ಜಪಾನ್ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
ಬನ್ನೇರುಘಟ್ಟ ಜೈವಿಕ ಉದ್ಯಾನದ ನಾಲ್ಕು ಆನೆಗಳು ಯಶಸ್ವಿಯಾಗಿ ಜಪಾನ್‌ಗೆ ಸ್ಥಳಾಂತರಗೊಂಡಿವೆ. ಕತಾರ್ ಏರ್‌ವೇಸ್ ಸರಕು ವಿಮಾನದ ಮೂಲಕ ಬೆಂಗಳೂರಿನಿಂದ ಓಸಾಕಾಕ್ಕೆ ರವಾನೆಯಾದ ಆನೆಗಳು, ನಂತರ ಹಿಮೇಜಿ ಸೆಂಟ್ರಲ್ ಪಾರ್ಕ್‌ಗೆ ತಲುಪಿವೆ. ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಿರುವ ಆನೆಗಳು ಈಗ ಸ್ವಚ್ಛಂದವಾಗಿ ಓಡಾಡುತ್ತಿವೆ. ವಿಡಿಯೋ ನೋಡಿ.
ಬೆಂಗಳೂರು, ಜುಲೈ 26: ಬನ್ನೇರುಘಟ್ಟ ಆನೆಗಳು (Elephants) ಯಶಸ್ವಿಯಾಗಿ ಜಪಾನ್‌ಗೆ ಹೋಗಿ ತಲುಪಿವೆ. ಶುಕ್ರವಾರದಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕತಾರ್ ಏರ್‌ವೇಸ್
ಸರಕು ಸಾಗಾಣೆ ವಿಮಾನದ ಮೂಲಕ ಜಪಾನ್‌ಗೆ ರವಾನಿಸಲಾಗಿತ್ತು. ಸುರೇಶ್ (8), ಗೌರಿ (9), ಶ್ರುತಿ(7) ಮತ್ತು ತುಳಸಿ (5) ಜಪಾನ್‌ಗೆ ತೆರಳಿದ ಆನೆಗಳು. ಸದ್ಯ ಜಪಾನ್ ತಲುಪಿರುವ ಬನ್ನೇರುಘಟ್ಟ ಆನೆಗಳು ಕೇಜ್ನಿಂದ ಹೊರಬಂದು ಹೊಸ ವಾತಾವರಣದಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿವೆ. ಆನೆಗಳ ಜೊತೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿಗಳು ಜಪಾನ್‌ಗೆ ಹೋಗಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jul 26, 2025 01:09 PM
Latest Videos
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
