B Saroja Devi Passes Away: ಸ್ವಗ್ರಾಮ ದಶವಾರದಲ್ಲಿ ಇಂದು ಅಭಿನಯ ಸರಸ್ವತಿಯ ಅಂತಿಮ ಸಂಸ್ಕಾರ
ಬೆಂಗಳೂರು ಮಲ್ಲೇಶ್ವರಂನಿಂದ ಸರೋಜಾದೇವಿಯವರ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ಆಗಮಿಸಿದ ಬಳಿಕ ಅದನ್ನು ಹೂವಿನ ಪಲ್ಲಕ್ಕಿಯಲ್ಲಿ ತೋಟಕ್ಕೆ ಸಾಗಿಸುವ ಮೊದಲು ಗ್ರಾಮಸ್ಥರ ಅಂತಿಮ ದರ್ಶನಕ್ಕಾಗಿ ಸ್ವಲ್ಪ ಹೊತ್ತು ಮನೆಮುಂದೆ ಇಡಲಾಗುತ್ತದೆ ಎಂದು ಕೃಷ್ಣಪ್ಪ ಹೇಳುತ್ತಾರೆ. ಸಂಪ್ರದಾಯದಂತೆ ಡೊಳ್ಳು, ತಮ್ಮಟೆ ಬಾರಿಸುತ್ತ ದೇಹವನ್ನು ತೋಟಕ್ಕೆ ತಂದು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಅವರು ಹೇಳುತ್ತಾರೆ.
ಬೆಂಗಳೂರು ದಕ್ಷಿಣ ಜುಲೈ 15: ನಿನ್ನೆ ವಿಧಿವಶರಾದ ಹಿರಿಯ ನಟಿ ಬಿ ಸರೋಜಾದೇವಿ (B Saroja Devi) ಅವರ ಅಂತಿಮ ಸಂಸ್ಕಾರ ಒಕ್ಕಲಿಗ ಸಂಪ್ರದಾಯದಂತೆ ನಡೆಯಲಿದ್ದು ಅಗಲಿದ ನಟಿಯ ತಾಯಿಯ ಸಮಾಧಿ ಪಕ್ಕದಲ್ಲೇ ದಫನ್ ಮಾಡಲಾಗುತ್ತದೆ. ಚನ್ನಪಟ್ಟಣ ತಾಲೂಕಿನ ದಶವಾರ ಸರೋಜಾದೇವಿಯವರ ಹುಟ್ಟೂರು, ಇಲ್ಲೇ ಅವರು ಮನೆ ಮತ್ತು ತೋಟವನ್ನು ಹೊಂದಿದ್ದಾರೆ. ಅವರ ಮನೆ ನೋಡಿಕೊಳ್ಳುವ ಕೃಷ್ಣಪ್ಪನೊಂದಿಗೆ ನಮ್ಮ ಮಂಡ್ಯ ವರದಿಗಾರ ಮಾತಾಡಿದ್ದು, ಅವರು ಹೇಳುವ ಪ್ರಕಾರ ಒಕ್ಕಲಿಗ ಸಮುದಾಯದಲ್ಲಿ ಮೃತದೇಹಗಳನ್ನು ಹೂತಿಡುವ ಮತ್ತು ಸುಡುವ-ಎರಡೂ ಸಂಪ್ರದಾಯಗಳು ಜಾರಿಯಲ್ಲಿವೆ, ಸರೋಜಾದೇವಿಯವರು ತಮ್ಮ ದೇಹವನ್ನು ಹೂತಿಡಬೇಕೆಂದು ಹೇಳಿದ್ದರಿಂದ ಅವರ ಇಚ್ಛೆಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.
ಇದನ್ನೂ ಓದಿ: ನಟಿ ಬಿ. ಸರೋಜಾದೇವಿ ಬರೆದಿದ್ದ ವಿಲ್ಗೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸಹಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ