AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನಮ್‌ ಓನರ್‌ ಬಂದೇ ಬಿಟ್ರು; ಮನೆ ಮಾಲೀಕರನ್ನು ಭರ್ಜರಿಯಾಗಿ ವೆಲ್‌ಕಮ್‌ ಮಾಡಿದ ಸಾಕು ಪ್ರಾಣಿಗಳು

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹತ್ತ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಮೂಕ ಜೀವಿಗಳಿಗೆ ಸಂಬಂಧಿಸಿದ ಒಂದಷ್ಟು ದೃಶ್ಯಗಳು ನಮ್ಮ ಮನಸ್ಸಿಗೆ ಖುಷಿಯನ್ನು ನೀಡುತ್ತವೆ. ಅಂತಹದ್ದೊಂದು ವಿಡಿಯೋ ಇದೀಗ ವೈರಲ್‌ ಆಗಿದ್ದು, ಮನೆಗೆ ಬಂದಂತಹ ಓನರನ್ನು ಸಾಕು ಪ್ರಾಣಿಗಳು ಭರ್ಜರಿಯಾಗಿ ವೆಲ್‌ಕಮ್‌ ಮಾಡಿವೆ. ಕಾರು ಮನೆ ಅಂಗಳಕ್ಕೆ ಬರುತ್ತಿದ್ದಂತೆ ಓಡಿ ಹೋಗಿ ಪ್ರೀತಿಯಿಂದ ಸ್ವಾಗತಿಸಿದ್ದು, ಈ ಮೂಕ ಪ್ರಾಣಿಗಳ ನಿಷ್ಕಲ್ಮಶ ಪ್ರೀತಿಗೆ ಪ್ರಾಣಿ ಪ್ರಿಯರು ಮನಸೋತಿದ್ದಾರೆ.

Video: ನಮ್‌ ಓನರ್‌ ಬಂದೇ ಬಿಟ್ರು; ಮನೆ ಮಾಲೀಕರನ್ನು ಭರ್ಜರಿಯಾಗಿ ವೆಲ್‌ಕಮ್‌ ಮಾಡಿದ ಸಾಕು ಪ್ರಾಣಿಗಳು
ವೈರಲ್‌ ವಿಡಿಯೋImage Credit source: Social Media
ಮಾಲಾಶ್ರೀ ಅಂಚನ್​
|

Updated on: Jul 26, 2025 | 4:43 PM

Share

ಪ್ರಾಣಿಗಳೇ (Animals) ಗುಣದಲಿ ಮೇಲು… ಮಾನವನದಕಿಂತ ಕೀಳು… ಮನುಷ್ಯರಿಗೆ ಹೋಲಿಸಿದರೆ ಗುಣದಲಿ, ಪ್ರೀತಿಯಲ್ಲಿ, ಮಾನವೀಯತೆಯ ವಿಷಯದಲ್ಲಿ ಪ್ರಾಣಿಗಳೇ ಎಷ್ಟೋ ಪಾಲು ಮೇಲು ಎಂದು ಹೇಳುತ್ತಾರೆ. ಮನುಷ್ಯನಿಗೆ ಹೋಲಿಸಿದರೆ ಪ್ರೀತಿ, ನಿಯತ್ತು ಪ್ರಾಣಿಗಳಿಗೆ ಜಾಸ್ತಿಯೇ ಇದೆ. ಈ ಮಾತಿಗೆ ನಿದರ್ಶನದಂತಿರುವ ಅದೆಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಇಲ್ಲೊಂದು ಪ್ರಾಣಿಗಳಿಗೆ (Pets) ತಮ್ಮ ಮಾಲೀಕರ ಮೇಲೆ ಪ್ರೀತಿ, ನಿಯತ್ತು ಎಷ್ಟಿದೆ ಎಂದು ತೋರಿಸುವಂತಹ  ದೃಶ್ಯ ವೈರಲ್‌ ಆಗಿದೆ. ಮಾಲೀಕರು ಬರುತ್ತಿದ್ದಂತೆ ನಾಯಿ, ದನಗಳು, ಕುದುರೆ ಓಡಿ ಹೋಗಿ ಅವರನ್ನು ಪ್ರೀತಿಯಿಂದ ಸ್ವಾಗತಿಸಿವೆ. ಮಾಲೀಕರ ಕಾರು ಬರುತ್ತಿದ್ದಂತೆ ಓಡಿ ಹೋಗಿ ವೆಲ್‌ಕಮ್‌ ಮಾಡಿದ್ದು, ಈ ಅದ್ಭುತ ದೃಶ್ಯ ಎಲ್ಲರ ಮನ ಗೆದ್ದಿದೆ.

ಮನೆ ಮಾಲೀಕರನ್ನು ಭರ್ಜರಿಯಾಗಿ ವೆಲ್‌ಕಮ್‌ ಸಾಕು ಪ್ರಾಣಿಗಳು:

ಓನರ್‌ ಕಾರು ಸದ್ದು ಕೇಳಿಸುತ್ತಿದ್ದಂತೆ, ಮನೆಯ ಅಂಗಳದಲ್ಲಿದ್ದ ಎರಡು ಹಸುಗಳು, ಎರಡು ಶ್ವಾನ, ಒಂದು ಕುದುರೆ ಕಾರ್‌ ಬಳಿ ಓಡುತ್ತಾ ಹೋಗಿ, ಮಾಲೀಕರನ್ನು ಪ್ರೀತಿಯಿಂದ ಸ್ವಾಗತಿಸಿವೆ. ಓನರ್‌ ಬಂದ್ರೂ ಎಂದು ಖುಷಿ ಖುಷಿಯಾಗಿ ಓಡಿ ಹೋಗಿ ಅವರನ್ನು ತಬ್ಬಿ ಸ್ವಾಗತಿಸಿವೆ.

ಇದನ್ನೂ ಓದಿ
Image
ತಾಯಾನೆ ಮರಿಯಾನೆಗೆ ಸ್ನಾನ ಮಾಡಿಸುವ ಚಂದ ನೋಡಿ
Image
ಹುಲಿಯಣ್ಣನ ಮೈ ಮೇಲೆ ಒರಗಿ ವಿಶ್ರಾಂತಿ ಪಡೆದ ಸಿಂಹ
Image
ಅಯ್ಯೋ ಅಮ್ಮ ನನಗೆ ಕುರ್ಚಿಯಲ್ಲಿ ಕೂರೋಕೆ ಆಗ್ತಿಲ್ಲ, ಈ ಮರಿಯಾನೆಯ ಕಷ್ಟ ನೋಡಿ
Image
ವಿಕೆಟ್‌ ಕೀಪರ್‌ ಆಗಿ ಅದ್ಭುತ ಪ್ರದರ್ಶನ ನೀಡಿದ ಶ್ವಾನ

ಈ ಮುದ್ದಾದ ದೃಶ್ಯವನ್ನು Buitengebieden ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಅತ್ಯುತ್ತಮ ಸ್ವಾಗತ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಸಾಕು ಪ್ರಾಣಿಗಳು ಓಡಿ ಹೋಗಿ ಮನೆಯ ಮಾಲೀಕರನ್ನು ಸ್ವಾಗತಿಸುತ್ತಿರುವ ದೃಶ್ಯವನ್ನು ಕಾಣಬಹುದು. ಓನರ್‌ ಕಾರು ಸದ್ದು ಕೇಳಿಸುತ್ತಿದ್ದಂತೆ, ಓನರ್‌ ಬಂದೇ ಬಿಟ್ರು ಎಂದು ಮನೆಯ ಅಂಗಳದಲ್ಲಿದ್ದ ಎರಡು ಹಸುಗಳು, ಶ್ವಾನಗಳು ಹಾಗೂ ಒಂದು ಕುದುರೆ ಬಹಳ ಖುಷಿಯಿಂದ ಓಡಿ ಹೋಗಿ ಮಾಲೀಕರನ್ನು ತಬ್ಬಿ ಪ್ರೀತಿಯ ಸ್ವಾಗತ ಕೋರಿವೆ.

ಇದನ್ನೂ ಓದಿ: ಸಾಕಮ್ಮ ಚಳಿ ಆಗುತ್ತೆ, ತಾಯಾನೆ ಮರಿಯಾನೆಗೆ ಸ್ನಾನ ಮಾಡಿಸುವ ಚಂದ ನೋಡಿ

ಜುಲೈ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜಕ್ಕೂ ಪ್ರಾಣಿಗಳೇ ಎಷ್ಟೋ ಉತ್ತಮʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪ್ರಾಣಿಗಳ ಜೊತೆ ಇಂತಹ ಜೀವನ ನಡೆಸುವುದು ನನ್ನ ದೊಡ್ಡ ಕನಸುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಬ್ಬಬ್ಬಾ ಎಂತಹ ಪ್ರೀತಿ, ಜೀವನದಲ್ಲಿ ಇದಕ್ಕಿಂತ ಸಂತೋಷ ಯಾವುದೂ ಇಲ್ಲʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
'ಶ್ರಮ ವ್ಯರ್ಥವಾಯಿತು': ನೀಟ್ ಪರೀಕ್ಷೆ ರದ್ದತಿಗೆ ವಿದ್ಯಾರ್ಥಿನಿ ಬೇಸರ
'ಶ್ರಮ ವ್ಯರ್ಥವಾಯಿತು': ನೀಟ್ ಪರೀಕ್ಷೆ ರದ್ದತಿಗೆ ವಿದ್ಯಾರ್ಥಿನಿ ಬೇಸರ
ಕಾಂಗ್ರೆಸ್​​​ಗೆ​ ಮೇ ಅಂತ್ಯಕ್ಕೆ ಶುಭಕಾಲ?
ಕಾಂಗ್ರೆಸ್​​​ಗೆ​ ಮೇ ಅಂತ್ಯಕ್ಕೆ ಶುಭಕಾಲ?
ಕೊಟ್ಟ ಮಾತು ಉಳಿಸಿಕೊಳ್ತೇವೆ: ವಿಧಾನಸಭೆಯಲ್ಲಿ ವಿಜಯ್ ಮೊದಲ ಭಾಷಣ
ಕೊಟ್ಟ ಮಾತು ಉಳಿಸಿಕೊಳ್ತೇವೆ: ವಿಧಾನಸಭೆಯಲ್ಲಿ ವಿಜಯ್ ಮೊದಲ ಭಾಷಣ
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ