AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಟೀಮ್ ಇಂಡಿಯಾ ದೊಡ್ಡ ಎಡವಟ್ಟು: ಮೈದಾನದಲ್ಲೇ ಜಡೇಜಾ ಆಕ್ರೋಶ

VIDEO: ಟೀಮ್ ಇಂಡಿಯಾ ದೊಡ್ಡ ಎಡವಟ್ಟು: ಮೈದಾನದಲ್ಲೇ ಜಡೇಜಾ ಆಕ್ರೋಶ

ಝಾಹಿರ್ ಯೂಸುಫ್
|

Updated on: Jul 26, 2025 | 7:52 AM

Share

IND vs ENG: ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ 358 ರನ್​ಗಳಿಸಿ ಆಲೌಟ್ ಆಗಿದ್ದರು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಇಂಗ್ಲೆಂಡ್ ಪರ ಜೋ ರೂಟ್ 248 ಎಸೆತಗಳಲ್ಲಿ 150 ರನ್ ಕಲೆಹಾಕಿದರು. ಈ ಮೂಲಕ ಇಂಗ್ಲೆಂಡ್ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 544 ರನ್ ಕಲೆಹಾಕಿದೆ. 

ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಭರ್ಜರಿ ಶತಕ ಬಾರಿಸಿದ್ದಾರೆ. ಈ ಶತಕದೊಂದಿಗೆ 150 ರನ್​ ಕಲೆಹಾಕಿರುವ ರೂಟ್ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ ಬೃಹತ್ ಮೊತ್ತ ಪೇರಿಸಲು ಕಾರಣರಾಗಿದ್ದಾರೆ. ಆದರೆ ಇದೇ ರೂಟ್ 22 ರನ್​ಗಳಿಸಿದ್ದ ವೇಳೆ ಪೆವಿಲಿಯನ್​ ಸೇರಬೇಕಿತ್ತು. 54ನೇ ಓವರ್​ನಲ್ಲಿ ಟೀಮ್ ಇಂಡಿಯಾ ಫೀಲ್ಡರ್​ಗಳು ಮಾಡಿದ ಎಡವಟ್ಟಿನಿಂದಾಗಿ ಅವರು ಮೂರಂಕಿ ರನ್​ ಗಳಿಸುವಂತಾಯಿತು.

ಹೌದು, ಮೊಹಮ್ಮದ್ ಸಿರಾಜ್ ಎಸೆದ ಪಂದ್ಯದ 54ನೇ ಓವರ್​ನ 5ನೇ ಎಸೆತದಲ್ಲಿ ಜೋ ರೂಟ್ ಗಲ್ಲಿಯ ದಿಕ್ಕಿನಲ್ಲಿ ಆಡಿದರು. ಚೆಂಡು ಗಲ್ಲಿಯಲ್ಲಿ ನಿಂತಿದ್ದ ಫೀಲ್ಡರ್‌ನ ಕೈಗೆ ತಗುಲಿ ರವೀಂದ್ರ ಜಡೇಜಾರತ್ತ ಸಾಗಿತು. ತಕ್ಷಣವೇ ಚೆಂಡನ್ನು ಎತ್ತಿಕೊಂಡ ಜಡೇಜಾ ನಾನ್ ಸ್ಟ್ರೈಕ್​ ಸ್ಟಂಪ್‌ನತ್ತ ಎಸೆದರು.

ಅತ್ತ ಯಾವುದಾದರೂ ಫೀಲ್ಡರ್ ಚೆಂಡು ಹಿಡಿದು ವಿಕೆಟ್​ಗೆ ತಾಗಿಸಿದ್ದರೆ ಜೋ ರೂಟ್ ರನೌಟ್ ಆಗುತ್ತಿದ್ದರು. ಏಕೆಂದರೆ ರನ್​ ಓಡಬೇಕಾದ ಬೇಡವಾ ಎಂಬ ಗೊಂದಲದೊಂದಿಗೆ ರೂಟ್ ಕ್ರೀಸ್ ಬಿಟ್ಟಿದ್ದರು. ಆದರೆ ಜಡೇಜಾ ಎಸೆದ ಥ್ರೋವನ್ನು ಹಿಡಿಯಲು ವಿಕೆಟ್ ಬಳಿ ಟೀಮ್ ಇಂಡಿಯಾದ ಯಾವುದೇ ಫೀಲ್ಡರ್ ಬರಲಿಲ್ಲ.

ಇತ್ತ ಯಾರು ಸಹ ವಿಕೆಟ್ ಕವರ್ ಮಾಡಿರುವುದರಿಂದ ಜೋ ರೂಟ್ ರನೌಟ್​ನಿಂದ ಬಚಾವಾದರು. ಅತ್ತ ಯಾವುದೇ ಫೀಲ್ಡರ್ ವಿಕೆಟ್ ಕವರ್ ಆಗದೇ ಇರುವುದಕ್ಕೆ ರವೀಂದ್ರ ಜಡೇಜಾ ಆಕ್ರೋಶ ಹೊರಹಾಕಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ 358 ರನ್​ಗಳಿಸಿ ಆಲೌಟ್ ಆಗಿದ್ದರು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಇಂಗ್ಲೆಂಡ್ ಪರ ಜೋ ರೂಟ್ 248 ಎಸೆತಗಳಲ್ಲಿ 150 ರನ್ ಕಲೆಹಾಕಿದರು. ಈ ಮೂಲಕ ಇಂಗ್ಲೆಂಡ್ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 544 ರನ್ ಕಲೆಹಾಕಿದೆ.