AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಲ್ಲಾ ಕೇಂದ್ರದ ಲೈಬ್ರರಿಗಳಿಗೂ ಟಕ್ಕರ್ ನೀಡುವಂತಿದೆ ಪುಟ್ಟ ಹಳ್ಳಿಯ ಹೈಟೆಕ್ ಗ್ರಂಥಾಲಯ: ಏನೇನಿದೆ ಗೊತ್ತಾ?

ಬೀದರ್‌ನ ಶ್ರೀಮಂಡಲ ಗ್ರಾಮದಲ್ಲಿ ಹೈಟೆಕ್ ಡಿಜಿಟಲ್ ಲೈಬ್ರರಿ ಒಂದು ತಲೆ ಎತ್ತಿದೆ. ಆ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಜೊತೆಗೆ ಕಂಪ್ಯೂಟರ್ ಶಿಕ್ಷಣ ಹಾಗೂ ಆಧುನಿಕ ಸಂಪನ್ಮೂಲಗಳನ್ನು ಒದಗಿಸಲಾಗುತ್ತಿದೆ. ಸದ್ಯ ಈ ಹೈಟೆಕ್ ಡಿಜಿಟಲ್ ಲೈಬ್ರರಿ ಎಲ್ಲರ ಗಮನ ಸೆಳೆಯುತ್ತಿದೆ.

ಸುರೇಶ್ ನಾಯಕ್
| Edited By: |

Updated on: Jun 01, 2026 | 7:47 PM

Share
ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ತಾಲೂಕಿನ ಶ್ರೀಮಂಡಲ ಎಂಬ ಪುಟ್ಟ ಗ್ರಾಮದಲ್ಲಿ ಈಗೊಂದು ಹೈಟೆಕ್ ಡಿಜಿಟಲ್ ಲೈಬ್ರರಿ ನಿರ್ಮಾಣವಾಗಿದೆ. ಮಕ್ಕಳ ಓದಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಗ್ರಾಮ ಮಟ್ಟದ ಈ ಗ್ರಂಥಾಲಯವು ಜಿಲ್ಲಾ ಕೇಂದ್ರದ ದೊಡ್ಡ ದೊಡ್ಡ ಲೈಬ್ರರಿಗಳನ್ನೇ ಮಿರಿಸುವಂತಿದ್ದು, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಆಸರೆಯಾಗಿದೆ.

1 / 6
ಬೀದರ್​ ತಾಲೂಕಿನ ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಶ್ರೀಮಂಡಲ ಗ್ರಾಮದ ಬಡ ವಿದ್ಯಾರ್ಥಿಗಳಿಗೆ ಪ್ರತಿದಿನ ತಾಲೂಕು ಕೇಂದ್ರವಾದ ಬೀದರ್ ನಗರಕ್ಕೆ ಹೋಗಿ ಓದುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಮಕ್ಕಳ ಈ ಪರಿಸ್ಥಿತಿಯನ್ನು ಮನಗಂಡ ಶ್ರೀಮಂಡಲ ಗ್ರಾಮ ಪಂಚಾಯಿತಿಯ ಪಿಡಿಓ ಶರತ್ ಅಭಿಮಾನ್ ಹಾಗೂ ಪಂಚಾಯಿತಿ ಸದಸ್ಯರು ಸೇರಿ, ತಮ್ಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಹೈಟೆಕ್ ಲೈಬ್ರರಿಯನ್ನು ನಿರ್ಮಿಸಿದ್ದಾರೆ.

2 / 6
ಈ ಲೈಬ್ರರಿಯಲ್ಲಿ ನಾಲ್ಕು ಕಂಪ್ಯೂಟರ್​ಗಳಿದ್ದು, ಅದಕ್ಕೆ ಹೈ ಸ್ಪೀಡ್ ಇಂಟರ್ನೆಟ್ ಕನೆಕ್ಷನ್ ಕೊಡಲಾಗಿದೆ. ಜೊತೆಗೆ ಯುಪಿಎಸ್, ಕೆಎಎಸ್, ಎಸ್​ಡಿಎ, ಎಫ್​ಡಿಎ, ಪಿಡಿಓ ಹೀಗೆ ಎಲ್ಲಾ ಪರೀಕ್ಷೆಗೂ ಅನೂಕುಲವಾಗುವಂತಹ ಲಕ್ಷಾಂತರ ರೂ ಮೌಲ್ಯದ ಪುಸ್ತಕಗಳಿವೆ.

3 / 6
ಉತ್ತಮ ದರ್ಜೆಯ ಲೈಬ್ರರಿಯ ಜೊತೆಗೆ ಹೈಟೆಕ್ ಡಿಜಿಟಲ್ ಮಾದರಿಯ ಕಂಪ್ಯೂಟರ್ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ. ಲೈಬ್ರರಿಯಲ್ಲಿ ಓದುತ್ತಿರುವ ಮಕ್ಕಳ ಮೇಲೆ ನಿಗಾ ಇಡುವ ಉದ್ದೇಶದಿಂದ ಲೈಬ್ರರಿಯಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.

4 / 6
ಸದ್ಯ ಗ್ರಾಮದ ಮಕ್ಕಳು ಸೇರಿದಂತೆ ಜನರು ಹೈಟೆಕ್ ಲೈಬ್ರರಿಯ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಸಂದರ್ಭದಲ್ಲಿ ಹೆಚ್ಚಿನ ಸಮಯ ಗ್ರಂಥಾಲಯದಲ್ಲಿಯೇ ಕಳೆಯುತ್ತಿದ್ದಾರೆ. ಈ ಗ್ರಾಮಕ್ಕೆ 2023-24ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಸಹ ಸಿಕ್ಕಿದೆ.

5 / 6
ಸಾಮಾನ್ಯವಾಗಿ ಸರ್ಕಾರಿ ಆಡಳಿತ ವ್ಯವಸ್ಥೆಯನ್ನು ಹಾಗೂ ಪಂಚಾಯಿತಿಗಳ ಕೆಲಸವನ್ನು ತೆಗಳುವ ಈ ಕಾಲದಲ್ಲಿ, ಮನಸ್ಸು ಮಾಡಿದರೆ ಏನೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು ಎಂಬುದನ್ನು ಈ ಪಂಚಾಯಿತಿಯ ಪಿಡಿಓ ಮತ್ತು ಸದಸ್ಯರು ಮಾಡಿ ತೋರಿಸಿದ್ದಾರೆ.

6 / 6
ಸುರೇಶ್ ನಾಯಕ್
ಸುರೇಶ್ ನಾಯಕ್

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More
Follow Us
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ

ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!

ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ

ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್

ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು

ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ

ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?

ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ

ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ

ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ