Video: ಸರ್ಕಸ್ ವಿತ್ ಹೋಮ್ ವರ್ಕ್: ಎರಡು ಕಾಲು ಕುರ್ಚಿ ಮೇಲೆ, ತಲೆಕೆಳಗಾಗಿ ಮಲಗಿ ಹೋಮ್ ವರ್ಕ್ ಮಾಡಿದ ಪುಟಾಣಿ
ಪುಟಾಣಿ ಕಂದಮ್ಮಗಳ ಆಟ, ತುಂಟಾಟಗಳ ಕಣ್ತುಂಬಿಸಿಕೊಳ್ಳುವುದೇ ಕಣ್ಣಿಗೆ ಹಬ್ಬ. ಆದರೆ ಕೆಲವು ಮಕ್ಕಳು ತುಂಬಾನೇ ತರಲೆ ಮಾಡುತ್ತಿರುತ್ತವೆ. ಆ ಮಕ್ಕಳನ್ನು ಸಂಭಾಳಿಸುವಷ್ಟರಲ್ಲಿ ಸಾಕಾಗಿ ಹೋಗಿರುತ್ತದೆ. ಇದೀಗ ವೈರಲ್ ಆಗಿರುವ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು ಈ ಪುಟಾಣಿಯೊಂದು ಹೋಮ್ ವರ್ಕ್ ಮಾಡುವ ಸ್ಟೈಲ್ ನೋಡಿದ್ರೆ ನೀವು ಬಿದ್ದು ಬಿದ್ದು ನಗೋದು ಗ್ಯಾರಂಟಿ. ಹಾಗಾದ್ರೆ ಈ ವಿಡಿಯೋದಲ್ಲಿ ಅಂತಹದ್ದೇನಿದೆ ಗೊತ್ತಾ? ಇಲ್ಲಿದೆ ಮಾಹಿತಿ

ಈಗಿನ ಕಾಲದಲ್ಲಿ ಮಕ್ಕಳನ್ನು ಬೆಳೆಸೋದು ಕಷ್ಟನೇ ಬಿಡಿ. ಅದರಲ್ಲಿ ಒಂದೋ ಎರಡೋ ಮಕ್ಕಳಿರುವ ಕಾರಣ ಹೆತ್ತವರು ಹೆಚ್ಚು ಮುದ್ದು ಮಾಡಿ ಮಕ್ಕಳನ್ನು ಬೆಳೆಸುತ್ತಾರೆ. ಮೂರು ನಾಲ್ಕು ವರ್ಷ ಆಗುತ್ತಿದ್ದಂತೆ ನರ್ಸರಿಗೇನೋ ಸೇರಿರುತ್ತಾರೆ. ಆದರೆ ಈ ಮಕ್ಕಳನ್ನು ಓದಿಸುವುದು ಹಾಗೂ ಹೋಮ್ ವರ್ಕ್ (homework) ಮಾಡಿಸುವ ಕಷ್ಟ ಯಾರಿಗೂ ಬೇಡ. ಈ ವಿಡಿಯೋ ನೋಡಿದ್ರೆ ಈ ರೀತಿ ಕೂಡ ಹೋಮ್ ವರ್ಕ್ ಮಾಡಬಹುದಾ ಎಂದು ನಿಮಗೆ ಅನಿಸಿದ್ರೂ ತಪ್ಪೇನಿಲ್ಲ. ಸಾಮಾನ್ಯವಾಗಿ ಮಕ್ಕಳು ಕುಳಿತುಕೊಂಡು ಇಲ್ಲವಾದರೆ ಮಲಗಿಕೊಂಡು ಬರೆಯುವುದನ್ನು ನೀವು ನೋಡಿರುತ್ತೀರಿ. ಆದರೆ ಈ ಪುಟ್ಟ ಮಗುವೊಂದು ಕುರ್ಚಿಯ ಮೇಲೆ ತನ್ನ ಎರಡು ಕಾಲಿಟ್ಟು, ತಲೆಕೆಳಗಾಗಿ ಮಲಗಿಕೊಂಡು ಹೋಂವರ್ಕ್ ಮಾಡಿದೆ. ಈ ಪುಟಾಣಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ(Social media) ಸಖತ್ ವೈರಲ್ ಆಗುತ್ತಿದೆ.
@KodaiA2-Holiday ಹೆಸರಿನ ಎಕ್ಸ್ ಖಾತೆಯಲ್ಲಿ ಪುಟಾಣಿ ಹೋಮ್ ವರ್ಕ್ ಮಾಡುತ್ತಿರುವ ವಿಡಿಯೋವೊಂದು ಹಂಚಿಕೊಳ್ಳಲಾಗಿದ್ದು, ಹೋಮ್ ವರ್ಕ್ ಮುಗಿಸಲೇಬೇಕು ಎಂದು ಶೀರ್ಷಿಕೆಯಲ್ಲಿ ಬರೆದುಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟ್ಟ ಮಗುವೊಂದು ಕುರ್ಚಿ ಮೇಲೆ ತಲೆಕೆಳಗಾಗಿ ಮಲಗಿಕೊಂಡು ಹೋಮ್ ವರ್ಕ್ ಮಾಡುವುದರಲ್ಲಿ ಬ್ಯುಸಿಯಾಗಿದೆ. ಪುಸ್ತಕಗಳನ್ನು ನೆಲೆದ ಮೇಲೆ ಹರಡಿಕೊಂಡಿದ್ದು, ತಮ್ಮ ಎರಡು ಕಾಲುಗಳನ್ನು ಕುರ್ಚಿ ಮೇಲೆ ಇಟ್ಟುಕೊಂಡು ತಲೆಕೆಳಗಾಗಿ ಮಲಗಿ ಬರೆಯುವುದನ್ನು ನೀವಿಲ್ಲಿ ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
உங்களுக்கு ஹோம் வொர்க் தான எழுதனும் எப்படி எழுதுனா என்ன 😒 pic.twitter.com/jvrh50JEvI
— KodaiA2_Holidays (@KodaiA2_Holiday) July 17, 2025
ಇದನ್ನೂ ಓದಿ: ಹಲೋ ನಿಮ್ಮ ಸಮವಸ್ತ್ರ ಎಲ್ಲಿದೆ? ತರಗತಿಯೊಳಗೆ ಬಂದು ಬಾಲಕನ ಪಕ್ಕದಲ್ಲಿ ಕೂತ ಶ್ವಾನ, ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ
ಜುಲೈ 17 ರಂದು ಶೇರ್ ಮಾಡಲಾದ ಈ ವಿಡಿಯೋ 33 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು ಓ ದೇವರೇ ಹೋಮ್ ಮಾಡುವುದರಲ್ಲಿ ಎಷ್ಟು ಆಸಕ್ತಿಯಿದೆ ನೋಡಿ ಎಂದಿದ್ದಾರೆ. ಇನ್ನೊಬ್ಬರು, ಹೀಗೂ ಹೋಮ್ ವರ್ಕ್ ಮಾಡ್ಬಹುದು ಎಂದು ಇವತ್ತೇ ಗೊತ್ತಾದದ್ದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ನಮ್ಮ ಮನೆಯಲ್ಲಿ ಇದೇ ರೀತಿಯ ಗಿರಾಕಿಯಿದ್ದಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಇನ್ನು ಕೆಲವರು ನಗುವ ಇಮೋಜಿ ಕಳುಹಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:41 pm, Thu, 24 July 25