AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುರ್ಜೇವಾಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಗೊತ್ತಿಲ್ಲವೆಂದ ಮಾಜಿ ಸಂಸದ ಡಿಕೆ ಸುರೇಶ್

ಸುರ್ಜೇವಾಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಗೊತ್ತಿಲ್ಲವೆಂದ ಮಾಜಿ ಸಂಸದ ಡಿಕೆ ಸುರೇಶ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 26, 2025 | 12:56 PM

Share

ನಿನ್ನೆ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ನನಗೆ ಗೊತ್ತಿಲ್ಲ, ರಾಜಣ್ಣನವರನ್ನೇ ಕೇಳಿ ಅಂತ ಹೇಳಿದ್ದರು. ಇವರ್ಯಾರಿಗೂ ಗೊತ್ತಿರದ ವಿಷಯ ರಾಜಣ್ಣ ಅವರೊಬ್ಬರಿಗೆ ಮಾತ್ರ ಹೇಗೆ ಗೊತ್ತಾಯಿತು ಅನ್ನೋದು ಕನ್ನಡಿಗರ ಪ್ರಶ್ನೆ. ಇದು ಬಹಳ ದೊಡ್ಡ ಪ್ರಮಾದ. ಸುರ್ಜೇವಾಲಾ ರಾಜ್ಯದ ಅಧಿಕಾರಿಗಳಿಗೆ ಯಾರೆಂದರೆ ಯಾರೂ ಅಲ್ಲ, ಅವರು ಹೇಗೆ ಸಭೆ ನಡೆಸುತ್ತಾರೆ?

ಬೆಂಗಳೂರು, ಜುಲೈ 26: ಎಐಸಿಸಿ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೇವಾಲಾ (Randeep Surjewala) ಬೆಂಗಳೂರಿಗೆ ಬಂದಾಗ ಸರ್ಕಾರೀ ಅಧಿಕಾರಿಗಳೊಂದಿಗೆ ಸಭೆ ನಡೆಸಿದರೆಂದು ಸಹಕಾರ ಸಚಿವ ಕೆಎನ್ ರಾಜಣ್ಣ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿರುವುದು ದೊಡ್ಡಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಕಾಂಗ್ರೆಸ್ ನಾಯಕರಿಗೆ ಈ ಪ್ರಶ್ನೆ ಕೇಳಿದಾಗ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಮಾಜಿ ಸಂಸದ ಡಿಕೆ ಸುರೇಶ್ ಸಹ ಅದನ್ನೇ ಮಾಡಿದರು. ರಾಜಣ್ಣ ಅವರಾದರೋ ಹಿರಿಯ ಸಚಿವ, ನಾನು ಒಬ್ಬ ಸಣ್ಣ ಕಾರ್ಯಕರ್ತ, ರಾಜ್ಯದ ಎಲ್ಲ ವಿದ್ಯಮಾನಗಳ ಬಗ್ಗೆ ಅವರಿಗೆ ಮಾಹಿತಿ ಇರುತ್ತದೆ, ಪ್ರಶ್ನೆಯನ್ನು ಅವರಿಗೆ ಕೇಳುವುದೇ ಒಳಿತು ಎಂದು ಸುರೇಶ್ ಹೇಳಿದರು.

ಇದನ್ನೂ ಓದಿ:   ಐಶ್ವರ್ಯ ಗೌಡ ವಂಚನೆ ಪ್ರಕರಣ ಮತ್ತು ಡಿಕೆ ಸುರೇಶ್ ನಡುವೆ ಯಾವುದೇ ಸಂಬಂಧವಿಲ್ಲ: ಡಿಕೆ ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ