Health Tips: ಬೆಂಡೆಕಾಯಿ ನೋಡಿ ಮೂಗು ಮುರಿಯಬೇಡಿ; ಬಿಪಿ, ಡಯಾಬಿಟಿಸ್​ಗೆ ಇದೇ ರಾಮಬಾಣ

Ladies Finger Health Benefits: ಬೆಂಡೆಕಾಯಿಯಲ್ಲಿ ವಿಟಮಿನ್ ಬಿ, ವಿಟಮಿನ್ ಸಿ ಫೋಲಿಕ್ ಆ್ಯಸಿಡ್, ಕ್ಯಾಲ್ಷಿಯಂ, ಪೊಟ್ಯಾಸಿಯಂ ಅಂಶಗಳು ಹೆಚ್ಚಾಗಿ ಇರುವುದರಿಂದ ಇದರಲ್ಲಿ ನಮ್ಮ ದೇಹಕ್ಕೆ ಬೇಕಾದ ಲವಣಾಂಶ, ಪೌಷ್ಠಿಕಾಂಶಗಳು ಹೇರಳವಾಗಿವೆ.

Health Tips: ಬೆಂಡೆಕಾಯಿ ನೋಡಿ ಮೂಗು ಮುರಿಯಬೇಡಿ; ಬಿಪಿ, ಡಯಾಬಿಟಿಸ್​ಗೆ ಇದೇ ರಾಮಬಾಣ
ಬೆಂಡೆಕಾಯಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 02, 2021 | 7:42 PM

ಮನುಷ್ಯನಲ್ಲಿ ಆಗಾಗ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿ ನಾವು ದಿನನಿತ್ಯ ಬಳಸುವ ವಸ್ತುಗಳಲ್ಲೇ ಪರಿಹಾರವಿರುತ್ತದೆ. ಆದರೆ, ಎಷ್ಟೋ ಬಾರಿ ಅವುಗಳ ಉಪಯೋಗ ನಮಗೆ ಗೊತ್ತಿರುವುದಿಲ್ಲ. ಬೆಂಡೆಕಾಯಿ ಹಲವು ಜನರಿಗೆ ಫೇವರಿಟ್ ತರಕಾರಿಯಾದರೆ ಇನ್ನು ಕೆಲವರು ಬೆಂಡೆಕಾಯಿಯನ್ನು ಕಂಡರೆ ಮೂಗು ಮುರಿಯುತ್ತಾರೆ. ಲೋಳೆ ಅಂಶವಿರುವ ಈ ತರಕಾರಿಯನ್ನು ಆಗಾಗ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಬಹಳ ಸಹಕಾರಿ. ಬೆಂಡೆಕಾಯಿಯ ಪಲ್ಯ, ಸಾಸಿವೆ, ಬೆಂಡೆ ಫ್ರೈ, ಕರಿ, ಸಾಂಬಾರು ಹೀಗೆ ನಾನಾ ರೀತಿಯ ಅಡುಗೆಯನ್ನು ಮಾಡಬಹುದು. ಎಳೆಯದಾದ ಬೆಂಡೆಕಾಯಿಯನ್ನು ಹಸಿಯಾಗಿಯೂ ತಿನ್ನಬಹುದು. ಮಧುಮೇಹ (Diabetes) , ರಕ್ತದೊತ್ತಡ (BP) ಇರುವವರು ಬೆಂಡೆಕಾಯಿಯನ್ನು ತಿಂದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.

1. ಬೆಂಡೆಕಾಯಿಯಲ್ಲಿ ವಿಟಮಿನ್ ಬಿ, ವಿಟಮಿನ್ ಸಿ ಫೋಲಿಕ್ ಆ್ಯಸಿಡ್, ಕ್ಯಾಲ್ಷಿಯಂ, ಪೊಟ್ಯಾಸಿಯಂ ಅಂಶಗಳು ಹೆಚ್ಚಾಗಿ ಇರುವುದರಿಂದ ಇದರಲ್ಲಿ ನಮ್ಮ ದೇಹಕ್ಕೆ ಬೇಕಾದ ಲವಣಾಂಶ, ಪೌಷ್ಠಿಕಾಂಶಗಳು ಹೇರಳವಾಗಿವೆ. ಬೆಂಡೆಕಾಯಿ ಡಯಾಬಿಟಿಸ್ ಇರುವವರಿಗೆ ಬಹಳ ಉತ್ತಮವಾದ ತರಕಾರಿ ಎಂದು ಸಂಶೋಧನೆಯೇ ಹೇಳಿದೆ.

2. ಬೆಂಡೆಕಾಯಿಯಲ್ಲಿ ಹೇರಳವಾದ ಫೈಬರ್ ಅಥವಾ ನಾರಿನಂಶ ಇರುವುದರಿಂದ ಡಯಾಬಿಟಿಸ್​ಗೆ ರಾಮಬಾಣವಿದ್ದಂತೆ. ಹಾಗೇ, ರಕ್ತದ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿ, ಜೀರ್ಣಕ್ರಿಯೆ ಸುಧಾರಿಸಲು ಕೂಡ ಸಹಕಾರಿಯಾಗಿದೆ.

3. ಡಯಾಬಿಟಿಸ್ ಇರುವರಲ್ಲಿ ಬಹುತೇಕರಲ್ಲಿ ಅಧಿಕ ಕೊಬ್ಬಿನಂಶ (ಕೊಲೆಸ್ಟ್ರಾಲ್) ಇರುತ್ತದೆ. ಅಂಥವರು ಬೆಂಡೆಕಾಯಿಯಂತಹ ಆ್ಯಂಟಿಆಕ್ಸಿಡೆಂಟ್​ ಹೆಚ್ಚಾಗಿರುವ ತರಕಾರಿಯನ್ನು ತಿನ್ನುವುದರಿಂದ ದೇಹದ ಕೊಬ್ಬಿನಾಂಶ ಕಡಿಮೆಯಾಗುತ್ತದೆ.

Ladies Finger Benefits

ಬೆಂಡೆಕಾಯಿ

4. ಬೆಂಡೆಕಾಯಿಯನ್ನು ಕೇವಲ ತರಕಾರಿಯಾಗಿ ಮಾತ್ರ ನೋಡದೆ ನಿಮ್ಮ ದಿನನಿತ್ಯದ ಡಯಟ್​ನಲ್ಲಿಯೂ ಬಳಸಿಕೊಳ್ಳಬಹುದು. ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು, ರಾತ್ರಿ ಪೂರ್ತಿ ಸ್ವಚ್ಛವಾದ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿದರೆ ರಕ್ತ ಹೀನತೆಯನ್ನು ತಡೆಗಟ್ಟಬಹುದು.

5. ಬೆಂಡೆಕಾಯಿಯ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗುತ್ತದೆ. ಹಾಗೇ, ಗಂಟಲಿನ ಸಮಸ್ಯೆ, ಕೆಮ್ಮು ಮುಂತಾದ ಸಮಸ್ಯೆಗಳು ದೂರವಾಗುತ್ತವೆ.

6. ಮಲಬದ್ಧತೆಯ ಸಮಸ್ಯೆ ಇರುವವರು ಬೆಂಡೆಕಾಯಿಯನ್ನು ಹೆಚ್ಚಾಗಿ ಬಳಸುವುದು ಒಳ್ಳೆಯದು. ಇದರಲ್ಲಿ ನಾರಿನಂಶ ಹೆಚ್ಚಾಗಿರುವುದರಿಂದ ಬೆಂಡೆಕಾಯಿಯಿಂದ ಮಾಡಿದ ಪದಾರ್ಥಗಳ ಸೇವನೆಯಿಂದ ಮಲಬದ್ಧತೆಯ ಸಮಸ್ಯೆ ಪರಿಹಾರವಾಗುತ್ತದೆ.

7. ಬೆಂಡೆಕಾಯಿಯು ನಮ್ಮ ಮೂಳೆಗಳನ್ನು ಬಲಗೊಳಿಸಲು ಸಹಕಾರಿ. ಹಾಗೇ, ಚರ್ಮ, ಕೂದಲಿನ ಆರೋಗ್ಯ ಕೂಡ ಸುಧಾರಿಸುವ ಶಕ್ತಿ ಈ ತರಕಾರಿಯಲ್ಲಿದೆ. ಹೀಗಾಗಿ, ಮಹಿಳೆಯರು ಹೆಚ್ಚಾಗಿ ಬೆಂಡೆಕಾಯಿಯ ಪದಾರ್ಥಗಳನ್ನು ತಿನ್ನುವುದರಿಂದ ಬಹಳಷ್ಟು ಉಪಯೋಗಗಳನ್ನು ಪಡೆಯಲು ಸಾಧ್ಯವಿದೆ.

ಇದನ್ನೂ ಓದಿ: Health Tips: ನಿಮ್ಮ‌ ಮೂಳೆಗಳನ್ನು ಶಕ್ತಿಯುತವಾಗಿಸಲು ಏನೆಲ್ಲಾ ಮಾಡಬಹುದು?

Health Tips: ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಬೀಟ್​ರೂಟ್ ಉಪಯೋಗದ ಬಗ್ಗೆ ತಿಳಿಯಲೇಬೇಕು..

(Health Tips: How is Ladies Finger beneficial for Diabetes and BP Okra Nutrition and Health Benefits)

Published On - 7:40 pm, Mon, 2 August 21

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ