Garam Masala Benefits: ಗರಂ ಮಸಾಲೆ ಪರಿಮಳ ಮತ್ತು ರುಚಿಗಷ್ಟೇ ಸಿಮಿತವಾಗಿಲ್ಲ ಅನೇಕ ಆರೋಗ್ಯಕರ ಗುಣಗಳು ಇದರಲ್ಲಿದೆ
ಗರಂ ಮಸಾಲಾ ಒಂದು ಪರಿಪೂರ್ಣ ಮಸಾಲೆ ಮಿಶ್ರಣವಾಗಿದೆ. ಇದನ್ನು ಸಾಮಾನ್ಯವಾಗಿ ಲವಂಗ, ದಾಲ್ಚಿನ್ನಿ, ಜೀರಿಗೆ, ಮೆಣಸು, ಏಲಕ್ಕಿ ಮತ್ತು ಕೊತ್ತಂಬರಿ ಕಾಳು ಮುಂತಾದ ಮಸಾಲೆ ಪದಾರ್ಥಗಳಿಂದ ತಯಾರಿಸಲಾಗುತ್ತದೆ.
ಭಾರತೀಯ ಪಾಕಪದ್ಧತಿಯಲ್ಲಿ ಸಸ್ಯಹಾರಿ ಅಡುಗೆಯಿಂದ ಹಿಡಿದು ಮಾಂಸಹಾರಿ ಅಡುಗೆವರೆಗೆ ಎಲ್ಲವನ್ನು ಅತ್ಯಂತ ರುಚಿಕರವಾಗಿ ಸಿದ್ಧಪಡಿಸಲಾಗುತ್ತದೆ. ಅಲ್ಲದೇ ಈ ಅಡುಗೆ ಪರಿಮಳದಿಂದಲೇ ಭೋಜನ ಪ್ರಿಯರನ್ನು ಆಕರ್ಷಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿ ಬಳಸುವ ಮಸಾಲಾ ಪದಾರ್ಥಗಳು. ಇವುಗಳಲ್ಲಿ ಗರಂ ಮಸಾಲೆ(Garam Masala) ಯನ್ನು ವಿಶೇಷವಾಗಿ ಪರಿಮಳ ಮತ್ತು ರುಚಿಗಾಗಿ ಅಡುಗೆಯಲ್ಲಿ ಸೇರಿಸಲಾಗುತ್ತದೆ. ಗರಂ ಮಸಾಲಾ ಒಂದು ಪರಿಪೂರ್ಣ ಮಸಾಲೆ ಮಿಶ್ರಣವಾಗಿದೆ. ಇದನ್ನು ಸಾಮಾನ್ಯವಾಗಿ ಲವಂಗ, ದಾಲ್ಚಿನ್ನಿ, ಜೀರಿಗೆ, ಮೆಣಸು, ಏಲಕ್ಕಿ ಮತ್ತು ಕೊತ್ತಂಬರಿ ಕಾಳು ಮುಂತಾದ ಮಸಾಲೆ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಆದರೆ ಗರಂ ಮಸಾಲೆ ರುಚಿ ಮತ್ತು ಸುವಾಸನೆಗೆ ಮಾತ್ರವಲ್ಲ, ಇದು ಅನೇಕ ಆರೋಗ್ಯಕರ ಗುಣವನ್ನು ಹೊಂದಿದೆ. ಇದಕ್ಕೆ ಕಾರಣ ಗರಂ ಮಸಾಲೆ ಅನೇಕ ಪೋಷಕಾಂಶಗಳು ಮತ್ತು ಖನಿಜಗಳನ್ನು ಒಳಗೊಂಡಿದೆ.
ಗರಂ ಮಸಾಲೆಯ ಆರೋಗ್ಯಕರ ಪ್ರಯೋಜನಗಳು
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಗರಂ ಮಸಾಲೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಗರಂ ಮಸಾಲೆಯನ್ನು ಆಹಾರದಲ್ಲಿ ಬಳಸುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಈ ಮಸಾಲೆ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಕಡಿಮೆ ಮಾಡುವ ರಸವನ್ನು ಬಿಡುಗಡೆ ಮಾಡುತ್ತದೆ. ಇದಲ್ಲದೇ ಗರಂ ಮಸಾಲೆ ಹೊಟ್ಟೆ ನೋವು, ಉಬ್ಬುವಿಕೆ, ಅಜೀರ್ಣ ಮುಂತಾದ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಚಯಾಪಚಯವನ್ನು ವೇಗಗೊಳಿಸುತ್ತದೆ ಗರಂ ಮಸಾಲೆಯು ಹಲವು ಮಸಾಲೆಗಳ ಸಂಯೋಜನೆಯಾಗಿದ್ದು, ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿನ ಆಹಾರ ಪದಾರ್ಥಗಳಲ್ಲಿ ಫೈಟೊನ್ಯೂಟ್ರಿಯಂಟ್‌ಗಳು ಸಮೃದ್ಧವಾಗಿವೆ. ಇವುಗಳು ದೇಹದ ಚಯಾಪಚಯವನ್ನು ವೇಗಗೊಳಿಸುತ್ತವೆ.
ತೂಕ ಇಳಿಕೆಗೆ ಸಹಕಾರಿ ಗರಂ ಮಸಾಲೆಗಳಲ್ಲಿರುವ ಪೋಷಕಾಂಶಗಳು ಕ್ಯಾಲೊರಿಗಳನ್ನು ಕರಗಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಗರಂ ಮಸಾಲವನ್ನು ಆಹಾರದಲ್ಲಿ ಸೇರಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಹೃದಯಕ್ಕೆ ಒಳ್ಳೆಯದು ಗರಂ ಮಸಾಲೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಗರಂ ಮಸಾಲಾದಲ್ಲಿ ಬಳಸುವ ಗಿಡಮೂಲಿಕೆಗಳು ಹೃದಯದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡದ (ಬಿಪಿ) ಮಟ್ಟವನ್ನು ಸುಲಭವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಕ್ಯಾನ್ಸರ್ ಅಪಾಯದಿಂದ ಮುಕ್ತಿ ಗರಂ ಮಸಾಲೆ ಕ್ಯಾನ್ಸರ್ ಕಾರಕಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರ ಜತೆಯಲ್ಲಿ, ಗರಂ ಮಸಾಲೆಯು ಕೆಲವು ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಮಸಾಲೆಗಳಲ್ಲಿರುವ ಪೋಷಕಾಂಶಗಳು ದೇಹದಲ್ಲಿ ಉಂಟಾಗುವ ಗಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತದೆ.
ಇದನ್ನೂ ಓದಿ: Health Benefits: ಹೂವು ಕೇವಲ ಅಂದಕ್ಕಷ್ಟೇ ಅಲ್ಲ ಅನೇಕ ಆರೋಗ್ಯಕರ ಗುಣಗಳು ಇದರಲ್ಲಿ ಅಡಗಿದೆ