B Saroja Devi Passes Away: ದಶವಾರದಲ್ಲಿ ನಟಿ ಕಟ್ಟಿದ ಮನೆ ಹಳೆಯದಾದರರೂ ಸುಂದರ ಮತ್ತು ಅಚ್ಚುಕಟ್ಟು
ತಮ್ಮ ಅಭಿರುಚಿಗೆ ತಕ್ಕಂತೆ ಸರೋಜಾದೇವಿಯವರು ಕಟ್ಟಿಸಿದ ಮನೆ ನೋಡಿದಾಕ್ಷಣ ಮನಸೆಳೆಯುತ್ತದೆ. ಎಲ್ಲೂ ಅನಾವಶ್ಯಕ ಎನಿಸುವ ಸಾಮಾನುಗಳನ್ನು ಇಟ್ಟಿಲ್ಲ. ಬೆಡ್ ರೂಮಲ್ಲಿ ಡಬಲ್ ಕಾಟ್ ಇದೆ ಮತ್ತು ಹೊದ್ದುಕೊಳ್ಳಳು ಅವರು ರಜಾಯಿ ಬಳಸುತ್ತಿದ್ದರು ಅನಿಸುತ್ತೆ. ಫರ್ನಿಚರ್ ಗಳನ್ನು ಒಪ್ಪವಾಗಿ ಜೋಡಿಸಲಾಗಿದೆ, ಸರೋಜಾದೇವಿಯವರ ಅನುಪಸ್ಥಿತಿಯಲ್ಲಿ ಕೃಷ್ಪ್ಪಪ್ಪ ಎನ್ನುವವರು ಮನೆಯನ್ನು ನೋಡಿಕೊಳ್ಳುತ್ತಿದ್ದರಂತೆ.
ಬೆಂಗಳೂರು ದಕ್ಷಿಣ, ಜುಲೈ 15: ಚನ್ನಪಟ್ಟಣ ತಾಲೂಕಿನ ದಶವಾರ ಪುಟ್ಟ ಊರಾದರೂ ಅಗಲಿದ ಬಹುಭಾಷಾ ನಟಿ ಬಿ ಸರೋಜಾ ದೇವಿಯವರ (B Saroja Devi) ಹುಟ್ಟೂರಾಗಿರುವ ಕಾರಣಕ್ಕೆ ಸುದ್ದಿಯಲ್ಲಿದೆ. ಸರೋಜಾದೇವಿಯರು ಕಟ್ಟಿದ ಮತ್ತು ಆಗಾಗ್ಗೆ ಬಂದು ವಾಸವಾಗಿದ್ದ ಮನೆ ಇದು. ಹಳೆಯ ಕಾಲದ ಮನೆಯೆನಿಸಿದರೂ ಸುಂದರವಾಗಿದೆ, ಚೊಕ್ಕವಾಗಿದೆ. ಹಾಲ್ನಲ್ಲಿ ಸರೋಜಾದೇವಿ ಅವರು ತಮ್ಮ ಪತಿಯೊಂದಿಗೆ, ಆಗಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರೊಂದಿಗಿರುವ ಚಿತ್ರಗಳು, ಅವರ ತಂದೆತಾಯಿಯವರ ಫೋಟೋಗಳಿವೆ. ದೇವರ ಕೋಣೆ ವಿಶಾಲವಾಗಿರುವ ಕಾರಣ ಅಲ್ಲಿ ಬೇರೆ ಸಾಮಾನುಗಳನ್ನು ಇಡಲು ಬಳಸಲಾಗಿದೆ. ಕಿಚನ್ಗೆ ಹೊಂದಿಕೊಂಡಂತೆ ವಿಶಾಲವಾದ ಡೈನಿಂಗ್ ಹಾಲ್ ಇದೆ.
ಇದನ್ನೂ ಓದಿ: ನಟಿ ಬಿ. ಸರೋಜಾದೇವಿ ನಿಧನ: ನಾರಾಯಣ ನೇತ್ರಾಲಯಕ್ಕೆ ಕಣ್ಣುಗಳ ದಾನ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos

ಸ್ಕೂಟಿಗೆ ಡಿಕ್ಕಿ ಹೊಡೆದ ಹಂದಿಗಳ ಹಿಂಡು; ಮಹಿಳೆಯ ಹೆಲ್ಮೆಟ್ ಛಿದ್ರ!

ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?

ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್

ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
