ಸುರ್ಜೇವಾಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇ ಗೊತ್ತಿಲ್ಲವೆಂದ ಸಚಿವ ಸತೀಶ್ ಜಾರಕಿಹೊಳಿ
ಯತೀಂದ್ರ ಸಿದ್ದರಾಮಯ್ಯ ತನ್ನ ತಂದೆಯನ್ನು ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರೊಂದಿಗೆ ಹೋಲಿಸಿ ಮಾತಾಡಿರುವುದಕ್ಕೂ ಸತೀಶ್ ಹಾವು ಸಾಯಬಾರದು ಕೋಲೂ ಮುರಿಯಬಾರದು ಎಂಬಂತೆ ಪ್ರತಿಕ್ರಿಯಿಸಿದರು. ಆ ಕಾಲದಲ್ಲಿ ಒಡೆಯರ್ ಸಾಮಾಜಿಕ ಮತ್ತು ಅಭಿವೃದ್ಧಿಯ ಹರಿಕಾರರಾಗಿದ್ದರು, ಈಗ ಸಿದ್ದರಾಮಯ್ಯ; ಅವರ ನಡುವೆ ಹೋಲಿಕೆ ಮಾಡಿದರೆ ಇಬ್ಬರ ವ್ಯಕ್ತಿತ್ವವೂ ಕಡಿಮೆಯಾಗುವುದಿಲ್ಲ ಎಂದು ಸಚಿವ ಹೇಳಿದರು.
ಬೆಳಗಾವಿ, ಜುಲೈ 25: ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕೊಹೊಳಿ, ರಂದೀಪ್ ಸುರ್ಜೇವಾಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಗೊತ್ತೇ ಇಲ್ಲವೆನ್ನುವಂತೆ ಮಾತಾಡಿದರು. ಅವರೆಲ್ಲಿದ್ದಾರೆ? ದೆಹಲಿಗೆ ವಾಪಸ್ಸು ಹೋಗಿದ್ದಾರೆ, ಮೀಟಿಂಗ್ ಹೇಗೆ ಮಾಡುತ್ತಾರೆ ಅಂತ ಹೇಳಿದಾಗ ಪತ್ರಕರ್ತರು ಸಚಿವ ಕೆಎನ್ ರಾಜಣ್ಣ (KN Rajanna) ಅಕ್ಷೇಪ ವ್ಯಕ್ತಪಡಿಸಿದ್ದನ್ನು ಹೇಳಿದರು. ಅದರ ಬಗ್ಗೆ ತನಗೇನೂ ಗೊತ್ತಿಲ್ಲ ಅಂತ ಅವರು ವಿಷಯವನ್ನು ಅಲ್ಲಿಗೆ ಮೊಟಕುಗೊಳಿಸಿದರು. ರಾಜಣ್ಣ ಅವರ ಸೆಪ್ಟಂಬರ್ ಕ್ರಾಂತಿ ಬಗ್ಗೆಯೂ ಸತೀಶ್ ಸ್ಪಷ್ಟವಾದ ಅಭಿಪ್ರಾಯ ತಿಳಿಸಲಿಲ್ಲ. ಅವರು ಯಾಕೆ ಹೇಳಿದ್ದಾರೋ ಗೊತ್ತಿಲ್ಲ, ಬಹಳ ದಿನಗಳಿಂದ ಅವರನ್ನು ಭೇಟಿಯಾಗಿಲ್ಲ, ಬೆಂಗಳೂರುಗೆ ಹೋದಾಗ ಭೇಟಿ ಮಾಡಿ ಕೇಳುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಅನುಭವ ಬಳಸಿಕೊಳ್ಳಲು ಎಐಸಿಸಿ ಒಬಿಸಿ ಸಲಹಾ ಮಂಡಳಿಗೆ ನೇಮಕ ಮಾಡಿರಬಹುದು: ಸತೀಶ್ ಜಾರಕಿಹೊಳಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

