AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಭವ್ ಸೂರ್ಯವಂಶಿಗೆ 12 ಕೋಟಿ ರೂ. ಆಫರ್..!

Vaibhav Sooryavanshi: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸ್ಫೋಟಕ ಬ್ಯಾಟಿಂಗ್​ನೊಂದಿಗೆ ಐದು ಪ್ರಶಸ್ತಿ ಮುಡಿಗೇರಿಸಿಕೊಂಡಿರುವ 15 ವರ್ಷದ ಯುವ ದಾಂಡಿಗ ವೈಭವ್ ಸೂರ್ಯವಂಶಿಗೆ ಕೋಟಿ ಮೊತ್ತದ ಆಫರ್​ ಬಂದಿದೆ. ಅದು ಸಹ ಬ್ಯಾಟ್​ ಮೇಲೆ ಜಾಹೀರಾತು ಪ್ರದರ್ಶಿಸಲು ಎಂಬುದು ವಿಶೇಷ.

ವೈಭವ್ ಸೂರ್ಯವಂಶಿಗೆ 12 ಕೋಟಿ ರೂ. ಆಫರ್..!
Vaibhav Sooryavanshi Image Credit source: IPL
ಝಾಹಿರ್ ಯೂಸುಫ್
|

Updated on:Jun 03, 2026 | 9:49 PM

Share

ಭಾರತೀಯ ಕ್ರಿಕೆಟ್​ನ ಮುಂದಿನ ಸೂಪರ್ ಸ್ಟಾರ್ ಎಂದೇ ಬಿಂಬಿತನಾಗಿರುವ 15 ವರ್ಷದ ಯುವ ದಾಂಡಿಗ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಬಿಗ್ ಆಫರ್ ಬಂದಿದೆ. ಅದು ಕೂಡ ಬರೋಬ್ಬರಿ 12 ಕೋಟಿ ರೂ. ಭರ್ಜರಿ ಆಫರ್. ಪ್ರಮುಖ ಕಾರ್ಪೊರೇಟ್ ಟೈರ್​ ಕಂಪೆನಿಯೊಂದು ತಮ್ಮ ಬ್ರ್ಯಾಂಡ್ ಲೋಗೊವನ್ನು ಬ್ಯಾಟ್ ಮೇಲೆ ಪ್ರದರ್ಶಿಸಲು ವೈಭವ್​ಗೆ ಬರೋಬ್ಬರಿ 12 ಕೋಟಿ ರೂಪಾಯಿಗಳ ವಾರ್ಷಿಕ ಸ್ಪಾನ್ಸರ್​ಶಿಪ್ ಆಫರ್ ನೀಡಿದೆ ಎಂದು ವರದಿಯಾಗಿದೆ.

ಇದರ ಜೊತೆಗೆ ಮತ್ತೊಂದು ಟೈರ್ ಕಂಪೆನಿ ಕೂಡ ವೈಭವ್ ಸೂರ್ಯವಂಶಿಯ ಬ್ಯಾಟ್​ ಸ್ಪಾನ್ಸರ್​ಶಿಪ್​ಗಾಗಿ ತೆರೆಮರೆಯ ಪ್ರಯತ್ನ ನಡೆಸುತ್ತಿದ್ದಾರೆ. ಅಂದರೆ ಎರಡು ಪ್ರಮುಖ ಕಂಪೆನಿಗಳು ವೈಭವ್ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಬ್ಯಾಟ್ ಸ್ಪಾನ್ಸರ್​ಶಿಪ್​ನಿಂದಾಗಿ ಯುವ ದಾಂಡಿಗ ಕೋಟಿ ರೂ. ಎನಿಸುವುದು ಖಚಿತ ಎಂದೇ ಹೇಳಬಹುದು.

ಸದ್ಯ ವೈಭವ್ ಸೂರ್ಯವಂಶಿ ಸದ್ಯ ‘SS’ (ಸರೀನ್ ಸ್ಪೋರ್ಟ್ಸ್​) ಕಂಪನಿಯೊಂದಿಗೆ ವಾರ್ಷಿಕ 50 ಲಕ್ಷ ರೂಪಾಯಿಗಳ ಬ್ಯಾಟ್ ಒಪ್ಪಂದವನ್ನು ಹೊಂದಿದ್ದಾರೆ. 3 ವರ್ಷಗಳ ಹಳೆಯ ಈ ಒಪ್ಪಂದವು ಮುಕ್ತಾಯದ ಹಂತದಲ್ಲಿದೆ. ಈ ಒಪ್ಪಂದವು ಮುಗಿಯುತ್ತಿದ್ದಂತೆ ವೈಭವ್ ಸೂರ್ಯವಂಶಿಯ ಬ್ಯಾಟ್ ಮೇಲೆ ಹೊಸ ಕಂಪೆನಿಯ ಹೆಸರು ಕಾಣಿಸಿಕೊಳ್ಳಲಿದೆ.

ಆದರೆ ಆ ಕಂಪೆನಿ ಯಾವುದು ಎಂಬುದು ಇನ್ನೂ ಕೂಡ ಬಹಿರಂಗವಾಗಿಲ್ಲ. ಇದಾಗ್ಯೂ ಭಾರತ ಸ್ಟಾರ್ ಆಟಗಾರರ ಬ್ಯಾಟ್ ಸ್ಪಾನ್ಸರ್​ ಮಾಡುತ್ತಿರುವ ಎರಡು ಕಂಪೆನಿಗಳೇ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿದು ಬಂದಿದೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಅವರ ಬ್ಯಾಟ್ ಸ್ಪಾನ್ಸರ್‌ಗಳು ಮತ್ತು ಅವರ ವಾರ್ಷಿಕ ಒಪ್ಪಂದದ ಮೊತ್ತದ ವಿವರಗಳು ಈ ಕೆಳಗಿನಂತಿವೆ…

  • ವಿರಾಟ್ ಕೊಹ್ಲಿ (MRF): ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಮೊತ್ತದ ಬ್ಯಾಟ್ ಸ್ಪಾನ್ಸರ್‌ಶಿಪ್ ಹೊಂದಿರುವುದು ವಿರಾಟ್ ಕೊಹ್ಲಿ. 2017ರಲ್ಲಿ ಎಂಆರ್​ಎಫ್ ಕಂಪೆನಿ ಜೊತೆ ಈ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದ ಕೊಹ್ಲಿ  ವಾರ್ಷಿಕವಾಗಿ 12.5 ಕೋಟಿ ರೂ. ಪಡೆಯುತ್ತಿದ್ದಾರೆ.
  • ಶುಭ್​ಮನ್ ಗಿಲ್ (MRF): ಭಾರತ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭ್​ಮನ್​ ಗಿಲ್ ಅವರು ಈ ಹಿಂದೆ ‘CEAT’ ಕಂಪನಿಯ ಒಪ್ಪಂದದಲ್ಲಿದ್ದರು. ಆದರೆ ಅವರ ಅದ್ಭುತ ಫಾರ್ಮ್ ಹಾಗೂ ಮಾರುಕಟ್ಟೆ ಮೌಲ್ಯವನ್ನು ನೋಡಿ MRF ಸಂಸ್ಥೆಯು ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಅದರಂತೆ ಗಿಲ್ ಈಗ ಎಂಆರ್​ಎಫ್ ಸ್ಪಾನ್ಸರ್​ಶಿಪ್​ನೊಂದಿಗೆ ವಾರ್ಷಿಕ 10 ಕೋಟಿ ರೂ. ಪಡೆಯುತ್ತಿದ್ದಾರೆ.
  • ರೋಹಿತ್ ಶರ್ಮಾ (CEAT): ಟೀಮ್ ಇಂಡಿಯಾದ ಹಿರಿಯ ಆಟಗಾರ ರೋಹಿತ್ ಶರ್ಮಾ ಅವರು ದೀರ್ಘಕಾಲದಿಂದ ಸಿಯೆಟ್ ಟೈರ್ಸ್​ ಬ್ರ್ಯಾಂಡ್‌ನ ಲೋಗೋವನ್ನು ತಮ್ಮ ಬ್ಯಾಟ್ ಮೇಲೆ ಬಳಸುತ್ತಿದ್ದು, ಇದಕ್ಕಾಗಿ ಹಿಟ್​ಮ್ಯಾನ್ ಪಡೆಯುತ್ತಿರುವ ವಾರ್ಷಿಕ ಮೊತ್ತ 4 ಕೋಟಿ ರೂ.

ಅಂದರೆ ಇಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಬ್ಯಾಟ್​ಗಳ ಮೇಲೆ ಜಾಹೀರಾತು ನೀಡಿರುವುದು MRF ಮತ್ತು CEAT ಕಂಪೆನಿಗಳು. ಈ ದೈತ್ಯ ಟೈರ್ ಕಂಪೆನಿಗಳೇ ಈಗ ವೈಭವ್ ಸೂರ್ಯವಂಶಿಯ ಬ್ಯಾಟ್ ಮೇಲೂ ಕಣ್ಣಿಟ್ಟಿರುವ ಸಾಧ್ಯತೆಯಿದೆ.

ಸದ್ಯದ ಮಾಹಿತಿ ಪ್ರಕಾರ ವೈಭವ್ ಸೂರ್ಯವಂಶಿ ಹಾಗೂ SS ಕಂಪೆನಿ ನಡುವಣ ಒಪ್ಪಂದ ಇನ್ನು ಕೆಲವೇ ತಿಂಗಳಲ್ಲಿ ಮುಗಿಯಲಿದೆ. ಅದಕ್ಕೂ ಮುನ್ನ ಎರಡು ಕಂಪೆನಿಗಳು ವೈಭವ್ ಸ್ಪಾನ್ಸರ್​ಶಿಪ್​ಗಾಗಿ ಕೋಟಿ ಸುರಿಯಲು ಮುಂದಾಗಿದ್ದಾರೆ.

ಇದನ್ನೂ ಓದಿ: RCB ಪರ ಈ ಬಾರಿ ಒಂದೇ ಒಂದು ಪಂದ್ಯವಾಡದ 9 ಆಟಗಾರರು ಇವರೇ!

ಹೀಗೆ ಕೋಟಿ ಪೈಪೋಟಿಯೊಂದಿಗೆ ವೈಭವ್ ಸೂರ್ಯವಂಶಿ 12 ಕೋಟಿ ರೂ.ಗೆ ಡೀಲ್ ಕುದುರಿಸಿಕೊಳ್ಳಲಿದ್ದಾರಾ ಅಥವಾ 12 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಆಫರ್​ ಪಡೆದು ವಿರಾಟ್ ಕೊಹ್ಲಿಯ (12.5 ಕೋಟಿ ರೂ.) ಬ್ಯಾಟ್ ಸ್ಪಾನ್ಸರ್​ಶಿಪ್​ ದಾಖಲೆ ಮುರಿಯಲಿದ್ದಾರಾ ಕಾದು ನೋಡಬೇಕಿದೆ.

Published On - 10:43 am, Tue, 2 June 26

Follow Us
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’