Astrology: ನಿಮ್ಮ ಜಾತಕದಲ್ಲಿ ಇದೆಯೇ ಬುಧಾದಿತ್ಯ ಯೋಗ? ಏನು ಈ ಯೋಗ ಫಲಾಫಲ ಎಂಬುದು ಗೊತ್ತೆ?

ಯಾವುದೇ ಜಾತಕದಲ್ಲಿ ಗಮನಿಸಬಹುದಾದ ಹಾಗೂ ಬಹುಸಂಖ್ಯಾತರಲ್ಲಿ ಇರುವಂಥ ಯೋಗ ಅಂದರೆ ಅದು ಬುಧಾದಿತ್ಯ ಯೋಗ. ಏನು ಈ ಯೋಗ ಹಾಗೂ ಅದರ ಫಲಗಳೇನು ಎಂಬ ವಿವರ ಇಲ್ಲಿದೆ.

Astrology: ನಿಮ್ಮ ಜಾತಕದಲ್ಲಿ ಇದೆಯೇ ಬುಧಾದಿತ್ಯ ಯೋಗ? ಏನು ಈ ಯೋಗ ಫಲಾಫಲ ಎಂಬುದು ಗೊತ್ತೆ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 09, 2021 | 6:46 AM

ಯಾರದಾದರೂ ಜಾತಕದಲ್ಲಿ ಸುಲಭವಾಗಿ ಗಮನಿಸಬಹುದಾದ ಯೋಗ ಅಂದರೆ, ಅದು ಬುಧಾದಿತ್ಯ ಯೋಗ. ಹೀಗಂದರೆ ರವಿ ಹಾಗೂ ಬುಧ ಈ ಎರಡೂ ಗ್ರಹ ಒಂದೇ ರಾಶಿಯಲ್ಲಿರುವುದು. ಈ ಎರಡೂ ಗ್ರಹದ ಚಲನೆ ವೇಗ ಹತ್ತಿರ ಹತ್ತಿರ ಒಂದೇ ಇರುವುದರಿಂದ ಬಹುತೇಕರ ಜಾತಕದಲ್ಲಿ ಈ ಯೋಗ ಇರುತ್ತದೆ. ಆದರೆ, ಜನ್ಮ ಜಾತಕದಲ್ಲಿ ಲಗ್ನದಿಂದ ಎಷ್ಟನೇ ಮನೆಯಲ್ಲಿ ಈ ಎರಡು ಗ್ರಹಗಳು ಒಟ್ಟಿಗೆ ಇವೆ ಎಂಬುದರ ಆಧಾರದಲ್ಲಿ ಯೋಗದ ಫಲಾಫಲ ನಿರ್ಧಾರ ಆಗುತ್ತದೆ. ಉತ್ತಮ ಫಲ ದೊರೆಯಬೇಕು ಎಂದಿದ್ದಲ್ಲಿ ರವಿ ಮತ್ತು ಬುಧ ಪ್ರಬಲ ಹಾಗೂ ಅನುಕೂಲವಾದ ಸ್ಥಾನದಲ್ಲೇ ಇರಬೇಕು. ಈ ಪೈಕಿ ಯಾವುದೇ ಗ್ರಹವು ನೀಚ ಸ್ಥಿಯಿಯಲ್ಲಿ ಇರಬಾರದು. ರವಿ ಗ್ರಹ ಮುಂದೆ ಇದ್ದು, ಬುಧ ಹಿಂದೆ ಇದ್ದಾಗ ಫಲ ಮತ್ತೂ ಉತ್ತಮವಾಗಿರುತ್ತದೆ. ಮತ್ತು ರವಿಯ 14 ಡಿಗ್ರಿಯ ಒಳಗೆ ಇರಬೇಕು. ಒಂದು ವೇಳೆ ರವಿಯ 3 ಡಿಗ್ರಿಯೊಳಗೆ ಅಥವಾ 27 ಡಿಗ್ರಿಯ ಆಚೆಗೆ ಇದ್ದಲ್ಲಿ ಯೋಗಕ್ಕೆ ಅಂಥ ಪ್ರಾಶಸ್ತ್ಯ ಇಲ್ಲ. ಇನ್ನು ಬುಧ ಗ್ರಹವು ರವಿಗಿಂತ 12 ಡಿಗ್ರಿ ಹೆಚ್ಚು ಮುಂದಿದ್ದಲ್ಲೂ ಯೋಗ ಉತ್ತಮ ಫಲವನ್ನು ನೀಡುತ್ತದೆ.

ಈ ಎರಡೂ ಗ್ರಹಗಳಿಗೆ ಮಿತ್ರವಾದ ಗ್ರಹಗಳ ದಶೆ ಅಥವಾ ಭುಕ್ತಿ ನಡೆಯುತ್ತಿದ್ದಲ್ಲಿ ಉತ್ತಮ ಫಲಗಳು ದೊರೆಯುತ್ತವೆ. ಅಂದ ಹಾಗೆ ಇಂದಿನ ಲೇಖನದಲ್ಲಿ ಲಗ್ನದಿಂದ ಲೆಕ್ಕ ಹಾಕಿ (ಲಗ್ನದಲ್ಲಿದ್ದಲ್ಲಿ ಒಂದನೇ ಮನೆ) ಹನ್ನೆರಡು ಮನೆಯ ಪೈಕಿ ಎಲ್ಲಿದ್ದರೆ ಏನು ಫಲ ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗುತ್ತಿದೆ.

ಒಂದನೇ ಮನೆ (ಲಗ್ನದಲ್ಲಿ) ವೃತ್ತಿಯಲ್ಲಿ ಅತ್ಯುನ್ನತ ಸ್ಥಾನಗಳು ದೊರೆಯುವವು. ಜತೆಗೆ ಯಶಸ್ಸು, ಸಂಪತ್ತು ಹಾಗೂ ಸ್ವ ಉದ್ಯೋಗದಲ್ಲಿ ಮತ್ತು ವಿವಿಧ ಬಗೆಯ ಸಂವಹನ- ಸಮಾಲೋಚನೆಯಲ್ಲಿ ಜನಪ್ರಿಯತೆ ಕೂಡ ದೊರೆಯಲಿದೆ.

ಎರಡನೇ ಮನೆ ಮಾಧ್ಯಮ, ಪತ್ರಿಕೋದ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ ಸಂವಹನಗಳ ಮೂಲಕ ಆದಾಯಕ್ಕೆ ದಾರಿಯಾಗುತ್ತದೆ. ತಂದೆಯು ಸಾಮಾಜಿಕ ಬದುಕಲ್ಲಿ ಪ್ರಖ್ಯಾತರಾಗಿರುತ್ತಾರೆ. ಇವರು ಗಾಯಕರಾಗಿಯೂ ಹೆಸರುವಾಸಿ ಆಗಬಹುದು.

ಮೂರನೇ ಮನೆ ನಟನೆ ಹಾಗೂ ನಿರೂಪಣೆ ವೃತ್ತಿಯಲ್ಲಿ ಉತ್ತಮವಾದ ಹೆಸರು ಪಡೆಯುವ ಅವಕಾಶ ಇರುತ್ತದೆ. ಸಂಗೀತ ವಾದ್ಯಗಳು, ಕಾದಂಬರಿ ರಚನೆ, ಬ್ಲಾಗಿಂಗ್ ಮೂಲಕ ಆದಾಯ ಬರುವ ಯೋಗ ಇರುತ್ತದೆ.

ನಾಲ್ಕನೇ ಮನೆ ಈ ಸ್ಥಾನದಲ್ಲಿ ಬುಧಾದಿತ್ಯ ಯೋಗ ಅಷ್ಟೇನೂ ಉತ್ತಮವಲ್ಲ. ಕೌಟುಂಬಿಕ ವಿಚಾರಗಳಲ್ಲಿ ನೆಮ್ಮದಿ ಇರುವುದಿಲ್ಲ. ಸದಾ ಜಗಳ ನಡೆಯುತ್ತಿರುತ್ತದೆ. ಒಂದಲ್ಲ ಒಂದು ಚಿಂತೆ ಇರುತ್ತದೆ.

ಐದನೇ ಮನೆ ಇವರಿಗೆ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳ ಜತೆಗೆ ರಹಸ್ಯ ಸಂಬಂಧಗಳು ಇರುತ್ತವೆ. ಆದರೆ ಕೇಳಿಸಿಕೊಳ್ಳುವ ವಿಚಾರದಲ್ಲಿ ಬಹಳ ಅದೃಷ್ಟವಂತರು ಮತ್ತು ವಿರುದ್ಧ ಲಿಂಗಿಗಳ ಮಧ್ಯದಲ್ಲಿ ಖ್ಯಾತಿ ಪಡೆದಿರುತ್ತಾರೆ.

ಆರನೇ ಮನೆ ಕಾನೂನು ವ್ಯಾಜ್ಯ ಹಾಗೂ ವ್ಯವಹಾರಗಳಲ್ಲಿ ಆರಂಭಿಕ ಸಮಸ್ಯೆಗಳನ್ನು ಎದುರಿಸಿದರೂ ನಂತರದಲ್ಲಿ ಲಾಭವಿದೆ. ಕೋರ್ಟ್ ಪ್ರಕರಣಗಳಲ್ಲಿ ಗೆಲುವು ಸಾಧಿಸುತ್ತಾರೆ. ನ್ಯಾಯಯುತ ನಡವಳಿಕೆ ಹಾಗೂ ಪ್ರಾಮಾಣಿಕತೆಯು ಇವರನ್ನು ವೃತ್ತಿಯಲ್ಲಿ ಕೀರ್ತಿಯ ಕಡೆಗೆ ಹಾಗೂ ಗೌರವದ ಕಡೆಗೆ ಮುನ್ನಡೆಸುತ್ತದೆ.

ಏಳನೇ ಮನೆ ಪ್ರೀತಿ- ಪ್ರೇಮದ ವಿಚಾರದಲ್ಲಿ ಬಹಳ ಸಂತೋಷ ಇರುತ್ತದೆ. ಸಂಗಾತಿಯು ಪ್ರತಿಭಾವಂತರಾಗಿರುತ್ತಾರೆ. ಜತೆಗೆ ಅದೃಷ್ಟವೂ ಇರುತ್ತದೆ. ಸಂಗಾತಿಯ ಕೌಶಲ, ನೈಪುಣ್ಯ, ಸ್ಥಾನಮಾನದ ಕಾರಣಕ್ಕೆ ಇವರಿಗೆ ಅನುಕೂಲ ಆಗುತ್ತದೆ.

ಎಂಟನೇ ಮನೆ ಸಂಗಾತಿಯಿಂದ ಸಾಂಸಾರಿಕ ಸುಖ ದೊರೆಯುವುದಿಲ್ಲ. ಕೆಲವು ಸಲ ಪೋಷಕರಿಂದ ದೂರವಾಗಬೇಕಾಗುತ್ತದೆ. ಉಳಿದವರಿಗಿಂತ ಭಿನ್ನವಾದ ಆಲೋಚನೆ ಇರುತ್ತದೆ.

ಒಂಬತ್ತನೇ ಮನೆ ತಂದೆ ಹಾಗೂ ತಾಯಿ ಕಡೆ ಸಂಬಂಧಿಕರಿಮದ ಸಂತೋಷ ಮತ್ತು ಸಂಪತ್ತಿನ ಗಳಿಕೆ ಆಗುತ್ತದೆ. ಸೇವಾ ವಲಯದಲ್ಲಿ ದುಡಿಯುವ ಇವರಿಗೆ ನಗದು ಹಣಕ್ಕೆ ಸಮಸ್ಯೆ ಆಗುವುದಿಲ್ಲ.

ಹತ್ತನೇ ಮನೆ ಇವರು ಹೆಸರಾಂತ ಮಿಮಿಕ್ರಿ ಕಲಾವಿದ ಆಗುವಂಥ ಯೋಗ ಇದೆ. ಅಥವಾ ಯಶಸ್ಸು ಲಭಿಸಿ, ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಸಂಪತ್ತು ಗಳಿಸುತ್ತಾರೆ,

ಹನ್ನೊಂದನೇ ಮನೆ ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿ ಇರುವ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಮೂಲಕ ಲಾಭವಾಗುತ್ತದೆ. ಉದ್ಯಮದಲ್ಲಿ ದೊಡ್ಡ ಹೆಸರು ಹಾಗೂ ಯಶಸ್ಸು ಗಳಿಸುತ್ತೀರಿ.

ಹನ್ನೆರಡನೇ ಮನೆ ಶ್ರಮ ಪಟ್ಟ ನಂತರ ಸಂಶೋಧನೆ, ಜ್ಯೋತಿಷ, ಸಂಖ್ಯಾಶಾಸ್ತ್ರ ಮತ್ತಿತರ ನಿಗೂಢ ವಿದ್ಯೆಗಳಲ್ಲಿ ಪಾರಂಗತರಾಗುತ್ತಾರೆ. ಹೆಸರಾಂತ ಧರ್ಮಗುರು ಎನಿಸಿಕೊಂಡು, ಲಕ್ಷಾಂತರ ಮಂದಿ ಅನುಯಾಯಿಗಳನ್ನು ಹೊಂದುತ್ತಾರೆ.

ಇದನ್ನೂ ಓದಿ: Solar Eclipse: ಸೂರ್ಯ ಗ್ರಹಣದ ಪ್ರಭಾವ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಮೇಲೆ ಹೇಗಿದೆ?

(What is Budhaditya yoga according to astrology? How it’s impact on native? Here is an explainer)

ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ