ದೆಹಲಿಯಲ್ಲಿ ಆಘಾತಕಾರಿ ಘಟನೆ; ಅಕ್ರಮ ಸಂಬಂಧದಿಂದ ಮೈದುನನ ಜೊತೆ ಸೇರಿ ಗಂಡನನ್ನೇ ಕೊಂದ ಮಹಿಳೆ
ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಗಂಡನನ್ನು ಕೊಲೆ ಮಾಡುತ್ತಿರುವ ಹೆಂಡತಿಯರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ದೆಹಲಿಯಲ್ಲೂ ಅದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಕರಣ್ ದೇವ್ ಅವರ ತಮ್ಮನ ಜೊತೆ ಸಂಬಂಧ ಹೊಂದಿದ್ದ ಮಹಿಳೆ ಆತನ ಜೊತೆ ಸೇರಿ ತನ್ನ ಗಂಡನನ್ನೇ ಕೊಲೆ ಮಾಡಿದ್ದಾರೆ. ಅಪಘಾತದಂತೆ ಬಿಂಬಿಸಲು ಮೃತ ವ್ಯಕ್ತಿಯ ತಮ್ಮ ಮತ್ತು ಹೆಂಡತಿ ಆತನಿಗೆ ಕರೆಂಟ್ ಶಾಕ್ ನೀಡಿದ್ದಾರೆ.

ನವದೆಹಲಿ, ಜುಲೈ 19: ದೆಹಲಿಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ (Shocking News) ವ್ಯಕ್ತಿಯ ಹೆಂಡತಿ ಮತ್ತು ತಮ್ಮ ಸೇರಿ ಆತನಿಗೆ ದ್ರೋಹ ಬಗೆದು, ಕೊಂದಿದ್ದಾರೆ. ಆರಂಭದಲ್ಲಿ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆಂದು ಭಾವಿಸಲಾಗಿದ್ದ 36 ವರ್ಷದ ವ್ಯಕ್ತಿಯನ್ನು ಆತನ ಪತ್ನಿಯೇ ತನ್ನ ಭಾವನೊಂದಿಗಿನ ಸಂಚಿನಿಂದ ಕೊಂದಿದ್ದಾಳೆ ಎಂಬುದು ಬಯಲಾಗಿದೆ. ಗಂಡನ ತಮ್ಮನ ಜೊತೆ ಅಕ್ರಮ ಸಂಬಂಧದ (Extra Marital Affair) ಕಾರಣಕ್ಕೆ ಆತನೊಂದಿಗೆ ಜೀವಿಸುವ ಉದ್ದೇಶದಿಂದ ಗಂಡನನ್ನು ಕೊಲೆ ಮಾಡಿದ್ದಾರೆ.
ಕರಣ್ ದೇವ್ ಎಂಬ ವ್ಯಕ್ತಿಯನ್ನು ಜುಲೈ 13ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಆಕಸ್ಮಿಕ ವಿದ್ಯುತ್ ಶಾಕ್ ತಗುಲಿದೆ ಎಂದು ಅವರ ಪತ್ನಿ ಸುಷ್ಮಿತಾ ಹೇಳಿಕೊಂಡಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಕರಣ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಅವರ ಕುಟುಂಬವು ಇದು ಅಪಘಾತ ಎಂದು ನಂಬಿದ್ದರಿಂದ ಮರಣೋತ್ತರ ಪರೀಕ್ಷೆಯನ್ನು ಕೂಡ ಮಾಡಲಿಲ್ಲ.
ಇದನ್ನೂ ಓದಿ: ಪತ್ನಿಗೆ ಅಕ್ರಮ ಸಂಬಂಧವಿದೆಯೆಂಬ ಶಂಕೆ, ನಾಲ್ವರು ಮಕ್ಕಳೊಂದಿಗೆ ರೈಲೆದುರು ಹಾರಿ ಪ್ರಾಣಬಿಟ್ಟ ಪತಿ
ಆದರೆ, ಕರಣ್ ಅವರ ವಯಸ್ಸು ಮತ್ತು ಸಂದರ್ಭಗಳನ್ನು ಉಲ್ಲೇಖಿಸಿ ದೆಹಲಿ ಪೊಲೀಸರು ಶವಪರೀಕ್ಷೆ ನಡೆಸುವಂತೆ ಒತ್ತಾಯಿಸಿದರು. ಆದರೆ ಅವರ ಪತ್ನಿ ಮತ್ತು ಸೋದರಸಂಬಂಧಿ ರಾಹುಲ್ ಆಕ್ಷೇಪ ವ್ಯಕ್ತಪಡಿಸಿದರು. ಮೃತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ನಂತರ ಅವರ ತಮ್ಮ ಕುನಾಲ್ ತನ್ನ ತಮ್ಮ ಹಾಗೂ ಕರಣ್ನ ಪತ್ನಿ ಸೇರಿ ಕೊಲೆ ಮಾಡಿರಬಹುದು ಎಂದು ಪೊಲೀಸರ ಬಳಿ ಅನುಮಾನ ವ್ಯಕ್ತಪಡಿಸಿದ್ದರು.
ಕುನಾಲ್ ಸುಶ್ಮಿತಾ ಮತ್ತು ರಾಹುಲ್ ನಡುವಿನ ಇನ್‌ಸ್ಟಾಗ್ರಾಮ್ ಚಾಟ್‌ನ ಪುರಾವೆಗಳನ್ನು ಕೂಡ ಹಂಚಿಕೊಂಡಿದ್ದರು. ಅದರಲ್ಲಿ ಅವರು ಕೊಲೆಯ ಪ್ಲಾನ್ ವಿವರಗಳನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ. ಕರಣ್ ಅವರ ಪತ್ನಿ ಮತ್ತು ತಮ್ಮ ಸಂಬಂಧ ಹೊಂದಿದ್ದರು, ಅದೇ ಕಾರಣಕ್ಕೆ ಅವರು ಕರಣ್ನನ್ನು ಕೊಲ್ಲಲು ನಿರ್ಧರಿಸಿದ್ದರು ಎಂದು ಚಾಟ್‌ಗಳು ಬಹಿರಂಗಪಡಿಸಿವೆ.
ಇದನ್ನೂ ಓದಿ: ಇಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಇಡೀ ಕುಟುಂಬಕ್ಕೆ ವಿಷ ಹಾಕಿದ್ಲು! ಮುಂದಾಗಿದ್ದೇನು?
ಹೀಗಾಗಿ, ರಾಹುಲ್ ಮತ್ತು ಸುಷ್ಮಿತಾ ಸೇರಿ ಕರಣ್ನ ಊಟದಲ್ಲಿ 15 ನಿದ್ರೆ ಮಾತ್ರೆಗಳನ್ನು ಬೆರೆಸಿ ಅವರು ಪ್ರಜ್ಞಾಹೀನರಾಗುವವರೆಗೂ ಕಾಯುತ್ತಿದ್ದರು. ನಿದ್ರೆ ಮಾತ್ರೆಗಳು ಸಾವಿಗೆ ಕಾರಣವಾಗಲು ತೆಗೆದುಕೊಳ್ಳುವ ಸಮಯವನ್ನು ಅವರು ಗೂಗಲ್‌ನಲ್ಲಿ ಹುಡುಕಿದ್ದರು. ಕರಣ್ ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಅವರ ಪತ್ನಿ ತನಗೆ ನಿದ್ರೆ ಬರುತ್ತಿದೆ ಎಂದು ತನ್ನ ಪ್ರೇಮಿಗೆ ತಿಳಿಸಿದ್ದರು.
ಆರೋಪಿಗಳು ಈ ಘಟನೆಯನ್ನು ಆಕಸ್ಮಿಕ ಸಾವು ಎಂದು ಬಿಂಬಿಸುವ ಪ್ರಯತ್ನದಲ್ಲಿ ಕರಣ್ಗೆ ವಿದ್ಯುತ್ ಶಾಕ್ ನೀಡಿದ್ದರು. ಅವರಿಬ್ಬರ ಚಾಟ್‌ಗಳು ಪೊಲೀಸರ ಗಮನಕ್ಕೆ ಬಂದ ನಂತರ ಇಬ್ಬರನ್ನು ವಶಕ್ಕೆ ಪಡೆಯಲಾಯಿತು. ಸುಷ್ಮಿತಾ ತನ್ನ ಗಂಡನನ್ನು ಕೊಂದಿದ್ದಾಗಿ ಒಪ್ಪಿಕೊಂಡಳು. ಗಂಡನ ತಮ್ಮನ ಜೊತೆ ಸೇರಿ ಪ್ಲಾನ್ ಮಾಡಿದ್ದಾಗಿಯೂ ಒಪ್ಪಿಕೊಂಡಳು.
ಇನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




