ನನ್ನ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿಲ್ಲದಿರುವುದನ್ನು ಸುರ್ಜೇವಾಲಾ ಚರ್ಚಿಸಿದರು: ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ ಒಬ್ಬ ಸೀನಿಯರ್ ಕಾಂಗ್ರೆಸ್ ನಾಯಕ ಮತ್ತು ಸಚಿವನಾಗಿದ್ದಾಗ್ಯೂ ಸುರ್ಜೇವಾಲಾ ಕರೆದು ಮಾತಾಡುವ ಅವಶ್ಯಕತೆಯಿತ್ತೇ ಎಂದು ಕೇಳಿದಾಗ ಗೊಂದಲಕ್ಕೆ ಬಿದ್ದಂತೆ ಕಂಡ ಜಾರಕಿಹೊಳಿ ನಂತರ ಸಾವರಿಸಿಕೊಂಡು, ಅದರಲ್ಲಿ ತಪ್ಪೇನಿಲ್ಲ, ಇಲಾಖೆಯಲ್ಲಿ ಅಥವಾ ತನ್ನಿಂದ ತಪ್ಪುಗಳಾಗಿದ್ದರೆ ತಿದ್ದಿಕೊಳ್ಳುವ ಅವಕಾಶವಿದೆ, ಅವುಗಳನ್ನು ಸರಿಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಬೆಂಗಳೂರು, ಜುಲೈ 15: ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೇವಾಲಾರನ್ನು ಭೇಟಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ನಿರ್ದಿಷ್ಟವಾಗಿ ಅವರೇನೂ ತನಗೆ ಹೇಳಲಿಲ್ಲ, ತಮ್ಮ ಇಲಾಖೆಯಿಂದ ಏನೆಲ್ಲ ಕೆಲಸಗಳಾಗಿವೆ ಅಂತ ಅವರಿಗೆ ಹೇಳಿದ್ದೇನೆ, ಕ್ಷೇತ್ರಾವಾರು ಅನುದಾನಗಳನ್ನು ಬಿಡುಗಡೆ ಮಾಡಿರುವ ಬಗ್ಗೆಯೂ ಅವರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು. ಕೆಲ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕೆಲಸವಾಗಿಲ್ಲ, ಅನುದಾನ ಬಿಡುಗಡೆ ಮಾಡಿಲ್ಲ ಅಂತ ಸುರ್ಜೇವಾಲಾ ಅವರಿಗೆ ಹೇಳಿದ್ದಾರೆ, ಅದರ ಬಗ್ಗೆ ಚರ್ಚೆಯಾಯಿತು, ಅವರೊಂದಿಗೆ ತಾನು ಮೀಟಿಂಗ್ ಮಾಡೋದಾಗಿ ಹೇಳಿದ್ದೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಹೇಳಿಕೆ ಮತ್ತು ನಾವು ಖರ್ಗೆಯವರನ್ನು ಭೇಟಿಯಾಗಿರುವ ನಡುವೆ ಸಂಬಂಧವಿಲ್ಲ: ಸತೀಶ್ ಜಾರಕಿಹೊಳಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್ಗೇ ಬೆಂಕಿ ಹಚ್ಚಿದ ಯುವಕ!

