ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ
ಶ್ರಾವಣ ಮಾಸದ ಶನಿವಾರಗಳಿಗೆ ವಿಶೇಷ ಮಹತ್ವವಿದೆ. ಈ ದಿನ ಮಕ್ಕಳು ಗೋವಿಂದ ಗೋವಿಂದ ಎಂದು ಹಾಡುತ್ತಾ ಮನೆ ಮನೆಗೆ ತೆರಳಿ ಪಡಿ ಬೇಡುವುದು ಒಂದು ಸಂಪ್ರದಾಯ. ಇದರಿಂದ ಮಕ್ಕಳಲ್ಲಿ ದಾನ ಗುಣ ಮತ್ತು ಆಧ್ಯಾತ್ಮಿಕ ಶಕ್ತಿ ಬೆಳೆಯುತ್ತದೆ ಎಂದು ನಂಬಲಾಗಿದೆ. ಈ ಪದ್ದತಿಯು ಭಾರತೀಯ ಸನಾತನ ಸಂಸ್ಕೃತಿಯ ಭಾಗವಾಗಿದೆ.
ಬೆಂಗಳೂರು, ಜುಲೈ 26: ಶ್ರಾವಣ ಮಾಸದ ಶನಿವಾರಗಳು ಹಿಂದೂ ಧರ್ಮದಲ್ಲಿ ವಿಶೇಷ ಪವಿತ್ರ ದಿನಗಳಾಗಿವೆ. ಈ ದಿನ ಶನಿ ದೇವರಿಗೆ ಅರ್ಪಿತವಾದ್ದರಿಂದ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ, ಮಕ್ಕಳು ಪಡಿ ಬೇಡುವ ಸಂಪ್ರದಾಯವಿದೆ. ಚಿಕ್ಕ ಮಕ್ಕಳು ಗೋವಿಂದ ಗೋವಿಂದ ಎಂದು ಹಾಡುತ್ತಾ ಮನೆ ಮನೆಗೆ ತೆರಳಿ ಅಕ್ಕಿ, ಬೇಳೆ, ಬೆಲ್ಲ ಮುಂತಾದ ದಾನವನ್ನು ಪಡೆಯುತ್ತಾರೆ. ಈ ಪದ್ದತಿಯು ಮಕ್ಕಳಲ್ಲಿ ದಾನಶೀಲತೆ, ಸಂಯಮ ಮತ್ತು ಆಧ್ಯಾತ್ಮಿಕತೆಯನ್ನು ಬೆಳೆಸುತ್ತದೆ. ಶ್ರಾವಣ ಶನಿವಾರದ ದಿನ ತಿರುಪತಿ ವೆಂಕಟೇಶ್ವರ ಅಥವಾ ಇತರ ದೇವರಿಗೆ ಈ ಕಾಣಿಕೆಗಳನ್ನು ಅರ್ಪಿಸುವುದು ಸಹ ಒಂದು ರೂಢಿಯಾಗಿದೆ. ಈ ಸಂಪ್ರದಾಯವು ಭಾರತೀಯ ಸನಾತನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ.
Latest Videos

