Bhuvneshwar Kumar: 5 ವರ್ಷ ಗೆರೆ ದಾಟದ ಟೀಮ್ ಇಂಡಿಯಾ ವೇಗಿ: ಅಪರೂಪದ ಸಾಧನೆ ಮೆರೆದ ಭುವಿ..!

ಶ್ರೀಲಂಕಾ ಪರ ಅರ್ಧಶತಕ ಬಾರಿಸಿದ ಚರಿತ್ ಅಸಲಂಕಾ ಮತ್ತು ಅವಿಷ್ಕಾ ಫರ್ನಾಂಡೊ ಅವರ ವಿಕೆಟ್ ಪಡೆದರು. ಹಾಗೆಯೇ ದುಷ್ಮಂತ್ ಚಮಿರಾ ಅವರನ್ನು ಔಟ್ ಮಾಡಿದರು.

Bhuvneshwar Kumar: 5 ವರ್ಷ ಗೆರೆ ದಾಟದ ಟೀಮ್ ಇಂಡಿಯಾ ವೇಗಿ: ಅಪರೂಪದ ಸಾಧನೆ ಮೆರೆದ ಭುವಿ..!
Bhuvneshwar Kumar
TV9kannada Web Team

| Edited By: Zahir PY

Jul 20, 2021 | 9:01 PM

ಶ್ರೀಲಂಕಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ (Bhuvneshwar Kumar) ಪರಿಣಾಮಕಾರಿಯಾಗಿರಲಿಲ್ಲ. ಆದರೆ ದ್ವಿತೀಯ ಏಕದಿನ ಪಂದ್ಯದಲ್ಲಿ ಇನ್​ ಸ್ವಿಂಗ್ – ಔಟ್ ಸ್ವಿಂಗ್ ಮೂಲಕ ಲಂಕಾ ಬ್ಯಾಟ್ಸ್​ಮನ್​ಗಳನ್ನು ಕಾಡುವಲ್ಲಿ ಭುವಿ ಯಶಸ್ವಿಯಾಗಿದ್ದರು. ಅಷ್ಟೇ ಅಲ್ಲದೆ 3 ವಿಕೆಟ್ ಉರುಳಿಸಿ ಮಿಂಚಿದರು. ಆದರೆ ಇಲ್ಲಿ ವಿಶೇಷತೆ ಎಂದರೆ ಈ ಪಂದ್ಯದಲ್ಲಿ ನೋ ಬಾಲ್ ಎಸೆದಿರುವುದು. ಕ್ರಿಕೆಟ್ ಅಂಗಳದಲ್ಲಿ ನೋಬಾಲ್ ಎಂಬುದು ಸಾಮಾನ್ಯವಾಗಿ ವಿಷಯವಾಗಿದ್ದರೂ, ಭುವಿ ಪಾಲಿಗೆ ನೋ ಬಾಲ್ ಎಂಬುದು ಅತೀ ಅಪರೂಪ.

ಹೌದು, ಶ್ರೀಲಂಕಾ (Sri Lanka) ವಿರುದ್ದ 5ನೇ ಓವರ್​ನಲ್ಲಿ ಭುವನೇಶ್ವರ್ ಕುಮಾರ್ ನೋ ಬಾಲ್ ಎಸೆದರು. 2015 ರ ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭುವಿ ಕೊನೆಯ ಬಾರಿ ನೋ ಬಾಲ್ ಮಾಡಿದ್ದರು. ಇದಾಗಿ 515 ಓವರ್​ಗಳನ್ನು ಮಾಡಿದ್ದಾರೆ. ಅದರಲ್ಲಿ ಒಟ್ಟು 3093 ಎಸೆತಗಳನ್ನು ಎಸೆದಿದ್ದಾರೆ. ಅಂದರೆ 3093 ಬಾಲ್​ಗಳ ಬಳಿಕ ಭುವನೇಶ್ವರ್ ಕುಮಾರ್ ನೋ ಬಾಲ್ ಮಾಡಿದ್ದಾರೆ. ಅದು ಕೂಡ 5 ವರ್ಷಗಳ ಬಳಿಕ ಎಂಬುದು ವಿಶೇಷ.

ಇನ್ನು ಈ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ನೋ ಬಾಲ್ ಎಸೆದರೂ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಶ್ರೀಲಂಕಾ ಪರ ಅರ್ಧಶತಕ ಬಾರಿಸಿದ ಚರಿತ್ ಅಸಲಂಕಾ ಮತ್ತು ಅವಿಷ್ಕಾ ಫರ್ನಾಂಡೊ ಅವರ ವಿಕೆಟ್ ಪಡೆದರು. ಹಾಗೆಯೇ ದುಷ್ಮಂತ್ ಚಮಿರಾ ಅವರನ್ನು ಔಟ್ ಮಾಡಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 275 ರನ್ ಕಲೆಹಾಕಿತು. ಟೀಮ್ ಇಂಡಿಯಾ (Team India) ಪರ ಭುವನೇಶ್ವರ್ ಕುಮಾರ್ ಹಾಗೂ ಯುಜುವೇಂದ್ರ ಚಹಲ್ ತಲಾ 2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.

ಉಭಯ ತಂಡಗಳು ಹೀಗಿವೆ:- ಶ್ರೀಲಂಕಾ (ಪ್ಲೇಯಿಂಗ್ ಇಲೆವೆನ್): ಅವಿಷ್ಕಾ ಫರ್ನಾಂಡೊ, ಮಿನೋದ್ ಭನುಕಾ (ವಿಕೆಟ್ ಕೀಪರ್), ಭನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಾಸುನ್ ಶನಕಾ (ನಾಯಕ), ವನಿಂದು ಹಸರಂಗ, ಚಮಿಕಾ ಕರುಣರತ್ನೆ, ಕಸುನ್ ರಾಜಿತಾ, ದುಶಮಂತ್ ಚಮೀರಾ, ಲಕ್ಷನ್ ಸನ್ದಕನ್

ಭಾರತ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್

ಇದನ್ನೂ ಓದಿ: ಇದಪ್ಪಾ ಸೇಡು ಅಂದ್ರೆ!; ಶ್ರೀಲಂಕಾ ವಿರುದ್ದ ಭಾರತ ಸೋತು ಎಷ್ಟು ವರ್ಷಗಳಾಗಿವೆ ಗೊತ್ತಾ..?

ಇದನ್ನೂ ಓದಿ: ಕೃನಾಲ್ ಪಾಂಡ್ಯ ವರ್ತನೆಯಲ್ಲಿ ಸಖತ್ ಬದಲಾವಣೆ! ಇದು ರಾಹುಲ್ ದ್ರಾವಿಡ್ ಎಫೆಕ್ಟ್ ಎಂದ ನೆಟ್ಟಿಗರು; ವಿಡಿಯೋ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada