ಸಿದ್ದರಾಮಯ್ಯ ಅನುಭವ ಬಳಸಿಕೊಳ್ಳಲು ಎಐಸಿಸಿ ಒಬಿಸಿ ಸಲಹಾ ಮಂಡಳಿಗೆ ನೇಮಕ ಮಾಡಿರಬಹುದು: ಸತೀಶ್ ಜಾರಕಿಹೊಳಿ
ಮುಖ್ಯಮಂತ್ರಿ ಬದಲಾವಣೆಗೆ ಆಗುತ್ತಾರೆ, ಹಾಗಾಗೇ ಡಿಸಿಎಂ ಮತ್ತು ಸಿಎಂ ಇಬ್ಬರನ್ನು ದೆಹಲಿಗೆ ಕರೆಸಲಾಗಿದೆ ಎಂದು ಕೇಳಿಬರುತ್ತಿರುವ ವದಂತಿಗಳ ಬಗ್ಗೆ ಸತೀಶ್ ಜಾರಕಿಹೊಳಿ, ಹೈಕಮಾಂಡ್ಗೆ ಕೇಳಬೇಕಾದ ಪ್ರಶ್ನೆಗಳನ್ನು ತನ್ನನ್ಯಾಕೆ ಕೇಳಲಾಗುತ್ತಿದೆ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಾಪಸ್ಸು ಬಂದ ಮೇಲೆ ಅವರನ್ನೇ ಕೇಳಿ ಎಂದರು.
ಬೆಂಗಳೂರು, ಜುಲೈ 9: ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯ ದೆಹಲಿ ಭೇಟಿ (Delhi visit) ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿಲ್ಲ. ಸಿದ್ದರಾಮಯ್ಯರನ್ನು ಎಐಸಿಸಿ ಒಬಿಸಿ ಸಲಹಾ ಮಂಡಳಿಯಲ್ಲಿ ಸದಸ್ಯನಾಗಿ ಆಯ್ಕೆ ಮಾಡಿರೋದು ಅವರಿಗಿರುವ ಅಪಾರ ಅನುಭವವನ್ನು ರಾಷ್ಟ್ರಮಟ್ಟದಲ್ಲಿ ಬಳಸಿಕೊಳ್ಳಲು, ಅದರಲ್ಲಿ ತಪ್ಪೇನಿದೆ? ಎಂದು ಸತೀಶ್ ಪ್ರಶ್ನಿಸಿದರು. ಹಾಗಂತ ಅವರು ದೆಹಲಿಗೆ ಹೋಗಬೇಕಿಲ್ಲ ಮತ್ತು ಸಿಎಂ ಹುದ್ದೆಯನ್ನೂ ಬಿಡಬೇಕಿಲ್ಲ ಎಂದು ಹೇಳಿದ ಸಚಿವ, ಸಿದ್ದರಾಮಯ್ಯ ಹೆಚ್ಚುವರಿ ಜವಾಬ್ದಾರಿಯನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಕಾದು ನೋಡಬೇಕು ಎಂದರು.
ಇದನ್ನೂ ಓದಿ: ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ