi: ಪ್ರಧಾನಿ ಮೋದಿ ಆಗಸ್ಟ್ನಲ್ಲಿ ಚೀನಾಗೆ ಭೇಟಿ ನೀಡುವ ಸಾಧ್ಯತೆ
ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯ ಅತಿಥಿಯನ್ನಾಗಿ ಮಾಡಿರುವುದು ಮಾಲ್ಡೀವ್ಸ್ ಮತ್ತು ಭಾರತ ನಡುವಿನ ಸಂಬಂಧಗಳು ಮತ್ತೆ ಹಳಿಗೆ ಬಂದಿವೆ ಎಂಬುದನ್ನು ಸೂಚಿಸುತ್ತದೆ. ಅದೇ ಸಮಯದಲ್ಲಿ, ಮಾಲ್ಡೀವ್ಸ್ ಕೂಡ ತನ್ನ ಹಿಂದಿನ ತಪ್ಪುಗಳನ್ನು ಅರಿತುಕೊಂಡಿದೆ. ಚೀನಾ ಪರ ಎಂದು ಪರಿಗಣಿಸಲಾದ ಮೊಹಮ್ಮದ್ ಮುಯಿಝು 2023 ರ ನವೆಂಬರ್‌ನಲ್ಲಿ ಅಧಿಕಾರಕ್ಕೆ ಬಂದ ನಂತರ ಎರಡೂ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿದ್ದವು.
ಪ್ರಧಾನಿ ಮೋದಿ ಅವರ ಲಂಡನ್ ಭೇಟಿಯ ಸಮಯದಲ್ಲಿ ಭಾರತ ಮತ್ತು ಯುಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಔಪಚಾರಿಕವಾಗಿ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಒಪ್ಪಂದಕ್ಕೆ ಸಹಿ ಹಾಕುವ ಆಡಳಿತಾತ್ಮಕ ಪ್ರಕ್ರಿಯೆಯನ್ನು ಯುಕೆ ಪೂರ್ಣಗೊಳಿಸಿದೆ ಎಂದು ಅವರು ಹೇಳಿದರು. ಮೇ ತಿಂಗಳಲ್ಲಿ, ಭಾರತ ಮತ್ತು ಯುಕೆ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ್ದವು.
ಅಕ್ಟೋಬರ್ 2024 ರಲ್ಲಿ ಮುಯಿಝು ಅವರ ಭಾರತ ಭೇಟಿಯ ನಂತರ ಎರಡೂ ಕಡೆಯವರು ಸಂಬಂಧಗಳನ್ನು ಸುಧಾರಿಸುವತ್ತ ಹೆಜ್ಜೆ ಇಟ್ಟರು. ಭಾರತದ ‘ನೆರೆಹೊರೆ ಮೊದಲು’ ನೀತಿ ಮತ್ತು ‘ವಿಷನ್ ಓಷನ್’ (ಪ್ರದೇಶದಲ್ಲಿ ಭದ್ರತೆ ಮತ್ತು ಅಭಿವೃದ್ಧಿಗಾಗಿ ಪರಸ್ಪರ ಮತ್ತು ಸಮಗ್ರ ಪ್ರಗತಿ) ಯಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಮಾಲ್ಡೀವ್ಸ್‌ಗೆ ಭಾರತ ನೀಡುವ ಪ್ರಾಮುಖ್ಯತೆಯನ್ನು ಈ ಭೇಟಿ ಪ್ರತಿಬಿಂಬಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಈ ಭೇಟಿಯು ಎರಡೂ ಕಡೆಯವರಿಗೆ ನಿಕಟ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಾಢವಾಗಿಸಲು ಮತ್ತು ಬಲಪಡಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ಸಚಿವಾಲಯ ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




