Inspiration: ಅಪಘಾತದಲ್ಲಿ ಕಾಲು ಕಳೆದುಕೊಂಡ ಯುವಕ ಒಂಟಿ ಕಾಲಿನಲ್ಲಿ ಸೈಕಲ್ ತುಳಿದು ಕೇರಳದಿಂದ ಹೈದರಾಬಾದ್ ತಲುಪಿದ; ಮುಂದಿನ ಗುರಿ ಲಡಾಕ್

ಸ್ಫೂರ್ತಿ ಕಥನ: ಅಪಘಾತದಲ್ಲಿ ಬಲಗಾಲು ಕಳೆದುಕೊಂಡ ವ್ಯಕ್ತಿ ಎಲ್ಲರಿಗೆ ಸ್ಪೂರ್ತಿಯಾಗಿದ್ದಾರೆ. ಕಷ್ಟವನ್ನು ಮೆಟ್ಟಿ ನಿಂತು ಒಂದೇ ಕಾಲಿನಲ್ಲಿ ಸೈಕಲ್​ ತುಳಿಯುತ್ತಾ ಕೇರಳದಿಂದ ಹೈದರಾಬಾದ್​ಗೆ ತಲುಪಿದ್ದಾರೆ.

Inspiration: ಅಪಘಾತದಲ್ಲಿ ಕಾಲು ಕಳೆದುಕೊಂಡ ಯುವಕ ಒಂಟಿ ಕಾಲಿನಲ್ಲಿ ಸೈಕಲ್ ತುಳಿದು  ಕೇರಳದಿಂದ ಹೈದರಾಬಾದ್ ತಲುಪಿದ; ಮುಂದಿನ ಗುರಿ ಲಡಾಕ್
ಅಪಘಾತದಲ್ಲಿ ಕಾಲು ಕಳೆದುಕೊಂಡ ಯುವಕ ಒಂಟಿ ಕಾಲಿನಲ್ಲಿ ಸೈಕಲ್ ತುಳಿದು ಕೇರಳದಿಂದ ಹೈದರಾಬಾದ್ ತಲುಪಿದ
Follow us
TV9 Web
| Updated By: shruti hegde

Updated on: Jul 27, 2021 | 2:35 PM

ವೈಕಲ್ಯಗಳನ್ನು ಮೆಟ್ಟಿನಿಂತು ಸಾಧನೆಯತ್ತ ಸಾಗಲು ಶ್ರಮ, ಧೈರ್ಯ ಮತ್ತು ಮನಸ್ಸು ಬೇಕು. ಮನಸ್ಸಿದ್ದರೆ ಮಾರ್ಗ ಎಂಬಂತೆ ತಮ್ಮೆಲ್ಲಾ ನೋವುಗಳನ್ನು ಮೆಟ್ಟಿ ನಿಂತು ತಮ್ಮ ಗುರಿಯನ್ನು ಸಾಧಿಸುವ ನಿಟ್ಟಿನಿಂದ 35 ವರ್ಷದ ವ್ಯಕ್ತಿ ಮೊಹಮ್ಮದ್ ಆಶ್ರಫ್​ ಸೈಕಲ್(Cycling)​ ತುಳಿಯುವ ಅಭ್ಯಾಸ ಮಾಡಿದರು. ಸೈಕ್ಲಿಸ್ಟ್(Cyclist)​ ಆಗಿ ದೂರದ ಪ್ರಯಾಣ ಕೈಗೊಂಡರು. ಅಸಾಧ್ಯವಾದುದನ್ನು ಸಾಧಿಸುವ ಮನಸ್ಸು ಬೇಕಷ್ಟೆ ಅನ್ನುತ್ತಾರೆ ಮೊಹಮ್ಮದ್ ಆಶ್ರಫ್​.

ಅಪಘಾತದಲ್ಲಿ ಬಲಗಾಲು ಕಳೆದುಕೊಂಡ ವ್ಯಕ್ತಿ ಎಲ್ಲರಿಗೆ ಸ್ಪೂರ್ತಿಯಾಗಿದ್ದಾರೆ. ಕಷ್ಟವನ್ನು ಮೆಟ್ಟಿ ನಿಂತು ಸೈಕಲ್​ ತುಳಿಯುತ್ತಾ ಕೇರಳದಿಂದ ಹೈದರಾಬಾದ್​ಗೆ ತಲುಪಿದ್ದಾರೆ. ಇವರ ಮೂಲ ನೆಲೆ ಕೇರಳ. ಜುಲೈ 15 ರಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಭಾನುವಾರ ರಾತ್ರಿ ಹೈದರಾಬಾದ್ಅನ್ನು ತಲುಪಿದ್ದು, ಮಂಗಳವಾರ ನಾಗಪುರ ತಲುಪುವ ಯೋಚನೆಯಲ್ಲಿದ್ದಾರೆ.

2017ರಲ್ಲಿ ನಡೆದ ಅಪಘಾತವೊಂದರಲ್ಲೊ ಮೊಹಮ್ಮದ್ ತಮ್ಮ ಬಲಗಾಲನ್ನು ಕಳೆದುಕೊಂಡರು. ದೇಹಕ್ಕೆ ಗಾಯಗಳಾದವು. ಈ ಜಗತ್ತಿನಲ್ಲಿ ಯಾವುದೂ ಸಾಧ್ಯವಿಲ್ಲ ಎಂಬುದನ್ನು ಜಗತ್ತಿಗೇ ಸಾರಲು ಹೊರಟಿದ್ದೇನೆ. ನನ್ನ ವೈಕಲ್ಯಗಳೇ ನನಗೆ ಶಕ್ತಿ ಎಂದು ಮೊಹಮ್ಮದ್ ಸ್ಪೂರ್ತಿ ಮಾತುಗಳನ್ನು ಹೇಳಿದ್ದಾರೆ. ಧೈರ್ಯದ ಜತೆಗೆ ಸದೃಢ ಮನಸ್ಸಿನಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಜಗತ್ತಿಗೆ ಸಾರುತ್ತೇನೆ ಎಂದು ಟೈಮ್ಸ್ ಅಫ್ ಇಂಡಿಯಾ ಸುದ್ದಿ ಮಾಧ್ಯಮದ ಜತೆ ಆಶ್ರಫ್ ಮಾತನಾಡಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ದುಬೈನಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದೆ. ಬಳಿಕ ನನ್ನ ಉದ್ಯೋಗ ಕಳೆದುಕೊಂಡೆ. 2017ರಲ್ಲಿ ನಡೆದ ಬೈಕ್ ಅಪಘಾತದಲ್ಲಿ ನನ್ನ ಬಲಗಾಲನ್ನು ಕಳೆದುಕೊಂಡೆ. 9 ಸರ್ಜರಿಗಳನ್ನು ಮಾಡಲಾಯಿತು. ಆಸ್ಪತ್ರೆಯಿಂದ ಹೊರಬರಲು ವರ್ಷಗಳೇ ಬೇಕಾದವು. ನಾನು ನನ್ನ ಒಂದೇ ಕಾಲನ್ನು ಬಳಸಬಹುದು ಹಾಗೂ ಬಲಗೈನ ಕೆಲವು ಬೆರಳುಗಳನ್ನು ಮಾತ್ರ ಬಳಸಬಹುದು. ಆದರೆ ಇವುಗಳು ನನ್ನ ಸೈಕ್ಲಿಂಗ್ ಆಸೆಗೆ ಸಹಾಯ ಮಾಡಿವೆ ಎಂದು ಅವರು ತಮ್ಮ ಜಿವನದ ಘಟನೆಯನ್ನು ವಿವರಿಸಿದ್ದಾರೆ.

ಈ ಘಟನೆಯಿಂದ ಮಾನಸಿಕವಾಗಿ ಕುಗ್ಗುತ್ತಿರುವಾಗ ಸೈಕಲ್ ತುಳಿಯುವ ಅಭ್ಯಾಸ ಮಾಡಿದೆ. ಪರ್ವತಗಳೆಂದರೆ ನನಗೆ ತುಂಬಾ ಇಷ್ಟ. ಪರ್ವತವನ್ನು ಏರುವ ಆಸೆ ಹೊಂದಿದ್ದೇನೆ ಅದರಲ್ಲಿಯೂ 17,582 ಅಡಿ ಎತ್ತರದ ಖಾರ್ದುಂಗ್ ಲಾ ಏರುವ ಗುರಿ ಹೊಂದಿದ್ದೇನೆ ಎಂದು ಹೇಳಿದ್ದಾರೆ.

ಅವರ ಪ್ರಯಾಣದಲ್ಲಿ ವಿಶ್ರಾಂತಿ ಪಡೆಯಲು ಸ್ಲೀಪಿಂಗ್ ಬ್ಯಾಗ್ ಮತ್ತು ಟೆಂಟ್​ಗಳನ್ನು ತೆಗೆದುಕೊಂಡು ಸಾಗುತ್ತಾರೆ. ಪೆಟ್ರೋಲ್ ಬಂಕ್​ಗಳಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಕೇರಳದಿಂದ ಹೈದರಾಬಾದ್​ಗೆ ತಲುಪಿರುವ ಮೊಹಮ್ಮದ್​ ಮುಂದಿನ ಗುರಿ ಲಡಾಕ್.

ಇದನ್ನೂ ಓದಿ:

Tokyo Olympics 2020: ಐತಿಹಾಸಿಕ ಸಾಧನೆ ಗೈದು ಒಲಿಂಪಿಕ್ಸ್ ಟೂರ್ನಿಯಿಂದ ಹೊರಬಿದ್ದ ಸುಮಿತ್ ನಗಾಲ್

Bhuvneshwar Kumar: 5 ವರ್ಷ ಗೆರೆ ದಾಟದ ಟೀಮ್ ಇಂಡಿಯಾ ವೇಗಿ: ಅಪರೂಪದ ಸಾಧನೆ ಮೆರೆದ ಭುವಿ..!