AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Morning Walk: ಬೆಳಗೆದ್ದು ವಾಕಿಂಗ್ ಮಾಡುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ?! 7 ಮುಖ್ಯ ಅಂಶಗಳ ವಿವರ ಇಲ್ಲಿದೆ

ವಾಕಿಂಗ್​ನಿಂದ ಆರೋಗ್ಯಕ್ಕೆ ಬಹಳಷ್ಟು ಲಾಭವಿದೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಜೀವನ ಉತ್ತಮವಾಗಲು ವಾಕಿಂಗ್ ಸಹಾಯ ಮಾಡಬಲ್ಲದು. ವಾಕಿಂಗ್​ನಿಂದ ಏನೇನು ಆರೋಗ್ಯ ಲಾಭಗಳು ಎಂಬ ಬಗ್ಗೆ ಇಲ್ಲಿ ಕೆಲವು ಅಂಶಗಳನ್ನು ನೀಡಲಾಗಿದೆ.

Morning Walk: ಬೆಳಗೆದ್ದು ವಾಕಿಂಗ್ ಮಾಡುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ?! 7 ಮುಖ್ಯ ಅಂಶಗಳ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Updated By: Skanda|

Updated on: Jul 27, 2021 | 6:57 AM

Share

ಎಲ್ಲರಿಗೂ ವ್ಯಾಯಾಮ, ದೈಹಿಕವಾಗಿ ಹೆಚ್ಚು ಶಕ್ತಿ ಬೇಡುವ ಕೆಲಸಗಳು, ಇತ್ಯಾದಿಗಳನ್ನೆಲ್ಲಾ ಮಾಡುವುದು ಸುಲಭ ಅಲ್ಲ. ಅಥವಾ ಸಾಧ್ಯವೂ ಇಲ್ಲ. ಹಾಗೂ ಬಹುತೇಕ ಮಂದಿಗೆ ವ್ಯಾಯಾಮದೊಂದಿಗೆ ದಿನವನ್ನು ಆರಂಭಿಸಬೇಕು ಎಂಬುದು ಆದ್ಯತೆಯೂ ಆಗಿರಲಿಕ್ಕಿಲ್ಲ. ಆದರೆ, ದಿನಚರಿಯನ್ನು ವ್ಯಾಯಾಮದ ಮೂಲಕ ಆರಂಭಿಸುವುದು ತುಂಬಾ ಒಳ್ಳೆಯದು. ಮನೆ ಸಮೀಪದ ಪಾರ್ಕ್, ಬೀಚ್ ಹೀಗೆ ಅವಕಾಶ ಇರುವಲ್ಲಿ ವಾಕಿಂಗ್ ಮಾಡಬಹುದು.

ವಾಕಿಂಗ್​ನಿಂದ ಆರೋಗ್ಯಕ್ಕೆ ಬಹಳಷ್ಟು ಲಾಭವಿದೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಜೀವನ ಉತ್ತಮವಾಗಲು ವಾಕಿಂಗ್ ಸಹಾಯ ಮಾಡಬಲ್ಲದು. ವಾಕಿಂಗ್​ನಿಂದ ಏನೇನು ಆರೋಗ್ಯ ಲಾಭಗಳು ಎಂಬ ಬಗ್ಗೆ ಇಲ್ಲಿ ಕೆಲವು ಅಂಶಗಳನ್ನು ನೀಡಲಾಗಿದೆ.

ನೈಸರ್ಗಿಕ ಶಕ್ತಿ ವರ್ಧನೆ ದಿನಚರಿಯ ಆರಂಭದಲ್ಲಿ ವಾಕಿಂಗ್ ಮಾಡುವುದರಿಂದ ಮಾನಸಿಕವಾಗಿ ಉಲ್ಲಸಿತಗೊಳ್ಳಬಹುದು. ದೇಹ ಮತ್ತು ಮನಸ್ಸು ರಿಫ್ರೆಶ್ ಆಗಬಹುದು. ನಿಯಮಿತ ವ್ಯಾಯಾಮ ವಿಧಾನ ಅಂದರೆ ವಾಕಿಂಗ್​ನಿಂದ ನೈಸರ್ಗಿಕ ವಿಧಾನದಲ್ಲಿ ನಮ್ಮ ಶಕ್ತಿವರ್ಧನೆ ಆಗಬಹುದು. ಸುಸ್ತು ಅಥವಾ ಆಲಸ್ಯ ಕಡಿಮೆ ಮಾಡಲು ಸಹಕಾರಿ ಆಗಬಹುದು.

ಉತ್ತಮ ಮಾನಸಿಕ ಆರೋಗ್ಯ ಯಾವತ್ತೂ ಮೂಡ್ ಚೆನ್ನಾಗಿಲ್ಲ ಅನ್ನುತ್ತೀರಾದರೆ ವಾಕಿಂಗ್ ಮಾಡಿ ಉತ್ತಮ ಮಾನಸಿಕ ಆರೋಗ್ಯವನ್ನೂ ಕಾಣಬಹುದು. ಒತ್ತಡ ನಿವಾರಣೆ, ಸುಸ್ತು, ಬೇಸರ ಹೀಗೆ ಮಾನಸಿಕ ಒತ್ತಡ ಸೃಷ್ಟಿಸುವ ಅಂಶಗಳನ್ನು ವಾಕಿಂಗ್ ಮೂಲಕ ಪರಿಹರಿಸಬಹುದು. ವಾಕಿಂಗ್ ಯೋಚನೆಗೆ, ಮನಸ್ಸನ್ನು ಹಗುರಾಗಿಸಲು ಕೂಡ ಅವಕಾಶ ಕೊಡುತ್ತದೆ. ಡಿಪ್ರೆಶನ್ ಕಡಿಮೆ ಮಾಡಲು ವಾಕಿಂಗ್ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ವಿವರಿಸಿವೆ.

ಉತ್ತಮ ನಿದ್ರೆ ದಿನದಲ್ಲಿ ವಾಕಿಂಗ್ ಮೂಲಕವಾದರೂ ಹೀಗೆ ಚಟುವಟಿಕೆಯಿಂದ ಇರುವುದರಿಂದ ನೈಸರ್ಗಿಕವಾಗಿ ನಿದ್ರೆಯ ಹಾರ್ಮೋನ್​ಗಳು ಹೆಚ್ಚು ಉತ್ಪಾದನೆಯಾಗುತ್ತದೆ. ಅದರಿಂದ ಚೆನ್ನಾಗಿ ಮತ್ತು ಗಾಢವಾಗಿ ಉತ್ತಮ ನಿದ್ರೆ ಪಡೆಯಲು ಕೂಡ ಸಹಾಯವಾಗುತ್ತದೆ. ಬೆಳಗ್ಗಿನ ವಾಕಿಂಗ್ ಸಮಯದಲ್ಲಿ ಸೂರ್ಯೋದಯ ಕಣ್ತುಂಬಿಕೊಳ್ಳುವುದು, ಗೆಳೆಯರನ್ನು ಭೇಟಿ ಮಾಡುವುದು, ಜೊತೆಗೆ ಸೂರ್ಯನ ಬೆಳಕಿಗೆ ಮೈಯೊಡ್ಡಲು ಕೂಡ ಸಹಾಯವಾಗುತ್ತದೆ. ರಾತ್ರಿ ಉತ್ತಮ ನಿದ್ರೆ, ಬೆಳಗ್ಗೆ ವಾಕಿಂಗ್ ಇದು ನಿದ್ರೆಯ ಕ್ರಿಯೆಯನ್ನು ಚೆನ್ನಾಗಿ ಇರಿಸುತ್ತದೆ.

ಮೆದುಳಿನ ಆರೋಗ್ಯ ವಾಕಿಂಗ್​ನಿಂದ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ನಿಮಗೆಲ್ಲರಿಗೂ ಗೊತ್ತೇ ಇರಬಹುದು. ಆದರೆ, ವಾಕಿಂಗ್ ಮೂಲಕ ಮೆದುಳಿನ ಕಾರ್ಯವನ್ನೂ ಉತ್ತಮಗೊಳಿಸಬಹುದು. ನೆನಪಿನ ಶಕ್ತಿ, ಏಕಾಗ್ರತೆ ಹಾಗೂ ಸಮಸ್ಯೆ ಬಗೆಹರಿಸುವ ಚಾಕಚಕ್ಯತೆ ಮೆದುಳಿನಲ್ಲಿ ಹೆಚ್ಚುತ್ತದೆ.

ಹೃದಯದ ಆರೋಗ್ಯ ರಕ್ತದ ಸಂಚಲನ ಸರಿಯಾಗಿ ನಡೆಯಲು ವಾಕಿಂಗ್ ಸಹಕಾರಿ. ಹೃದಯದ ಖಾಯಿಲೆಗಳ ಅಪಾಯವೂ ವಾಕಿಂಗ್ ಮಾಡುವುದರಿಂದ ಕಡಿಮೆ ಆಗುತ್ತದೆ. ದಿನದಲ್ಲಿ ಮೂವತ್ತು ನಿಮಿಷಗಳ ಕಾಲ ವಾಕಿಂಗ್ ಮಾಡುವುದರಿಂದ ಹೃದಯದ ಖಾಯಿಲೆಗಳ ಸಾಧ್ಯತೆಯನ್ನು ಶೇಕಡಾ 35ರಷ್ಟು ಕಡಿಮೆ ಮಾಡಬಹುದು.

ಸಕ್ಕರೆ ಖಾಯಿಲೆ ಸಾಧ್ಯತೆ ಕಡಿಮೆ ವಾಕಿಂಗ್ ಎಂಬುದು ಸುಲಭವಾದ ದೈಹಿಕ ಚಟುವಟಿಕೆ ಆಗಿರಬಹುದು. ಆದರೆ, ಸಕ್ಕರೆ ಖಾಯಿಲೆ ನಿಯಂತ್ರಣದಲ್ಲಿ ಇಡಲು ಅದು ಸಹಾಯಮಾಡುತ್ತದೆ. ದಿನವೂ 30 ನಿಮಿಷ ವಾಕಿಂಗ್ ಮಾಡುವುದರಿಂದ ಟೈಪ್ 2 ಸಕ್ಕರೆ ಖಾಯಿಲೆಯನ್ನೂ ನಿಯಂತ್ರಣದಲ್ಲಿ ಇಡಬಹುದು.

ಗಂಟುನೋವು ಹಾಗೂ ಸ್ನಾಯುಸೆಳೆತ ಕಡಿಮೆ ಮಾಡುತ್ತದೆ ಬೆಳಗ್ಗೆ ಬೇಗ ಏಳುವುದು ಕೆಲವರಿಗೆ ಸಮಸ್ಯೆಯಾಗಿ ಕಾಣಬಹುದು. ಅಂದರೆ ಗಂಟುನೋವು, ಸ್ನಾಯು ಸೆಳೆತ ಇರಬಹುದು. ಆದರೆ, ಅದನ್ನು ಮೀರಿ ಬೆಳಗ್ಗೆ ಬೇಗ ಎದ್ದು ಹದವಾಗಿ ವಾಕಿಂಗ್ ಮಾಡುವುದರಿಂದ ಗಂಟುನೋವು ಮತ್ತು ಸ್ನಾಯುಗಳ ನೋವನ್ನು ಕಡಿಮೆ ಮಾಡಬಹುದು. ಅದನ್ನು ಬಲಗೊಳಿಸಬಹುದು. ವಯಸ್ಸಾದಂತೆ ಆರ್ಥ್ರೈಟಿಸ್ ಕಂಡುಬರುವುದು ಇದೆ. ಅಂಥವರಿಗೂ ವಾಕಿಂಗ್ ಮಾಡುವುದು ಪರಿಹಾರವಾಗಿ ಕಂಡುಬರಬಹುದು.

ಇದನ್ನೂ ಓದಿ: Healthy Heart: ಹೃದಯ ಬಡಿತದ ಮೇಲೆ ನಮ್ಮ ಆರೋಗ್ಯ ನಿಂತಿದೆ; ಈ ರೋಗ ಲಕ್ಷಣಗಳ ಬಗ್ಗೆ ಸದಾ ಎಚ್ಚರ ವಹಿಸಿ

Women Health: ಗರ್ಭಿಣಿಯರು ಪಾರ್ಲರ್​ಗೆ ಹೋಗುವುದು ಒಳ್ಳೆಯದಲ್ಲ! ಕಾರಣ ತಿಳಿಯಲೇಬೇಕು

(Morning Walking Health Benefits of Daily Walk Healthy Lifestyle details here)

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ