AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Solar Eclipse 2021: ವರ್ಷದ ಮೊದಲ ಸೂರ್ಯಗ್ರಹಣಕ್ಕೆ ದಿನಗಣನೆ; ಬೆಂಕಿಯ ಉಂಗುರದಂತೆ ಕಾಣುವ ಗ್ರಹಣ ಎಲ್ಲೆಲ್ಲಿ ಗೋಚರ?

ಸದರಿ ಗ್ರಹಣದ ಸಂದರ್ಭದಲ್ಲಿ ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಯಿಂದ ಸಾಕಷ್ಟು ದೂರಕ್ಕೆ ಇರುವ ಕಾರಣ ಸೂರ್ಯನನ್ನು ಸಂಪೂರ್ಣ ಮುಚ್ಚಲು ವಿಫಲವಾಗಿ ಮಧ್ಯಭಾಗವನ್ನಷ್ಟೇ ಆಕ್ರಮಿಸುತ್ತಾನೆ. ಆಗ ಸೂರ್ಯನ ಹೊರ ಭಾಗವಷ್ಟೇ ವೃತ್ತಾಕಾರದಲ್ಲಿ ಕಾಣಿಸಲಿದ್ದು ಅದು ಬೆಂಕಿಯ ಉಂಗುರದಂತೆ ಗೋಚರಿಸಲಿದೆ.

Solar Eclipse 2021: ವರ್ಷದ ಮೊದಲ ಸೂರ್ಯಗ್ರಹಣಕ್ಕೆ ದಿನಗಣನೆ; ಬೆಂಕಿಯ ಉಂಗುರದಂತೆ ಕಾಣುವ ಗ್ರಹಣ ಎಲ್ಲೆಲ್ಲಿ ಗೋಚರ?
ಸಂಗ್ರಹ ಚಿತ್ರ
TV9 Web
| Edited By: |

Updated on: Jun 07, 2021 | 1:08 PM

Share

ಬೆಂಗಳೂರು: ಆಗಸದಲ್ಲಿ ಆಗಾಗ ಮರುಕಳಿಸುವ ಕೌತುಕ ಗ್ರಹಣ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಚಂದ್ರಗ್ರಹಣಕ್ಕೆ ಭೂಮಿಯ ಕೆಲ ಪ್ರದೇಶಗಳು ಸಾಕ್ಷಿಯಾಗಿದ್ದು, ಇದೀಗ ಜೂನ್ 10ರಂದು ವರ್ಷದ ಮೊದಲ ಸೂರ್ಯಗ್ರಹಣ ಘಟಿಸಲಿದೆ. ಈ ಬಾರಿ ಉಂಗುರ ತೊಡಿಸಿದ ರೀತಿಯಲ್ಲಿ ಸೂರ್ಯ ಗ್ರಹಣ ಕಾಣಿಸಲಿದ್ದು ಅದನ್ನು ರಿಂಗ್ ಆಫ್ ಫೈರ್ ಅರ್ಥಾತ್ ಬೆಂಕಿಯ ಉಂಗುರ ಎಂದು ಬಣ್ಣಿಸಲಾಗಿದೆ. ಆಂಗ್ಲ ಕ್ಯಾಲೆಂಡರ್ ಅನುಸಾರ ವರ್ಷದ ಮಧ್ಯಭಾಗದಲ್ಲಿ ಕಾಣುತ್ತಿರುವ ಈ ಸೂರ್ಯಗ್ರಹಣವು 2021ರ ಮೊದಲ ಸೂರ್ಯ ಗ್ರಹಣವಾಗಿದೆ.

ಸ್ಪೇಸ್.ಕಾಂ ವರದಿಯ ಪ್ರಕಾರ ಪ್ರಸ್ತುತ ಗ್ರಹಣದ ಸಂದರ್ಭದಲ್ಲಿ ಸೂರ್ಯನ 10ನೇ ಒಂದು ಭಾಗದಷ್ಟು ಬೆಳಕು ಮಾತ್ರ ಕಾಣಿಸಲಿದೆ. ಕೆಲವೊಂದು ಭಾಗದಲ್ಲಿ ಅದರಲ್ಲೂ ಮುಖ್ಯವಾಗಿ ಧ್ರುವ ಪ್ರದೇಶದಲ್ಲಿ ತಕ್ಕಮಟ್ಟಿಗೆ ಕತ್ತಲಾವರಿಸಲಿದ್ದು ಸರಿಸುಮಾರು 3ನಿಮಿಷ 51ಸೆಕೆಂಡುಗಳ ಕಾಲ ಈ ಪ್ರಮಾಣದ ಸೂರ್ಯಗ್ರಹಣ ಇರಲಿದೆ ಎಂದು ತಿಳಿದುಬಂದಿದೆ.

ಬೆಂಕಿಯ ಉಂಗುರ ಎನ್ನಲು ಕಾರಣವೇನು? ಸದರಿ ಗ್ರಹಣದ ಸಂದರ್ಭದಲ್ಲಿ ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಯಿಂದ ಸಾಕಷ್ಟು ದೂರಕ್ಕೆ ಇರುವ ಕಾರಣ ಸೂರ್ಯನನ್ನು ಸಂಪೂರ್ಣ ಮುಚ್ಚಲು ವಿಫಲವಾಗಿ ಮಧ್ಯಭಾಗವನ್ನಷ್ಟೇ ಆಕ್ರಮಿಸುತ್ತಾನೆ. ಆಗ ಸೂರ್ಯನ ಹೊರ ಭಾಗವಷ್ಟೇ ವೃತ್ತಾಕಾರದಲ್ಲಿ ಕಾಣಿಸಲಿದ್ದು ಅದು ಬೆಂಕಿಯ ಉಂಗುರದಂತೆ ಗೋಚರಿಸಲಿದೆ.

ಯಾವ ಸಮಯದಲ್ಲಿ ಗ್ರಹಣ ಘಟಿಸಲಿದೆ? ಎಲ್ಲೆಲ್ಲಿ ಕಾಣಲಿದೆ? ಟೈಮ್‌ ಆ್ಯಂಡ್‌ ಡೇಟ್ ಡಾಟ್‌ ಕಾಂ ಜಾಲತಾಣದ ವರದಿ ಪ್ರಕಾರ ಜೂನ್ 10ರಂದು ಸಂಭವಿಸಲಿರುವ ಸೂರ್ಯಗ್ರಹಣ ಭಾರತೀಯ ಕಾಲಮಾನದಲ್ಲಿ ಮಧ್ಯಾಹ್ನ 1:42ಕ್ಕೆ ಆರಂಭಗೊಂಡು ಸಂಜೆ 6:41ಕ್ಕೆ ಕೊನೆಗೊಳ್ಳಲಿದೆ. ಅಮೆರಿಕದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ನಾಸಾ ತಿಳಿಸಿರುವ ಪ್ರಕಾರ ಕೆನಡಾ, ಗ್ರೀನ್‌ಲ್ಯಾಂಡ್ ಮತ್ತು ರಷ್ಯಾದಲ್ಲಿ ಗ್ರಹಣ ಗೋಚರವಾಗಲಿದೆ. ಕೆನಡಾದಲ್ಲಿ ಮೂರು ನಿಮಿಷಗಳ ಕಾಲ ಗ್ರಹಣ ಗೋಚರಿಸಲಿದ್ದು, ಗ್ರಹಣ ಪೂರ್ಣಪ್ರಮಾಣದಲ್ಲಿ ಇದ್ದಾಗ ಗ್ರೀನ್‌ಲ್ಯಾಂಡ್‌ನಲ್ಲಿ ಕಾಣಿಸಲಿದೆ. ಅಂತೆಯೇ, ಸೈಬೀರಿಯಾ ಮತ್ತು ಉತ್ತರ ಧ್ರುವ ಭಾಗದಲ್ಲಿಯೂ ಕಾಣಿಸಲಿರುವ ಗ್ರಹಣವು, ಭಾರತ ಹಾಗೂ ಅಮೆರಿಕದಲ್ಲಿ ಕಾಣಿಸುವುದಿಲ್ಲ. ಆದರೆ, ಪೂರ್ವ ಕರಾವಳಿ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಭಾಗಶಃ ಗೋಚರವಾಗಲಿದೆ. ಈ ವರ್ಷದ ಇನ್ನೊಂದು ಸೂರ್ಯಗ್ರಹಣ ವರ್ಷಾಂತ್ಯದ ಸಂದರ್ಭದಲ್ಲಿ ಅಂದರೆ ಡಿಸೆಂಬರ್ 4ಕ್ಕೆ ಘಟಿಸಲಿದ್ದು, ಅದು ಕೂಡಾ ಭಾರತಕ್ಕೆ ಅಗೋಚರ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಭೂಮಿಗೆ ತಾಗುವಷ್ಟು ಹತ್ತಿರಕ್ಕೆ ಬಂದ ದೈತ್ಯಾಕಾರದ ಚಂದ್ರ, ಗ್ರಹಣದ ದಿನ ಹೀಗೆಲ್ಲಾ ಆಗುತ್ತಾ? ಇಲ್ಲಿದೆ ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು 

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?