AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beauty Tips: ಹಳದಿ ಹಲ್ಲುಗಳಿಂದಾಗಿ ನಗಲು ಮುಜುಗರ ಪಡುತ್ತಿದ್ದೀರಾ?-ಈ ಸರಳ ವಿಧಾನಗಳ ಮೂಲಕ ಪಡೆಯಿರಿ ಬಿಳಿ ಹಲ್ಲು

ನಮ್ಮ ನಗು (Smile)ವಿಗೆ ಇನ್ನಷ್ಟು ಮೆರುಗು ತಂದುಕೊಡುವುದೆಂದರೆ ನಮ್ಮ ಹಲ್ಲುಗಳು. ಅಂದರೆ ಯಾರೇ ಆಗಲಿ ನಕ್ಕಾಗ ಸಹಜವಾಗಿಯೇ ಚೆನ್ನಾಗಿ ಕಾಣುತ್ತಾರೆ..ಹಾಗೇ ಅವರ ಮುಂಭಾಗದ ಹಲ್ಲುಗಳೂ ಕಾಣಿಸುತ್ತಿವೆ. ನಮ್ಮ ಹಲ್ಲುಗಳು ಹಳದಿಗಟ್ಟಿದ್ದರೆ, ಮುಂಭಾಗ ಕೆಟ್ಟಿದ್ದರೆ ಬಾಯ್ಬಿಟ್ಟು ನಗಲು ಮುಜುಗರ ಅನುಭವಿಸಬೇಕಾಗುತ್ತದೆ. ಈ ಸಮಸ್ಯೆಯಿದ್ದವರು ಅನೇಕರು, ಸಾರ್ವಜನಿಕವಾಗಿ ದೊಡ್ಡದಾಗಿ ನಗಲು ಹಿಂದೇಟು ಹಾಕುವುದನ್ನೂ ನಾವು ಕಾಣುತ್ತೇವೆ. ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಬೇಕು..ಅದರೊಟ್ಟಿಗೆ ಅವು ಬೆಳ್ಳಗೆ ಕಾಣಿಸುವಂತೆ ನೋಡಿಕೊಳ್ಳಬೇಕು. ಕೆಲವರು ಎಷ್ಟೇ ಉಜ್ಜಿದರೂ ಅವರ ಹಲ್ಲು(Teeth)ಗಳು ಬೆಳ್ಳಗಾಗುವುದಿಲ್ಲ. ಹಾಗೊಮ್ಮೆ ನಿಮ್ಮ ಹಲ್ಲುಗಳೂ ಹಳದಿಯಾಗಿದ್ದರೆ, […]

Beauty Tips: ಹಳದಿ ಹಲ್ಲುಗಳಿಂದಾಗಿ ನಗಲು ಮುಜುಗರ ಪಡುತ್ತಿದ್ದೀರಾ?-ಈ ಸರಳ ವಿಧಾನಗಳ ಮೂಲಕ ಪಡೆಯಿರಿ ಬಿಳಿ ಹಲ್ಲು
ಸಾಂಕೇತಿಕ ಚಿತ್ರ
TV9 Web
| Edited By: |

Updated on: Jul 27, 2021 | 6:59 PM

Share

ನಮ್ಮ ನಗು (Smile)ವಿಗೆ ಇನ್ನಷ್ಟು ಮೆರುಗು ತಂದುಕೊಡುವುದೆಂದರೆ ನಮ್ಮ ಹಲ್ಲುಗಳು. ಅಂದರೆ ಯಾರೇ ಆಗಲಿ ನಕ್ಕಾಗ ಸಹಜವಾಗಿಯೇ ಚೆನ್ನಾಗಿ ಕಾಣುತ್ತಾರೆ..ಹಾಗೇ ಅವರ ಮುಂಭಾಗದ ಹಲ್ಲುಗಳೂ ಕಾಣಿಸುತ್ತಿವೆ. ನಮ್ಮ ಹಲ್ಲುಗಳು ಹಳದಿಗಟ್ಟಿದ್ದರೆ, ಮುಂಭಾಗ ಕೆಟ್ಟಿದ್ದರೆ ಬಾಯ್ಬಿಟ್ಟು ನಗಲು ಮುಜುಗರ ಅನುಭವಿಸಬೇಕಾಗುತ್ತದೆ. ಈ ಸಮಸ್ಯೆಯಿದ್ದವರು ಅನೇಕರು, ಸಾರ್ವಜನಿಕವಾಗಿ ದೊಡ್ಡದಾಗಿ ನಗಲು ಹಿಂದೇಟು ಹಾಕುವುದನ್ನೂ ನಾವು ಕಾಣುತ್ತೇವೆ. ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಬೇಕು..ಅದರೊಟ್ಟಿಗೆ ಅವು ಬೆಳ್ಳಗೆ ಕಾಣಿಸುವಂತೆ ನೋಡಿಕೊಳ್ಳಬೇಕು. ಕೆಲವರು ಎಷ್ಟೇ ಉಜ್ಜಿದರೂ ಅವರ ಹಲ್ಲು(Teeth)ಗಳು ಬೆಳ್ಳಗಾಗುವುದಿಲ್ಲ.

ಹಾಗೊಮ್ಮೆ ನಿಮ್ಮ ಹಲ್ಲುಗಳೂ ಹಳದಿಯಾಗಿದ್ದರೆ, ನಾವಿಲ್ಲಿ ಕೆಲವು ಮನೆ ಮದ್ದುಗಳನ್ನು ಹೇಳಿದ್ದೇವೆ ನೋಡಿ..ಟ್ರೈ ಮಾಡಿ.

1. ಅಡುಗೆ ಸೋಡ (Baking Soda) ಅಡುಗೆ ಸೋಡಾ ಅಥವಾ ಬೈಕಾರ್ಬೋನೇಟ್​ ಸೋಡಾ ಬಳಸಿ ಹಲ್ಲುಜ್ಜಿದರೆ ಹಲ್ಲುಗಳು ಬೆಳ್ಳಗಾಗುತ್ತವೆ. ಇದು ಹಲ್ಲುಗಳನ್ನು ಸ್ವಲ್ಪ ಒರಟಾಗಿ ಉಜ್ಜುವುದರಿಂದ ಕಲೆಯನ್ನು ತೆಗೆಯಬಲ್ಲದು. ಸ್ವಲ್ಪ ಅಡುಗೆ ಸೋಡಾ ತೆಗೆದುಕೊಂಡು ಒಂದೆರಡು ನಿಮಿಷ ನಿಧಾನಕ್ಕೆ ಹಲ್ಲಿನ ಮೇಲೆ ಹಾಕಿ ತಿಕ್ಕಿ..ನಂತರ ನೀರಿನಿಂದ ತೊಳೆಯಿರಿ. ಅದರಲ್ಲೂ ಅಡುಗೆ ಸೋಡಾದೊಂದಿಗೆ ಒಂದು ಹನಿ ಲಿಂಬೆ ರಸ ಸೇರಿಸಿಕೊಂಡರೆ ಇನ್ನಷ್ಟು ಪರಿಣಾಮಕಾರಿಯಾಗಿರುತ್ತದೆ. ಯಾಕೆಂದರೆ ಲಿಂಬು ರಸ ಕೂಡ ಬ್ಲೀಚ್​ ಮಾಡುವ ಪದಾರ್ಥವೇ ಆಗಿದೆ.

2. ಕಿತ್ತಳೆ ಸಿಪ್ಪೆ ಮನೆಯಲ್ಲಿ ಕಿತ್ತಳೆ ಹಣ್ಣು ತಂದಾಗ ಅದರ ಸಿಪ್ಪೆಯನ್ನು ಎಸೆಯಬೇಡಿ. ಅದರ ಸಿಪ್ಪೆಯ ಒಳಭಾಗ ಅಂದರೆ ಬಿಳಿಬಣ್ಣ ಇರುವ ಭಾಗದಿಂದ ಹಲ್ಲುಜ್ಜಿದರೆ ಹಳದಿ ಬಣ್ಣ ಹೋಗುತ್ತದೆ. ಕಿತ್ತಳೆ ಸಿಪ್ಪೆಯಲ್ಲಿ ಬಿಳಿಬಣ್ಣವಿರುವ ಭಾಗದಲ್ಲಿ ಇರುವ ಡಿ-ಲಿಮೋನಿನ್​ ಅಂಶ ಹಲ್ಲನ್ನು ಬೆಳ್ಳಗಾಗಿಸಲು ತುಂಬ ಸಹಕಾರಿ. ಹಾಗೇ ಲಿಂಬು ಸಿಪ್ಪೆಯನ್ನೂ ಬಳಕೆ ಮಾಡಬಹುದಾಗಿದೆ.

3. ಅರಿಶಿಣ ಹಲ್ಲಿನ ಹಳದಿ ಬಣ್ಣವನ್ನು ಹಳದಿ(ಅರಿಶಿಣ)ಯಿಂದಲೇ ತೆಗೆಯಿರಿ. ಅರಿಶಿಣದಲ್ಲಿ ಬ್ಲೀಚ್​ ಮಾಡುವ ಅಂಶಗಳಿರುತ್ತವೆ. ಇದು ನೈಸರ್ಗಿಕ ನಂಜು ನಿರೋಧಕವಾಗಿದ್ದು, ಇದರಿಂದ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲುಗಳ ಜತೆ ಒಸಡಿನ ಆರೋಗ್ಯವೂ ಉತ್ತಮವಾಗಿ ಇರುತ್ತದೆ. ಅದರಲ್ಲೂ ಅರಿಶಿಣ ಪುಡಿಯನ್ನು ಬಳಸುವುದಕ್ಕಿಂತ ಅರಿಶಿಣ ಕೊಂಬು (ಬೇರು) ಬಳಸುವುದು ಇನ್ನೂ ಒಳ್ಳೆಯದು. ಮೊದಲು ಅರಿಶಿಣ ಕೊಂಬನ್ನು ಪೇಸ್ಟ್ ಮಾಡಿ. ಒಂದು ಸ್ಪೂನ್​ ಪೇಸ್ಟ್​ಗೆ ಅರ್ಧ ಚಮಚ ತೆಂಗಿನ ಎಣ್ಣೆ ಮತ್ತು ಅರ್ಧ ಚಮಚ ಅಡುಗೆ ಸೋಡಾ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ನಂತರ ಟೂತ್​ ಬ್ರಶ್​ಗೆ ಇದನ್ನು ಹಾಕಿಕೊಂಡು ಹಲ್ಲುಜ್ಜಿದರೆ ಹಲ್ಲುಗಳು ಫುಲ್ ಬಿಳಿಯಾಗುತ್ತವೆ.

4.ಆ್ಯಪಲ್​ ಸಿಡರ್ ವಿನಿಗರ್​ ಆ್ಯಪಲ್​ ಸಿಡರ್​ ವಿನಿಗರ್​ ನೈಸರ್ಗಿಕವಾಗಿಯೇ ಆ್ಯಸಿಡಿಕ್​ ಅಂಶಗಳನ್ನು ಹೊಂದಿರುತ್ತದೆ. ಇದರಿಂದ ಹಲ್ಲುಜ್ಜುವುದರಿಂದ ಹಳದಿ ಬಣ್ಣ ಹೋಗುತ್ತದೆ. ಹಾಗೇ, ಈ ಲಿಕ್ವಿಡ್​ನಿಂದ ಬಾಯಿ ಮುಕ್ಕಳಿಸಬಹುದು ಅಥವಾ ಅಡುಗೆ ಸೋಡಾದೊಟ್ಟಿಗೆ ಬೆರೆಸಿ ಹಲ್ಲುಗಳ ಮೇಲೆ ಉಜ್ಜಬಹುದು.

5. ಅಲೋವೆರಾ ಅಲೋವೆರಾ ಅನೇಕ ಸಮಸ್ಯೆಗಳಿಗೆ ಪರಿಹಾರ ಆಗಿದೆ. ಹಾಗೇ ಹಲ್ಲುಗಳನ್ನು ಬಿಳಿಯಾಗಿಸುವ ಸಾಮರ್ಥ್ಯವನ್ನೂ ಇದು ಹೊಂದಿದೆ. ಅಲೋವೆರಾವನ್ನೂ ಅಷ್ಟೇ ಅಡುಗೆ ಸೋಡಾದೊಟ್ಟಿಗೆ ಸೇರಿಸಿ, ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ಳಬಹುದು. ಇದರಿಂದ ಹಲ್ಲುಗಳ ಮೇಲೆ ಕಟ್ಟಿದ ಹಳದಿ ಕಲೆ ಮಾಯವಾಗುತ್ತದೆ. (ಇದೇ ಅಂತಿಮವಲ್ಲ. ಕೆಲವು ಅನಾರೋಗ್ಯ ಸಮಸ್ಯೆಯಿಂದಲೂ ಹಲ್ಲು ಹಳದಿಯಾಗಬಹುದು..ಹಾಗೇನಾದರೂ ಇದ್ದರೆ ವೈದ್ಯರ ಬಳಿ ತೋರಿಸಬೇಕು.)

ಇದನ್ನೂ ಓದಿ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು 1.70 ಲಕ್ಷ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಿದೆ ಉತ್ತರ ಪ್ರದೇಶ ಸರ್ಕಾರ

Health tips Natural Home Remedies For Whiten teeth

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್