Viral: ಇನ್ನು ಒಂದು ವರ್ಷದೊಳಗೆ ಶೇ.30ರಷ್ಟು ಬೆಂಗಳೂರು ಟ್ರಾಫಿಕ್ನಿಂದ ಮುಕ್ತಿ, ಹೊಸ ಐಡಿಯಾ ತಂದ ಪ್ರಶಾಂತ್ ಪಿಟ್ಟಿ
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಹೊಸ ಯೋಜನೆಯನ್ನು EaseMyTrip ಸಹ-ಸಂಸ್ಥಾಪಕ ಪ್ರಶಾಂತ್ ಪಿಟ್ಟಿ ತರಲು ಮುಂದಾಗಿದ್ದಾರೆ. ಇದರಿಂದ ಸಂಚಾರ ದಟ್ಟಣೆಯೂ 25-30% ರಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರು ಸಂಚಾರ ಯೋಜನೆಯ ಕುರಿತು ಪ್ರಮುಖ ನವೀಕರಣ! ಒಂದು ವರ್ಷದೊಳಗೆ ಬೆಂಗಳೂರು ಸಂಚಾರವನ್ನು 25-30% ರಷ್ಟು ಸುಧಾರಿಸುವ ವಿಶ್ವಾಸ ನನಗಿದೆ ಎಂದು ಈ ಪೋಸ್ಟ್ನಲ್ಲಿ ಹೇಳಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ಬೆಂಗಳೂರು (Bengaluru) ಜನರಿಗೆ ಸದ್ಯದಲ್ಲೇ ಒಂದು ಸಿಹಿಸುದ್ದಿ ಸಿಗಲಿದೆ. ಬೆಂಗಳೂರು ಟ್ರಾಫಿಕ್ಗೆ (Bengaluru traffic) ಮುಕ್ತಿ ಸಿಗುವ ಕಾಲ ಸನಿಹ ಬಂದಿದೆ. ಹೌದು EaseMyTrip ಸಹ-ಸಂಸ್ಥಾಪಕ ಪ್ರಶಾಂತ್ ಪಿಟ್ಟಿ ಅವರು ಒಂದು ಘೋಷಣೆಯನ್ನು ಮಾಡಿದ್ದಾರೆ. ಈ ಹಿಂದೆ ಅವರು ಬೆಂಗಳೂರಿನ ದೀರ್ಘಕಾಲದ ಸಂಚಾರ ದಟ್ಟಣೆಯನ್ನು ಸರಿಪಡಿಸಲು 1 ಕೋಟಿ ರೂ ನೀಡುವುದಾಗಿ ವಾಗ್ದಾನ ನೀಡಿದರು. ಇದೀಗ ಅದಕ್ಕೆ ಪೂರಕವಾಗಿ ಹೊಸ ಅಪ್ಡೇಟ್ ನೀಡಿದ್ದಾರೆ. ಈ ಯೋಜನೆಯು ಒಂದು ವರ್ಷದೊಳಗೆ ನಗರದಲ್ಲಿ ಸಂಚಾರ ದಟ್ಟಣೆಯನ್ನು 25-30% ರಷ್ಟು ಕಡಿಮೆ ಮಾಡುತ್ತದೆ ಹೇಳಿದ್ದಾರೆ. ನಗರವನ್ನು ಕಾಡುತ್ತಿರುವ ಈ ಟ್ರಾಫಿಕ್‌ನ್ನು ಪರಿಹಾರ ಮಾಡಲು ಬೆಂಗಳೂರು ಸಂಚಾರ ಪೊಲೀಸ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ನಗರ ಪೊಲೀಸರ ಆಯುಕ್ತರನ್ನು ಭೇಟಿಯಾಗಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರು ಸಂಚಾರ ಯೋಜನೆಯ ಕುರಿತು ಪ್ರಮುಖ ನವೀಕರಣ! ಒಂದು ವರ್ಷದೊಳಗೆ ಬೆಂಗಳೂರು ಸಂಚಾರವನ್ನು 25-30% ರಷ್ಟು ಸುಧಾರಿಸುವ ವಿಶ್ವಾಸ ನನಗಿದೆ ಎಂದು ಈ ಪೋಸ್ಟ್ನ್ಲಲಿ ಬರೆದುಕೊಂಡಿದ್ದಾರೆ. ಈ ಕೆಲಸಕ್ಕೆ ಅಧಿಕಾರಿಗಳು, ಗೂಗಲ್ ತಂಡ, ಐಐಎಸ್ಸಿ ಪ್ರಾಧ್ಯಾಪಕರು, ವಿಜ್ಞಾನಿಗಳು, ರಸ್ತೆ ಎಂಜಿನಿಯರ್‌ಗಳು ಮತ್ತು ಸಂಚಾರ-ತಂತ್ರಜ್ಞಾನ ಉದ್ಯಮಿಗಳು ಸೇರಿದಂತೆ ಪ್ರಮುಖ ಸಾರ್ವಜನಿಕ ಮತ್ತು ಖಾಸಗಿ ಪಾಲುದಾರರ ಸಹಾಯ ಕೇಳಿದ್ದಾರೆ. ಬಿಟಿಪಿ ಮತ್ತು ಐಐಎಸ್‌ಸಿ ಎರಡೂ ಈಗಾಗಲೇ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಬಹು ಮರು-ಮಾರ್ಗ ಆಯ್ಕೆಗಳನ್ನು ಸಾಧಿಸಲು ಸಾಮರ್ಥ್ಯವಿರುವ ಸಿಮ್ಯುಲೇಶನ್ ಮಾದರಿಗಳನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ.
ಎಕ್ಸ್ ಪೋಸ್ಟ್ ಇಲ್ಲಿದೆ ನೋಡಿ:
🚨 MAJOR UPDATE on Bangalore Traffic Project!
I am confident of improving Bangalore traffic by 25-30% within a year’s time
—
1. Collaboration at Scale
In just 10 days, after meeting the commissioners of BTP, BBMP, CP, Google team, IISC professors, Scientist, Road Engineers,… pic.twitter.com/eQKd9B6KaR
— Prashant Pitti (@ppitti) July 24, 2025
ಈ ಮಾದರಿಗಳನ್ನು ಸರಿಯಾಗಿ ಕಾರ್ಯರೂಪಕ್ಕೆ ತರಲು ಗೂಗಲ್, ಉಬರ್, ಓಲಾ ಮತ್ತು ರಾಪಿಡೊಗಳಿಂದ ಮೊಬಿಲಿಟಿ ಡೇಟಾವನ್ನು ಸಂಗ್ರಹವನ್ನು ಮಾಡಲು ಮುಂದಾಗಿದೆ. ಇನ್ನು ತಕ್ಷಣಕ್ಕೆ ಮಾಡಬಹುದಾದ ಆಪ್ಟಿಮೈಸೇಶನ್ ಐಡಿಯಾಗಳು ಬಗ್ಗೆ ಅಧ್ಯಯನ ನಡೆಸಿದ್ದಾರೆ. ಮೊದಲಾಗಿ ರಸ್ತೆ ಗುಂಡಿಗಳಿಗೆ ಸರ್ಕಾರವು ಅಸ್ತಿತ್ವದಲ್ಲಿರುವ ದೂರು ಅಪ್ಲಿಕೇಶನ್ನ್ನು ಇದರಲ್ಲಿ ಸೇರಿಸಿಕೊಳ್ಳುವುದು. ಅಕ್ರಮ ಪಾರ್ಕಿಂಗ್, ಕೆಟ್ಟು ಹೋದ ಸಿಗ್ನಲ್, ರಾಂಗ್ ಸೈಡ್ ಚಲನೆ, ನೀರು ನಿಲ್ಲುವಿಕೆ, ರಸ್ತೆ ಮಧ್ಯೆ ದೈತ್ಯ ವಾಹನಗಳು ಕೆಟ್ಟು ನಿಲ್ಲುವುದು, ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಅದರ ನೇತೃತ್ವವನ್ನು ವಹಿಸುವುದು. ನಂತರ ಅದನ್ನು ತ್ವರಿತವಾಗಿ ಬಗೆಹರಿಸುವುದು. ಇದಕ್ಕೆ ಪಾರದರ್ಶಕತೆಯಾಗಿ ಕೆಲಸ ಮಾಡಬೇಕಿದೆ. ಸಾರ್ವಜನಿಕರ ದೂರುಗಳನ್ನು ಸರಿಯಾಗಿ ನಿಭಾಯಿಸುವ ಕೆಲಸ ಮಾಡಬೇಕಿದೆ ಎಂದು ಪ್ರಶಾಂತ್ ಪಿಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ನಿನ್ನ ಎದೆ ಚಿಕ್ಕದು, ಥೈಲ್ಯಾಂಡ್ನಲ್ಲಿ ಬಾರ್ ಗರ್ಲ್ ಜತೆಗೆ ಭಾರತೀಯ ಯುವಕರ ಕಿರಿಕ್, ಕೊನೆಗೆ ಪೊಲೀಸರ ಎಂಟ್ರಿ
ನಗರದ ರಸ್ತೆ ಕಾಮಗಾರಿಯನ್ನು ಉತ್ತಮವಾಗಿ ಯೋಜಿಸಲು ಸಹಾಯ ಮಾಡಲು “ಹೈಪರ್‌ಲೋಕಲ್ ರೈನ್ ಪ್ರಿಡಿಕ್ಟರ್” ಮಾಡುವ ಬಗ್ಗೆ ಅವರು ತಿಳಿಸಿದ್ದಾರೆ. ಸರ್ಕಾರವು ಮೂಲಸೌಕರ್ಯ ಹಾಗೂ ರಸ್ತೆಯನ್ನು ಮುಚ್ಚುತ್ತದೆ, ಆದರೆ ನಂತರ ಮಳೆ ಬಿದ್ದು ಆ ರಸ್ತೆಯ ಪ್ಯಾಚ್ ಹೋಗುತ್ತದೆ ಮತ್ತು ಕೆಲಸ ಸ್ಥಗಿತಗೊಳ್ಳುತ್ತದೆ. ಇದು ಅಸಾಮಾನ್ಯ ಸಮಸ್ಯೆಯಾಗಿದೆ, ನಂತರ ಇದರಿಂದ ಸಂಚಾರ ದಟ್ಟಣೆಗೆ ಕಾರಣವಾಗುತ್ತದೆ. ಹೈಪರ್‌ಲೋಕಲ್ ರೈನ್ ಪ್ರಿಡಿಕ್ಟರ್ ಯೋಜನೆಯು ಒಳಚರಂಡಿ ಸಮಸ್ಯೆಗಳು ಬರುವ ಮೊದಲೇ ಅದನ್ನು ಪರಿಹಾರ ಮಾಡುತ್ತದೆ. ಇನ್ನು ಗ್ರೀನ್ ವೇವ್ ಸಿಗ್ನಲ್ಸ್ ಕಾರ್ಯಗತಗೊಳಿಸಲು ಈಗಾಗಲೇ ಪೈಲಟ್ ಯೋಜನೆ ಜಾರಿಯಲ್ಲಿದೆ ಎಂದು ಹೇಳಿದ್ದಾರೆ. ಸಂಚಾರ ದೀಪಗಳನ್ನು ಸಿಂಕ್ ಮಾಡುವ ವ್ಯವಸ್ಥೆಯಾಗಿದ್ದು, ವಾಹನಗಳು ಪ್ರತಿ ಜಂಕ್ಷನ್‌ನಲ್ಲಿ ನಿಲ್ಲುವ ಬದಲು ಸಂಚಾರ ಮಾಡಬಹುದು. ನಗರ ಮಟ್ಟದಲ್ಲಿ ಇದನ್ನು ಮಾಡುವುದು ಅರ್ಥಪೂರ್ಣವಾಗಿದೆಯೇ ಪರೀಕ್ಷೆ ಮಾಡಬೇಕಿದೆ ಎಂದು ಹೇಳಲಾಗಿದೆ. ಇನ್ನು ಅನೇಕರು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ