ಭೂಮಿಗೆ ತಾಗುವಷ್ಟು ಹತ್ತಿರಕ್ಕೆ ಬಂದ ದೈತ್ಯಾಕಾರದ ಚಂದ್ರ, ಗ್ರಹಣದ ದಿನ ಹೀಗೆಲ್ಲಾ ಆಗುತ್ತಾ? ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಅಸಲಿಯತ್ತು
ಈ ವಿಡಿಯೋ ನೋಡುವುದಕ್ಕೆ ರೋಮಾಂಚನಕಾರಿ ಎನಿಸುತ್ತದೆಯಾದರೂ ಇದೊಂದು ಕೃತಕ ದೃಶ್ಯ. ಅಂದರೆ, ಇದು ಅನಿಮೇಟೆಡ್ ವಿಡಿಯೋವಾಗಿದ್ದು ಸತ್ಯಕ್ಕೆ ದೂರವಾಗಿದೆ.
ಆಗಸದಲ್ಲಿ ನಡೆಯುವ ಕೌತುಕಗಳು ಪ್ರತಿಬಾರಿಯೂ ಒಂದಷ್ಟು ಕಾಲ ಸದ್ದು ಮಾಡುತ್ತಾ ಗಮನ ಸೆಳೆಯುತ್ತಿರುತ್ತವೆ. ವೈಜ್ಞಾನಿಕ, ಆಧ್ಯಾತ್ಮಿಕ ಆಯಾಮಗಳು ಸೇರಿ ಗ್ರಹಣ, ಸೂರ್ಯನ ಪಥ ಬದಲಾವಣೆ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಹೊಸ ಹೊಸ ಚರ್ಚೆಗಳನ್ನು ಹುಟ್ಟುಹಾಕುತ್ತವೆ. ಇದೀಗ ಮೊನ್ನೆಯಷ್ಟೇ ಘಟಿಸಿದ ರಕ್ತ ಚಂದ್ರ ಗ್ರಹಣ (Super Blood Moon) ಸದ್ಯ ಭಾರೀ ಸುದ್ದಿಯಲ್ಲಿದೆ. ಅಬ್ಬಬ್ಬಾ ಗ್ರಹಣದ ಹೊತ್ತಲ್ಲಿ ಇಂಥದ್ದೆಲ್ಲಾ ನಡೆಯುತ್ತಾ ಎಂದು ಜನ ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡುತ್ತಿದ್ದಾರೆ. ಆದರೆ, ಈ ಕುತೂಹಲ ವೈಜ್ಞಾನಿಕ, ಆಧ್ಯಾತ್ಮಿಕ ಆಯಾಮಗಳಿಗೆ ಸಂಬಂಧಿಸಿದ್ದಲ್ಲ. ಬದಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.
ಆರ್ಕ್ಟಿಕ್ ಸಮೀಪ ಚಿತ್ರೀಕರಿಸಲಾದ ದೃಶ್ಯ ಎಂದು ಹರಿದಾಡುತ್ತಿರುವ 30 ಸೆಕೆಂಡಿನ ವಿಡಿಯೋದಲ್ಲಿ ದೈತ್ಯ ಚಂದ್ರ ಭೂಮಿಗೆ ಅತ್ಯಂತ ಸನಿಹದಲ್ಲಿ ಹಾದು ಹೋಗಿ ಕೆಲವು ಕ್ಷಣ ಸೂರ್ಯನನ್ನು ಮರೆ ಮಾಡಿ ನಂತರ ತಾನೂ ಮರೆಯಾಗುತ್ತಾನೆ. ಈ ವಿಡಿಯೋ ತುಣುಕು ಭಾರೀ ವೈರಲ್ ಆಗಿದ್ದು ಇದರ ಸತ್ಯಾಸತ್ಯತೆ ಬಗ್ಗೆ ಜನ ತಲೆಕೆಡಿಸಿಕೊಂಡಿದ್ದಾರೆ. ಟ್ವಿಟರ್ ಸೇರಿದಂತೆ ಎಲ್ಲೆಡೆ ಹರಿದಾಡುತ್ತಿರುವ ಈ ವಿಡಿಯೋವನ್ನು ನೋಡಿ ಭೂಮಿಯ ಮೇಲೆ ನಿಂತು ಇಂಥದ್ದೊಂದು ವಿಸ್ಮಯವನ್ನು ನೋಡುವುದು ಸಾಧ್ಯವೆಂದು ಇಷ್ಟು ವರ್ಷ ತಿಳಿದೇ ಇರಲಿಲ್ಲವಲ್ಲಾ ಎಂದು ಯೋಚಿಸುತ್ತಿದ್ದಾರೆ.
Imagine sitting in this place during the day (between Russia and Canada in the Arctic). The moon appears at this size and then disappears in about 30 seconds and blocks the sun for five seconds ….on its way ! Glory be to God Almighty !#LunarEclipse2021 #LunarEclipse pic.twitter.com/voH7B2btCj
— Arun Deshpande (@ArunDeshpande20) May 26, 2021
ರಷ್ಯಾ ಮತ್ತು ಕೆನಡಾದ ಮಧ್ಯೆ ಆರ್ಕ್ಟಿಕ್ ಸನಿಹದಲ್ಲಿ ಕೂತು ಈ ದೃಶ್ಯವನ್ನು ಸವಿಯುವುದು ಹೇಗಿರುತ್ತದೆ ಎಂದು ಕಲ್ಪಿಸಿಕೊಳ್ಳಿ. 30 ಸೆಕೆಂಡುಗಳ ಕಾಲ ಹಾದು ಹೋಗುವ ಚಂದ್ರ ಅತ್ಯಂತ ದೈತ್ಯನಾಗಿ ಕಂಡು, 5 ಸೆಕೆಂಡು ಸೂರ್ಯನನ್ನು ಮರೆಮಾಡುವುದು ಎಷ್ಟು ಚೆನ್ನಾಗಿರುತ್ತದೆ. ಇದರ ಶ್ರೇಯಸ್ಸು ದೇವರಿಗೇ ಸಲ್ಲಬೇಕು ಎಂದು ಬರೆದುಕೊಂಡಿರುವ ಈ ವಿಡಿಯೋ ನೋಡುವುದಕ್ಕೆ ರೋಮಾಂಚನಕಾರಿ ಎನಿಸುತ್ತದೆಯಾದರೂ ಇದೊಂದು ಕೃತಕ ದೃಶ್ಯ. ಅಂದರೆ, ಇದು ಅನಿಮೇಟೆಡ್ ವಿಡಿಯೋವಾಗಿದ್ದು ಸತ್ಯಕ್ಕೆ ದೂರವಾಗಿದೆ.
ಟಿಕ್ಟಾಕ್ನ ಅಲೆಕ್ಸಿ ಎಂಬ ಖಾತೆಯಲ್ಲಿ ಮೊದಲು ಈ ವಿಡಿಯೋ ಕಾಣಿಸಿಕೊಂಡಿದ್ದು ನಂತರ ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೆಯಾಗಿದೆ. ನೋಡುವುದಕ್ಕೆ ಅಚ್ಚರಿ ಮೂಡಿಸುವ ಈ ವಿಡಿಯೋವನ್ನು ಸಾಕಷ್ಟು ಜನ ಸತ್ಯ ಎಂದೇ ಭಾವಿಸಿ ಹಂಚಿಕೊಂಡಿದ್ದರು. ಅಲ್ಲದೇ ಸಾಕಷ್ಟು ಮಂದಿ ಜೀವಮಾನದಲ್ಲಿ ಒಮ್ಮೆಯಾದರೂ ಆ ಸ್ಥಳಕ್ಕೆ ಹೋಗಿ ಚಂದ್ರನನ್ನು ಅಷ್ಟು ಹತ್ತಿರದಿಂದ ನೋಡಬೇಕು ಎಂದು ಆಸೆ ಪಟ್ಟಿದ್ದರು. ಆದರೆ, ಇದು ಅನಿಮೇಟೆಡ್ ವಿಡಿಯೋ ಆಗಿರುವ ಕಾರಣ ಚಂದ್ರ ಅಷ್ಟು ಸನಿಹಕ್ಕೆ ಬರುವುದಾಗಲೀ, ನೀವು ಆರ್ಕ್ಟಿಕ್ನಲ್ಲಿ ಕುಳಿತು ಅದನ್ನು ಆನಂದಿಸುವುದಾಗಲೀ ಸಾಧ್ಯವಾಗುವುದಿಲ್ಲ.
Many questions about this obvious CG/VFX animation. My only problem is that I haven’t found the artist yet. Does anyone know the source? This clip reminds of this animation from 2013: https://t.co/OCbZaPcIVU https://t.co/XZu9Q1qG06
— HoaxEye (@hoaxeye) May 26, 2021
ಇದನ್ನೂ ಓದಿ: ಪ್ರಧಾನಿ ಮೋದಿ ಕಣ್ಣೀರಿನ ಬಗ್ಗೆ ನ್ಯೂಯಾರ್ಕ್ ಟೈಮ್ಸ್ನಲ್ಲಿ ಪ್ರಕಟವಾಗಿದೆ ಎನ್ನಲಾದ ಈ ಸುದ್ದಿಯ ಅಸಲಿ ವಿಷಯವೇನು?
Lunar Eclipse 2021: ಈ ವರ್ಷದ ಮೊದಲ ಚಂದ್ರಗ್ರಹಣದ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು ಹೀಗಿವೆ