Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಮುಂಜಾನೆಯ ವಾಕಿಂಗ್ ತೂಕ ಇಳಿಕೆಗಷ್ಟೇ ಎಂಬ ಭ್ರಮೆಯಿಂದ ಹೊರ ಬನ್ನಿ; ನೀವು ಹಾಕುವ ಪ್ರತಿ ಹೆಜ್ಜೆ ಹಲವು ಆರೋಗ್ಯಕರ ಬದಲಾವಣೆಗೆ ಕಾರಣವಾಗುತ್ತದೆ

Walking: ತಾಜಾ ಗಾಳಿಯನ್ನು ಪಡೆಯುವುದರಿಂದ, ಶ್ವಾಸಕೋಶ ಆರೋಗ್ಯವಾಗಿರುತ್ತದೆ ಮತ್ತು ಆ ಮೂಲಕ ಮೆದುಳು ಕೂಡ ಆರೋಗ್ಯವಾಗಿರುತ್ತದೆ. ಆಯುರ್ವೇದ ಮತ್ತು ವಿಜ್ಞಾನವು ಬೆಳಿಗ್ಗೆಯ ನಡಿಗೆಯನ್ನು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸುತ್ತದೆ.

Health Tips: ಮುಂಜಾನೆಯ ವಾಕಿಂಗ್ ತೂಕ ಇಳಿಕೆಗಷ್ಟೇ ಎಂಬ ಭ್ರಮೆಯಿಂದ ಹೊರ ಬನ್ನಿ; ನೀವು ಹಾಕುವ ಪ್ರತಿ ಹೆಜ್ಜೆ ಹಲವು ಆರೋಗ್ಯಕರ ಬದಲಾವಣೆಗೆ ಕಾರಣವಾಗುತ್ತದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Jul 24, 2021 | 7:36 AM

ಸಾಮಾನ್ಯವಾಗಿ ಜನರು ತೂಕವನ್ನು ಕಡಿಮೆ ಮಾಡಿಕೊಳ್ಳಲು ಬೆಳಿಗ್ಗೆ ವಾಕಿಂಗ್ (​ Walking) ಅಥವಾ ನಡೆಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಬೆಳಗ್ಗಿನ ಕಾಲಕ್ಕೆ ನಾವು ಹಾಕುವ ಪ್ರತಿ ಹೆಜ್ಜೆಯೂ ನಮ್ಮ ದೇಹದ ಮೇಲೆ ಆರೋಗ್ಯಕರ ಬದಲಾವಣೆಯನ್ನು ತರುತ್ತದೆ. ಹೀಗಾಗಿ ವಾಕಿಂಗ್​ ಕೇವಲ ತೂಕವನ್ನು ನಿಯಂತ್ರಿಸಲು ಸೀಮಿತವಾಗಿಲ್ಲ. ಬದಲಾಗಿ ಪೂರ್ಣ ನಿದ್ರೆ, ಉಷ್ಣತೆ ಮತ್ತು ದೇಹದ ಸಮತೋಲವನ್ನು ಕಾಯ್ದುಕೊಳ್ಳಲು ತುಂಬಾ ಮುಖ್ಯ.

ಬೆಳಿಗ್ಗೆ ನಡೆಯುವುದರಿಂದ ದೇಹದಲ್ಲಿನ ವಿಷಯುತ ಅಂಶ ಹೊರಹೋಗುತ್ತದೆ. ಅಂದರೆ, ದೇಹ ಶುದ್ಧೀಕರಣಗೊಳ್ಳುತ್ತದೆ. ಅಲ್ಲದೆ ತಾಜಾ ಗಾಳಿಯನ್ನು ಪಡೆಯುವುದರಿಂದ, ಶ್ವಾಸಕೋಶ ಆರೋಗ್ಯವಾಗಿರುತ್ತದೆ ಮತ್ತು ಆ ಮೂಲಕ ಮೆದುಳು ಕೂಡ ಆರೋಗ್ಯವಾಗಿರುತ್ತದೆ. ಆಯುರ್ವೇದ ಮತ್ತು ವಿಜ್ಞಾನವು ಬೆಳಿಗ್ಗೆಯ ನಡಿಗೆಯನ್ನು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸುತ್ತದೆ.

ಖಿನ್ನತೆಯಿಂದ ಮುಕ್ತಿ ಈಗಿನ ಕಾಲದಲ್ಲಿ ಖಿನ್ನತೆ ದೊಡ್ಡ ಸಮಸ್ಯೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಕೆಲಸ ಮತ್ತು ಜವಾಬ್ದಾರಿಗಳ ಹೊರೆಯಲ್ಲಿರುತ್ತಾರೆ. ಕೆಲಸದಲ್ಲಿನ ಸಣ್ಣ ತೊಂದರೆ ಕೂಡ ಒತ್ತಡ ಸೃಷ್ಟಿ ಮಾಡುತ್ತದೆ. ಕ್ರಮೇಣ ಕೋಪ, ಕಿರಿಕಿರಿ ಮತ್ತು ಚಡಪಡಿಕೆ ಹೆಚ್ಚಾಗುವಂತೆ ಆಗುತ್ತದೆ. ಆ ಮೂಲಕ ಖಿನ್ನತೆಗೆ ಒಳಗಾಗಬೇಕಾಗುತ್ತದೆ. ಸಹಜವಾಗಿ, ಜನರು ಖಿನ್ನತೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಆದರೆ ಇದು ತುಂಬಾ ಗಂಭೀರವಾದ ಸಮಸ್ಯೆಯಾಗಿದ್ದು, ಅದು ಆತ್ಮಹತ್ಯೆಗೆ ಪ್ರಚೋದಿಸುತ್ತದೆ. ಬೆಳಗಿನ ನಡಿಗೆ ವ್ಯಕ್ತಿಯ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಮೆದುಳಿಗೆ ಆಮ್ಲಜನಕದ ಹರಿವು ಉತ್ತಮವಾಗುತ್ತದೆ. ಇದರಿಂದಾಗಿ ಖಿನ್ನತೆಯ ಸಮಸ್ಯೆ ದೂರವಾಗಲು ಪ್ರಾರಂಭಿಸುತ್ತದೆ.

ಮಧುಮೇಹವನ್ನು ಗುಣಪಡಿಸುತ್ತದೆ ಇತ್ತೀಚಿನ ದಿನಗಳಲ್ಲಿ ಮಧುಮೇಹ ಸಾಮಾನ್ಯ ಸಮಸ್ಯೆಯಾಗಿದೆ. ಜನರಿಗೆ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ ಬರುತ್ತದೆ. ಇದು ಗುಣಪಡಿಸಲಾಗದ ಕಾಯಿಲೆಯಾಗಿದ್ದು, ಇದಕ್ಕಾಗಿ ನೀವು ನಿಮ್ಮ ಜೀವನದುದ್ದಕ್ಕೂ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಸಿಹಿತಿಂಡಿಗಳನ್ನು ತಿನ್ನುವ ಅಭ್ಯಾಸವನ್ನು ನಿಯಂತ್ರಿಸುವ ಜತೆಗೆ ನೀವು ಪ್ರತಿದಿನ ಬೆಳಿಗ್ಗೆ ನಡೆದರೆ, ಮಧುಮೇಹವು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಣದಲ್ಲಿರುತ್ತದೆ. ಮಧುಮೇಹವನ್ನು ನಿಯಂತ್ರಿಸಲು ವಾಕಿಂಗ್ ಅನ್ನು ರಾಮಬಾಣವೆಂದು ಪರಿಗಣಿಸಲಾಗುತ್ತದೆ.

ಸ್ನಾಯು ನೋವು ಕಡಿಮೆಯಾಗುತ್ತದೆ ಕೀಲು ನೋವು, ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್ ಮುಂತಾದ ಸಮಸ್ಯೆಗಳು ಭವಿಷ್ಯದಲ್ಲಿ ಹೆಚ್ಚಾಗಿ ಕಾಡುತ್ತದೆ. ಇಂದಿನಿಂದ ಬೆಳಿಗ್ಗೆ ನಡೆಯುವ ಅಭ್ಯಾಸವನ್ನು ಮಾಡಿದರೆ ಮುಂದೆ ಇಂತಹ ಅಪಾಯದಿಂದ ದೂರ ಇರಬಹುದು. ಬೆಳಿಗ್ಗೆ ವಾಕ್ ಮಾಡುವ ಮೂಲಕ, ದೇಹವು ಸಕ್ರಿಯವಾಗಿ ಉಳಿಯುತ್ತದೆ ಮತ್ತು ಕೀಲುಗಳ ನಡುವಿನ ಆರೋಗ್ಯ ಸಮತೋಲನದಲ್ಲಿರುತ್ತದೆ.

ಹೃದಯದ ಆರೋಗ್ಯಕ್ಕೆ ಅವಶ್ಯಕ ಅಧಿಕ ಕೊಲೆಸ್ಟ್ರಾಲ್ ಹೃದಯ ಸಮಸ್ಯೆಗಳಿಗೆ ಪ್ರಮುಖ ಕಾರಣವೆಂದು ಪರಿಗಣಿಸಲಾಗುತ್ತದೆ. ಇದಕ್ಕಾಗಿ, ನಿಮ್ಮ ಆಹಾರ ಪದ್ಧತಿಯಲ್ಲಿ ನೀವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಹಾಗೆಯೇ ಬೆಳಿಗ್ಗೆ ನಡೆಯಬೇಕು. ಮುಂಜಾನೆಯ ವಾಕ್ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸಲು ಪ್ರಾರಂಭಿಸುತ್ತದೆ. ಈ ರೀತಿಯಾಗಿ, ಮಾಡುವುದರಿಂದ ಹೃದಯ ಸಮಸ್ಯೆಗಳ ಅಪಾಯವು ಕಡಿಮೆಯಾಗುತ್ತದೆ. ನೀವು ಪ್ರತಿದಿನ ಎಷ್ಟು ಹೆಚ್ಚು ನಡೆಯುತ್ತೀರೋ ಅಷ್ಟೇ ನಿಮ್ಮ ಹೃದಯವು ಆರೋಗ್ಯಕರವಾಗಿರುತ್ತದೆ ಎಂದು ಅನೇಕ ಸಂಶೋಧನೆಗಳು ತಿಳಿಸಿದೆ.

ಪ್ರತಿರಕ್ಷಣಾ ವ್ಯವಸ್ಥೆ ಬೆಳಗಿನ ನಡಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳಿಗ್ಗೆ ವಾಕ್ ಮಾಡುವುದರಿಂದ ನಿಮ್ಮ ಹೊಟ್ಟೆ ಸರಿಯಾಗಿರುತ್ತದೆ. ಅಂದರೆ ಸೇವಿಸುವ ಆಹಾರವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೇಹವು ಪೋಷಕಾಂಶಗಳನ್ನು ಪಡೆಯಲು ಪ್ರಾರಂಭಿಸಿದಾಗ, ಪ್ರತಿರಕ್ಷಣಾ ವ್ಯವಸ್ಥೆಯು ಸಹ ಬಲಗೊಳ್ಳಲು ಪ್ರಾರಂಭವಾಗುತ್ತದೆ.

ಇದನ್ನೂ ಓದಿ: Walking Benefits: ಮನೆಯಂಗಳದಲ್ಲೇ ವಾಕಿಂಗ್​ ಮಾಡಿ; ಅನಗತ್ಯ ಚಿಂತೆಯಿಂದ ದೂರವಿರಿ

Health Benefits: ದಿನಕ್ಕೆ ಒಂದು ಬಾರಿಯಾದರೂ ಬರಿಗಾಲಿನಲ್ಲಿ ನಡೆಯಿರಿ; ಕಾಲಿಗೆ ತಾಗುವ ಮಣ್ಣು ಸ್ನಾಯುವನ್ನು ಬಲಪಡಿಸುತ್ತದೆ

ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು