Mosambi Benefits: ಮೂಸಂಬಿ ಹಣ್ಣಿನ ಜ್ಯೂಸ್ ಕುಡಿಯುವುದರ ಜತೆಗೆ, ಚರ್ಮದ ಕಾಳಜಿಗಾಗಿ ಇದರ ರಸವನ್ನು ಬಳಸಿ
ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇವು ಕೆಲಸ ಮಾಡುತ್ತವೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಚರ್ಮವನ್ನು ಬಿಗಿಗೊಳಿಸಲು ಮತ್ತು ಮುಖದ ಕಾಂತಿಯನ್ನು ಹೆಚ್ಚಿಸಲು ಮೂಸಂಬಿ ಹಣ್ಣಿನ ಜ್ಯೂಸ್ ಕುಡಿಯಿರಿ.
ಬೇಸಿಗೆಯಲ್ಲಿ ಮಾತ್ರವಲ್ಲ ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸಲು ಮೂಸಂಬಿ ಹಣ್ಣಿನ(Mosambi) ಜ್ಯೂಸ್ ಅನ್ನು ಯಾವಾಗಲೂ ತೆಗೆದುಕೊಳ್ಳುವುದು ಸೂಕ್ತ. ಫೇಸ್ ವಾಶ್ ಮತ್ತು ಕ್ರೀಮ್ ಸೇರಿದಂತೆ ಅನೇಕ ಸೌಂದರ್ಯ ಉತ್ಪನ್ನಗಳಲ್ಲಿ ಮೂಸಂಬಿ ಹಣ್ಣನ್ನು ಬಳಸಲಾಗುತ್ತದೆ. ಸಿಟ್ರಸ್ ಹಣ್ಣುಗಳು ಆರೋಗ್ಯ ಮತ್ತು ಚರ್ಮಕ್ಕೆ ತುಂಬಾ ಒಳ್ಳೆಯದು. ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇವು ಕೆಲಸ ಮಾಡುತ್ತವೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಚರ್ಮವನ್ನು ಬಿಗಿಗೊಳಿಸಲು ಮತ್ತು ಮುಖದ ಕಾಂತಿಯನ್ನು ಹೆಚ್ಚಿಸಲು ಮೂಸಂಬಿ ಹಣ್ಣಿನ ಜ್ಯೂಸ್ ಕುಡಿಯಿರಿ.
ಮೂಸಂಬಿ ಹಣ್ಣಿನ ಆರೋಗ್ಯಕರ ಪ್ರಯೋಜನಗಳು:
ಕಣ್ಣಿನ ಕೆಳಗಿನ ಕಪ್ಪು ಭಾಗವನ್ನು ದೂರ ಮಾಡುತ್ತದೆ ಹಲವರ ಚರ್ಮ ಹೆಚ್ಚು ಎಣ್ಣೆಯುಕ್ತವಾಗಿರುತ್ತದೆ(oily face). ಇದು ಕಣ್ಣುಗಳ ಸುತ್ತಲೂ ಬ್ಲ್ಯಾಕ್ ಹೆಡ್ಸ್ ಮತ್ತು ಕಪ್ಪು ವಲಯಗಳಿಗೆ ಕಾರಣವಾಗುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಮೂಸಂಬಿ ರಸವನ್ನು ಹಚ್ಚಿ, ಸ್ವಲ್ಪ ಸಮಯದ ನಂತರ ತಣ್ಣಿರಿನಿಂದ ತೊಳೆಯಿರಿ.ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಮೊಡವೆಗಳನ್ನು ಕಡಿಮೆ ಮಾಡುತ್ತದೆ ಚರ್ಮಕ್ಕೆ ಸಂಬಂಧಿತ ಸಮಸ್ಯೆಗಳನ್ನು ತೊಡೆದುಹಾಕಲು ಮೂಸಂಬಿ ಜ್ಯೂಸ್ ಅನ್ನು ಬಳಸಬಹುದು. ಇದರ ರಸವು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಕುತ್ತಿಗೆ, ಮೊಣಕೈ, ಮೊಣಕಾಲುಗಳು, ಕಣ್ಣುಗಳ ಸುತ್ತಲಿನ ಕಪ್ಪು ವಲಯಗಳನ್ನು ತೊಡೆದುಹಾಕಲು ಮೂಸಂಬಿ ರಸ ಸಹಾಯಕವಾಗಿದೆ.
ಉತ್ಕರ್ಷಣ ನಿರೋಧಕ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸುವುದರ ಜತೆಗೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮೂಸಂಬಿ ಪ್ರಮುಖ ಪಾತ್ರ ವಹಿಸುತ್ತದೆ. ಉತ್ಕರ್ಷಣ ನಿರೋಧಕ ಶಕ್ತಿಯನ್ನು ಮೂಸಂಬಿ ನೀಡುತ್ತದೆ ಮತ್ತು ಆ ಮೂಲಕ ದೇಹವು ಸದಾ ಆರೋಗ್ಯವಾಗಿರುವಂತೆ ಮಾಡುತ್ತದೆ.
ಕಲೆಗಳನ್ನು ದೂರ ಮಾಡುತ್ತದೆ ಮೂಸಂಬಿ ರಸ ಚರ್ಮಕ್ಕೆ ಸಂಬಂಧಿಸಿದಂತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಚರ್ಮದ ಕಲೆಗಳು ಮತ್ತು ಎಣ್ಣೆಯುಕ್ತ ಮುಖವನ್ನು ದೂರ ಮಾಡಲು ಇದು ಸಹಾಯಕವಾಗಿದೆ. ಅಲ್ಲದೇ ಮೂಸಂಬಿ ಚರ್ಮವನ್ನು ಆರ್ಧ್ರಕಗೊಳಿಸುತ್ತದೆ.