AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಕೈಯಲ್ಲಿ ಹಣವಿಲ್ಲವೆಂದು ಚಿಂತಿಸುತ್ತಿದ್ದೀರಾ? ದೇವಿ ಲಕ್ಷ್ಮಿಯನ್ನು ಮೆಚ್ಚಿಸಲು ಈ 3 ಮಾರ್ಗಗಳನ್ನು ತಿಳಿದುಕೊಳ್ಳಿ – ಚಾಣಕ್ಯ ನೀತಿ

ಚಾಣಕ್ಯ ನೀತಿ: ಸಂಪತ್ತನ್ನು ಸಂಪಾದಿಸಬೇಕು ಅಂದಾದಾಗ ಮನೆಗೆ ಲಕ್ಷ್ಮಿ ದೇವಿಯ ಕೃಪೆ ಇರಬೇಕು. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದುಕೊಳ್ಳಬೇಕು ಅಂದಾದರೆ ಏನು ಮಾಡಬೇಕು ಎಂಬುದರ ಕುರಿತಾಗಿ ಆಚಾರ್ಯ ಚಾಣಕ್ಯರು ವಿವರಿಸಿದ್ದಾರೆ.

Chanakya Niti: ಕೈಯಲ್ಲಿ ಹಣವಿಲ್ಲವೆಂದು ಚಿಂತಿಸುತ್ತಿದ್ದೀರಾ? ದೇವಿ ಲಕ್ಷ್ಮಿಯನ್ನು ಮೆಚ್ಚಿಸಲು ಈ 3 ಮಾರ್ಗಗಳನ್ನು ತಿಳಿದುಕೊಳ್ಳಿ - ಚಾಣಕ್ಯ ನೀತಿ
ಚಾಣಕ್ಯ ನೀತಿ
TV9 Web
| Updated By: Skanda|

Updated on: Jul 17, 2021 | 9:15 AM

Share

ಆಚಾರ್ಯ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ಹಣದ ಉಪಯುಕ್ತತೆ ಬಗ್ಗೆ ವಿವರಿಸುವಾಗ ಹಣವನ್ನು ಸ್ನೇಹಿತ ಎಂದು ಕರೆದಿದ್ದಾರೆ. ಜತೆಗೆ ಅದರ ಉಪಯೋಗದ ಬಗ್ಗೆಯೂ ವಿವರಿಸಿದ್ದಾರೆ. ಕಷ್ಟದ ಸಮಯದಲ್ಲಿ ಯಾರೂ ಸಹ ನಿಮ್ಮನ್ನು ಬೆಂಬಲಿಸುವುದಿಲ್ಲ. ಆದರೆ ಹಣನೆಂಬ ಸ್ನೇಹಿತ ನಿಮ್ಮ ಕೈಹಿಡಿಯುತ್ತಾನೆ ಎಂದು ಹೇಳಿದ್ದಾರೆ. ಅದಕ್ಕಾಗಿಯೇ ಪ್ರತಿಯೊಬ್ಬರೂ ಸಂಪತ್ತನ್ನು ಗೌರವಿಸಬೇಕು ಮತ್ತು ಸಂಪತ್ತನ್ನು ಸಂಗ್ರಹಿಸಬೇಕು. ಆದರೆ ಸಂಪತ್ತನ್ನು ಸಂಪಾದಿಸಬೇಕು ಅಂದಾದಾಗ ಮನೆಗೆ ಲಕ್ಷ್ಮಿ ದೇವಿಯ ಕೃಪೆ ಇರಬೇಕು. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದುಕೊಳ್ಳಬೇಕು ಅಂದಾದರೆ ಏನು ಮಾಡಬೇಕು ಎಂಬುದರ ಕುರಿತಾಗಿ ಆಚಾರ್ಯ ಚಾಣಕ್ಯರು ವಿವರಿಸಿದ್ದಾರೆ.

ಸ್ವಚ್ಛತೆ ಲಕ್ಷ್ಮಿ ದೇವಿ ನಿಮಗೆ ಆಶಿರ್ವದಿಸಬೇಕು ಅಂದಾದರೆ ಮನೆಯಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನವಹಿಸಿ. ಮನೆಯಲ್ಲಿ ಶಾಂತಿಯುತ ವಾತಾವರಣವಿರಬೇಕು. ಎಲ್ಲಿ ಅಶಾಂತಿ ನೆಲೆಸಿದೆಯೋ ಅಲ್ಲಿ ಲಕ್ಷ್ಮಿ ದೇವಿ ಪ್ರವೇಶಿಸಲು ಹಿಂದೇಟು ಹಾಕುತ್ತಾಳೆ. ಕುಟುಂಬ ಸದಸ್ಯರ ನಡುವೆ ಪ್ರೀತಿ ಇರುವ ಮನೆಯಲ್ಲಿ ಗಂಡ ಮತ್ತು ಹೆಂಡತಿ ಪ್ರೀತಿ ಸಹಬಾಳ್ವೆಯಿಂದ ಬದುಕುತ್ತಾರೆ. ತಾಯಿ ಲಕ್ಷ್ಮಿಯ ಆಶೀರ್ವಾದ ಸದಾ ಕಾಲ ಆ ಮನೆಯಲ್ಲಿ ಉಳಿಯುತ್ತದೆ.

ಒಳ್ಳೆಯ ಮಾತು ಮಾತಿನಲ್ಲಿ ಮಾಧುರ್ಯವಿಲ್ಲದವರು ಕಹಿ ಮಾತುಗಳನ್ನು ಆಡುತ್ತಾರೆ. ತಾಯಿ ಲಕ್ಷ್ಮಿ ಅವರನ್ನು ಎಂದಿಗೂ ಮೆಚ್ಚುವುದಿಲ್ಲ. ಕೆಟ್ಟ ಪದಗಳನ್ನು ಮಾತನಾಡುವ ವ್ಯಕ್ತಿಯು ಎಂದಿಗೂ ಸಮಸ್ಯೆಗೆ ಸಿಲುಕುತ್ತಾರೆ. ನೀವು ವಿನಯದಿಂದ ಮಾತನಾಡುವುದರ ಮೂಲಕ ಇತರರ ಹೃದಯ ಗೆಲ್ಲಬಹುದು. ನೀವು ಜನರೊಂದಿಗೆ ಹೊಂದಿಕೊಂಡು ನಡೆಯಬಹುದು. ಪ್ರೀತಿ ವಿಶ್ವಾಸದ ಜತೆಗೆ ಗೌರವವನ್ನು ಗಳಿಸಬಹುದು. ಆಗ ನಿಮ್ಮ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ.

ದಾನ-ಧರ್ಮ ಸಮಾಜದಲ್ಲಿ ವ್ಯಕ್ತಿ ಯಾವ ರೀತಿ ನಡೆದುಕೊಳ್ಳುತ್ತಾನೋ ಅದೇ ಆತನಿಗೆ ಸಿಗುತ್ತದೆ ಎಂಬ ತತ್ವವಿದೆ. ಧರ್ಮಗ್ರಂಥಗಳಿಗೆ ಮತ್ತು ದಾನ-ಧರ್ಮಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ. ಪ್ರೀತಿಯ ಮಾತು, ಸಹಾಯ, ಸೌಮ್ಯ ಗುಣ, ಸ್ನೇಹ, ದಾನ, ಸದ್ಗುಣ ಮುಂತಾದ ವಿಷಯಗಳನ್ನು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಇದರಿಂದ ನೀವು ಜೀವನದಲ್ಲಿ ಯಶಸ್ಸು ಕಾಣಬಹುದಾಗಿದೆ. ದಾನ ಮಾಡುವ ವ್ಯಕ್ತಿಗೆ ತಾಯಿ ಲಕ್ಷ್ಮಿ ಆಶೀರ್ವದಿಸುತ್ತಾಳೆ. ಮತ್ತೊಂದೆಡೆ, ಶ್ರೀಮಂತಿಕೆಯಿದ್ದರೂ ಸಹ ದಾನ-ಧರ್ಮ ಮಾಡದ ವ್ಯಕ್ತಿಗಳ ಮೇಲೆ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳೆ. ಇದರಿಂದ ವ್ಯಕ್ತಿಯ ಜೀವನ ಎಂದಿಗೂ ಸಂತೋಷವಾಗಿರುವುದಿಲ್ಲ.

ಇದನ್ನೂ ಓದಿ:

Chanakya Niti: ಗಂಡ-ಹೆಂಡತಿ ಬಾಂಧವ್ಯದಲ್ಲಿ ಈ ಕೊರತೆಗಳು ಸಂಬಂಧವನ್ನು ಹದಗೆಡಿಸುತ್ತವೆ – ಚಾಣಕ್ಯ ನೀತಿ

Chanakya Niti: ಮಕ್ಕಳ ಈ ಕೆಲವು ಅಭ್ಯಾಸಗಳನ್ನು ನಿರ್ಲಕ್ಷಿಸುವುದು ಭವಿಷ್ಯವನ್ನೇ ಕಿತ್ತುಕೊಳ್ಳಬಹುದು – ಚಾಣಕ್ಯ ನೀತಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ