Solar Eclipse: ಸೂರ್ಯ ಗ್ರಹಣದ ಪ್ರಭಾವ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಮೇಲೆ ಹೇಗಿದೆ?

Solar eclipse 2021 zodiac impact: 2021ರ ಜೂನ್​ ತಿಂಗಳಲ್ಲಿ ನಡೆಯುವ ಸೂರ್ಯ ಗ್ರಹಣದ ಪ್ರಭಾವ ದ್ವಾದಶ ರಾಶಿಗಳ ಮೇಲೆ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Solar Eclipse: ಸೂರ್ಯ ಗ್ರಹಣದ ಪ್ರಭಾವ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಮೇಲೆ ಹೇಗಿದೆ?
ರಾಶಿ ಚಕ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 08, 2021 | 6:53 AM

ಇದೇ ತಿಂಗಳು, ಜೂನ್ 10, 2021ರ ಮಧ್ಯಾಹ್ನ 1.42ರಿಂದ ಸಂಜೆ 6.41ರ ತನಕ ರಾಹುಗ್ರಸ್ತ ಸೂರ್ಯ ಗ್ರಹಣವು ಸಂಭವಿಸಲಿದೆ. ನಿಮಗೆ ಗೊತ್ತಿರಲಿ, ಸೂರ್ಯ ಗ್ರಹಣ ನಡೆಯುವುದು ಅಮಾವಾಸ್ಯೆ ದಿನದಲ್ಲಾದರೆ, ಚಂದ್ರ ಗ್ರಹಣವು ಪೌರ್ಣಮಿಯಂದು ಸಂಭವಿಸಲಿದೆ. ಇನ್ನು ಗ್ರಹಣವು ರಾಹು ಗ್ರಸ್ತವಾಗಿರಬೇಕು ಅಥವಾ ಕೇತುಗ್ರಸ್ತವಾಗಿರಬೇಕು. ಅಂದರೆ ರಾಹು- ಕೇತುಗಳು ಇರುವ ಮನೆಗಳಲ್ಲೇ (ರಾಶಿಗಳಲ್ಲಿ) ಸಂಭವಿಸುತ್ತದೆ. ಈ ಬಾರಿ ರಾಹು ಇರುವಂಥ ವೃಷಭ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಇದು ರಾಹುಗ್ರಸ್ತ ಸೂರ್ಯ ಗ್ರಹಣ. ಭಾರತದಲ್ಲಿ ಎಲ್ಲ ಕಡೆಗೂ ಇದೇನೂ ಗೋಚರ ಆಗುವುದಿಲ್ಲ. ಆದ್ದರಿಂದ ಧಾರ್ಮಿಕ ಆಚರಣೆಗಳು ಯಾವುದೂ ಇಲ್ಲ. ಎಲ್ಲೆಲ್ಲಿ ಗೋಚರಿಸುತ್ತದೋ ಅಲ್ಲಿ ಗ್ರಹಣದ ಆದಿ-ಮಧ್ಯ ಹಾಗೂ ಅಂತ್ಯ ಕಾಲದಲ್ಲಿ ಆಚರಣೆಗಳು, ಧಾರ್ಮಿಕ ವಿಧಿ- ವಿಧಾನಗಳನ್ನು ಅನುಸರಿಸುವುದು ಕಡ್ಡಾಯ.

ಅಶುಭ ಫಲಗಳಿರುವ ರಾಶಿಗಳು: ವೃಷಭ, ಮಿಥುನ, ತುಲಾ ಹಾಗೂ ಕುಂಭ

ಮಧ್ಯಮ ಫಲಗಳಿರುವ ರಾಶಿಗಳು: ಮಕರ, ಸಿಂಹ, ವೃಶ್ಚಿಕ ಹಾಗೂ ಮೇಷ

ಶುಭ ಫಲಗಳಿರುವ ರಾಶಿಗಳು: ಮೀನ, ಧನುಸ್ಸು, ಕಟಕ, ಕನ್ಯಾ

ಇಲ್ಲಿ ಯಾವ ರಾಶಿಗಳಿಗೆ ಅಶುಭ ಫಲ ಎಂದಿದೆಯೋ ಅಂಥವರು ತಮ್ಮ ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಕಣ್ಣು, ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಎದುರಾದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡಬೇಕು. ಸರ್ಕಾರದೊಂದಿಗೆ, ಅದರಲ್ಲೂ ಐಟಿ, ಇಡಿ, ಸಿಬಿಐ ಇಂಥ ತನಿಖಾ ಸಂಸ್ಥೆಗಳಿಂದ ಕಿರಿಕಿರಿ ಆಗಬಹುದು. ಇಲ್ಲದಿದ್ದಲ್ಲಿ ಸರ್ಕಾರಕ್ಕೆ ಯಾವ ರೂಪದಲ್ಲಾದರೂ ದೊಡ್ಡ ಮಟ್ಟದಲ್ಲಿ ದಂಡ ಕಟ್ಟುವಂತಾಗುತ್ತದೆ. ಸಾಧ್ಯವಾದಷ್ಟೂ ವಾಹನ ಚಾಲನೆ ವೇಳೆಯಲ್ಲಿ ಎಚ್ಚರಿಕೆಯಿಂದ ಇರಬೇಕು. ಇನ್ನು ರವಿಯ ಜಪ, ಗೋದಿ ಹಾಗೂ ಕೆಂಪು ಬಟ್ಟೆಯನ್ನು ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ದಕ್ಷಿಣೆ ಸಹಿತ ದಾನ ಮಾಡಬೇಕು.

ದ್ವಾದಶ ರಾಶಿಗಳಿಗೆ ಏನು ಫಲ ಎಂದು ನೋಡುವುದಾದರೆ, ಹೀಗಿದೆ: ಮೇಷ: ಬರಬೇಕಾದ ಹಣ ತಡವಾದರೂ ಕೈಗೆ ಸಿಗುವಂಥ ಸಾಧ್ಯತೆ ಇದೆ. ಮಾತುಕತೆಯನ್ನು ಜೋಪಾನವಾಗಿ ಆಡಬೇಕು. ನೀವಾಗಿಯೇ ಮಾತು ಕೊಟ್ಟು ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಗಂಡು ಮಕ್ಕಳಿದ್ದಲ್ಲಿ ಅವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

ವೃಷಭ: ನಿಮ್ಮ ರಾಶಿಯಲ್ಲೇ ಗ್ರಹಣ ನಡೆಯುವುದರಿಂದ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಆರೋಗ್ಯದಲ್ಲಿ ಸಣ್ಣ- ಪುಟ್ಟದ್ದು ಎಂದು ಯಾವುದಕ್ಕೂ ನಿರ್ಲಕ್ಷ್ಯ ಮಾಡಬೇಡಿ. ತಂದೆಯ ಜತೆಗೆ ಜಗಳ ಒಳ್ಳೆಯದಲ್ಲ.

ಮಿಥುನ: ಸೋದರ- ಸೋದರಿಯರಿಂದ ನಷ್ಟ ಸಂಭವಿಸುವ ಸಾಧ್ಯತೆ ಇದೆ. ನೀವು ವಹಿಸಿದ ಕೆಲಸ ಪೂರ್ಣ ಮಾಡದೆ, ನಷ್ಟ ಉಂಟು ಮಾಡಲಿದ್ದಾರೆ. ಅನಿರೀಕ್ಷಿತವಾಗಿ ಎದುರಾಗುವ ಖರ್ಚುಗಳನ್ನು ನಿಭಾಯಿಸಲಾಗದೆ ಎಫ್​ಡಿ ಅಥವಾ ಬ್ಯಾಂಕ್ ಹಣ ತೆಗೆಯಬೇಕಾಗಬಹುದು.

ಕಟಕ: ಲಾಭದ ಪ್ರಮಾಣದಲ್ಲಿ ಹೆಚ್ಚಳ ಆಗಲಿದೆ. ಆದಾಯ ಮೂಲವು ಜಾಸ್ತಿಯಾಗಿ, ಅಂದುಕೊಂಡಿದ್ದಕ್ಕಿಂತ ಜಾಸ್ತಿ ಹಣ ಬರಲಿದೆ. ಸರ್ಕಾರಿ ಅಧಿಕಾರಿಗಳ ಪ್ರಭಾ ವಲಯ ವಿಸ್ತಾರ ಆಗಲಿದೆ. ನಿಮ್ಮ ಮಾತಿನ ಮೂಲಕ ಇತರರಿಗೆ ನೆರವು ನೀಡಲಿದ್ದೀರಿ.

ಸಿಂಹ: ಸರ್ಕಾರಿ ಕೆಲಸಗಳಲ್ಲಿ ಇರುವವರಿಗೆ ಉದ್ಯೋಗದಲ್ಲಿ ಸ್ಥಾನಮಾನ, ಜವಾಬ್ದಾರಿಗಳು ಜಾಸ್ತಿ ಆಗಲಿವೆ. ಆದರೆ ಅದಕ್ಕಾಗಿ ಹೆಚ್ಚಿನ ಶ್ರಮವನ್ನು ಹಾಕಬೇಕಾಗುತ್ತದೆ. ಮನೆಯಲ್ಲಿ ಶುಭ ಕಾರ್ಯಗಳ ನೇತೃತ್ವವನ್ನು ವಹಿಸುವಂತೆ ನಿಮ್ಮನ್ನು ಕೇಳಲಿದ್ದಾರೆ.

ಕನ್ಯಾ: ಪಿತ್ರಾರ್ಜಿತ ಆಸ್ತಿ ಬರುವ ಸಾಧ್ಯತೆ ಇದೆ. ಆದರೆ ಈ ಸಂದರ್ಭದಲ್ಲಿ ಅದನ್ನು ಉಳಿಸಿಕೊಳ್ಳುವ ಸಲುವಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಇತರರಿಗೆ ಸಹಾಯ ಮಾಡಲಿದ್ದೀರಿ.

ತುಲಾ: ನೀವು ಬಹಳ ಎಚ್ಚರಿಕೆಯಿಂದ ಇರಬೇಕು. ಮುಖ್ಯವಾಗಿ ಆರೋಗ್ಯ ವಿಚಾರದಲ್ಲಿ ಬಹಳ ಹುಷಾರಾಗಿರಬೇಕು. ಸರ್ಕಾರದ ಕಾಗದ ಪತ್ರಗಳು, ವ್ಯವಹಾರದಲ್ಲಿ ಮೈ ತುಂಬಾ ಕಣ್ಣಾಗಿರಬೇಕು, ಇಲ್ಲದಿದ್ದಲ್ಲಿ ದೀರ್ಘ ಕಾಲದ ಸಮಸ್ಯೆಗಳನ್ನು ತಂದುಕೊಳ್ಳುತ್ತೀರಿ.

ವೃಶ್ಚಿಕ: ಸಂಸಾರದಲ್ಲಿ ಸಣ್ಣ ಮಟ್ಟಿಗಾದರೂ ಕಿರಿಕಿರಿ, ನೀವು ಹೇಳುವುದೇ ಒಂದು- ಸಂಗಾತಿ ಅರ್ಥ ಮಾಡಿಕೊಳ್ಳುವುದೇ ಮತ್ತೊಂದು ಎಂಬಂತಾಗುತ್ತದೆ. ಆದರೆ ಪಾರ್ಟನರ್​ಷಿಪ್ ವ್ಯವಹಾರ ಮಾಡುವವರಿಗೆ ಲಾಭವು ಬರೋದು ತಡವಾಗಬಹುದು. ಆದರೆ ಕೈ ಸೇರುತ್ತದೆ.

ಧನುಸ್ಸು: ಬಹಳ ಕಾಲದಿಂದ ಮಾರಾಟಕ್ಕೆ ಇಟ್ಟಿದ್ದ ಆಸ್ತಿಗೆ ಸೂಕ್ತ ಗ್ರಾಹಕರು ದೊರೆಯುವಂಥ ಸಾಧ್ಯತೆ ಇದೆ. ಸರ್ಕಾರದಲ್ಲಿ ಬಾಕಿ ಉಳಿದ ಕೆಲಸ- ಕಾರ್ಯಗಳಿಗೆ ವೇಗ ದೊರೆಯಲಿದೆ. ಹಣಕಾಸಿನ ಹರಿವು ಜಾಸ್ತಿ ಆಗಲಿದೆ.

ಮಕರ: ಕೋರ್ಟ್- ಕಚೇರಿ ವ್ಯಾಜ್ಯಗಳಿದ್ದಲ್ಲಿ ಸಂಧಾನಕ್ಕೆ ಅವಕಾಶಗಳು ದೊರೆಯುತ್ತವೆ. ಇನ್ನು ಗಂಡುಮಕ್ಕಳ ಆರೋಗ್ಯದ ಕಡೆಗೆ ಹೆಚ್ಚು ಲಕ್ಷ್ಯ ವಹಿಸಿರಿ. ಯಾರ ಜತೆಗೆ ಸ್ನೇಹ ಮಾಡುತ್ತಿದ್ದಾರೆ ಎಂಬ ಕಡೆಗೆ ಗಮನ ನೀಡಿ. ಜವಾಬ್ದಾರಿಯಿಂದ ತಪ್ಪಿಸಿಕೊಳ್ಳದಿರಿ.

ಕುಂಭ: ಮಾತಿನ ಮೂಲಕ ಸಮಸ್ಯೆಗಳನ್ನು ತಂದುಕೊಳ್ಳಲಿದ್ದೀರಿ. ನಿಮಗೆ ಸಂಬಂಧಪಡದ ವಿಷಯ ಇದ್ದರಂತೂ ಬಾಯಿ ತೆರೆಯದಿರಿ. ತಾಯಿ ಕಡೆಯ ಸಂಬಂಧಿಕರಿಂದ ನಷ್ಟ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಕೈ ಅಳತೆಗೆ ಮೀರಿದ ಕೆಲಸವನ್ನು ಒಪ್ಪಿಕೊಳ್ಳದಿರಿ.

ಮೀನ: ನಿಮಗೆ ಬರಬೇಕಾದ ಬಾಕಿ ಹಣ ಇದ್ದಲ್ಲಿ ಬರುವ ಸಾಧ್ಯತೆ ಇದೆ. ಶತ್ರುಗಳು ನಿಮಗೆ ಉಪದ್ರವ ನೀಡಬೇಕು ಎಂದು ಮಾಡಿದ ಕೆಲಸವು ಅನುಕೂಲವಾಗಿ ಮಾರ್ಪಡುತ್ತದೆ. ಕೈ ಸೇರುವ ಹಣವನ್ನು ಜೋಪಾನ ಮಾಡಿಟ್ಟುಕೊಳ್ಳಿ.

ಇದನ್ನೂ ಓದಿ: Solar Eclipse 2021: ವರ್ಷದ ಮೊದಲ ಸೂರ್ಯಗ್ರಹಣಕ್ಕೆ ದಿನಗಣನೆ; ಬೆಂಕಿಯ ಉಂಗುರದಂತೆ ಕಾಣುವ ಗ್ರಹಣ ಎಲ್ಲೆಲ್ಲಿ ಗೋಚರ?

(Here is the astrology impact of solar eclipse 2021 June, from Aries to Pisces)

ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ