Salt: ಉಪ್ಪು ಕಡಿಮೆ ತಿನ್ನುವ ಅಭ್ಯಾಸ ಇದೆಯೇ? ಅಪಾಯದ ಬಗ್ಗೆ ಎಚ್ಚರ ತಪ್ಪಬೇಡಿ
ಉಪ್ಪನ್ನು ಹೆಚ್ಚು ತಿನ್ನಬಾರದು ಎಂಬುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಉಪ್ಪನ್ನು ಸಂಪೂರ್ಣವಾಗಿ ತ್ಯಜಿಸುವುದು ಕೂಡ ಅಪಾಯಕಾರಿಯಾಗಿದೆ.
ದೇಹವನ್ನು ನಿರ್ವಿಷಗೊಳಿಸಲು ಉಪವಾಸವು ಅತ್ಯುತ್ತಮ ಮಾರ್ಗವಾಗಿದೆ. ಕೆಲವು ಜನರು ಧಾರ್ಮಿಕ ಕಾರಣಗಳಿಗಾಗಿ ಉಪವಾಸ ಮಾಡುತ್ತಾರೆ. ಕೆಲವರು ತಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ವಾರದಲ್ಲಿ 2 ಬಾರಿ ಉಪವಾಸ ಮಾಡುತ್ತಾರೆ. ಆದರೆ ಕಡಿಮೆ ಸಿಹಿತಿಂಡಿಗಳನ್ನು ತಿನ್ನುವುದು ಅಥವಾ ಕಡಿಮೆ ಉಪ್ಪನ್ನು(Salt) ತಿಂದರೆ ಮಾತ್ರ ಉಪವಾಸ ಮಾಡಿದ ಹಾಗೆ ಎಂದು ಕೆಲವು ಮೂಲಗಳು ತಿಳಿಸಿವೆ. ಉಪ್ಪನ್ನು ಹೆಚ್ಚು ತಿನ್ನಬಾರದು ಎಂಬುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಉಪ್ಪನ್ನು ಸಂಪೂರ್ಣವಾಗಿ ತ್ಯಜಿಸುವುದು ಕೂಡ ಅಪಾಯಕಾರಿಯಾಗಿದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ (NIH) ಪ್ರಕಾರ, ಉಪ್ಪು ಸೇವಿಸುವುದನ್ನು ಸಂಪೂರ್ಣವಾಗಿ ತ್ಯಜಿಸುವುದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತದೆ.
ದಿನಕ್ಕೆ ಎಷ್ಟು ಉಪ್ಪು ತಿನ್ನಬೇಕು? ಸೋಡಿಯಂ ಉಪ್ಪಿನ ಪ್ರಮುಖ ಅಂಶವಾಗಿದೆ. ಇದರಲ್ಲಿರುವ ಎಲೆಕ್ಟ್ರೋಲೈಟ್ ಆರೋಗ್ಯಕ್ಕೆ ಅಗತ್ಯ. ದೇಹದಲ್ಲಿ ಅತಿಯಾದ ಸೋಡಿಯಂ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಆದ್ದರಿಂದ ಇದನ್ನು ನಿಯಂತ್ರಿತ ಪ್ರಮಾಣದಲ್ಲಿ ಮಾತ್ರ ತೆಗೆದುಕೊಳ್ಳಬೇಕು. ನ್ಯಾಷನಲ್ ಅಕಾಡೆಮಿ ಆಫ್ ಮೆಡಿಸಿನ್ ದಿನಕ್ಕೆ 2,300 ಮಿಲಿಗ್ರಾಂ ಗಿಂತ ಕಡಿಮೆ ಉಪ್ಪನ್ನು ತಿನ್ನಲು ಶಿಫಾರಸು ಮಾಡುತ್ತದೆ. ಉಪ್ಪು ಅತಿಯಾದರೆ ಸೋಡಿಯಂ ಸಮಸ್ಯೆಗಳಿಗೆ ಕಾರಣವಾಗಬಹುದು. ಅಂತೆಯೇ ತುಂಬಾ ಕಡಿಮೆ ತಿನ್ನುವುದು ಅನಾರೋಗ್ಯಕರವಾಗಿರುತ್ತದೆ.
ಕಡಿಮೆ ಉಪ್ಪನ್ನು ಸೇವಿಸುವುದರಿಂದ ಬರುವ ಸಮಸ್ಯೆಗಳು ಯಾವುವು?
1. ಇನ್ಸುಲಿನ್ ಅಸ್ವಸ್ಥತೆ ದಿನವಿಡೀ ಉಪ್ಪನ್ನು ಸೇವಿಸದಿರುವುದು ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಅಧ್ಯಯನದ ಪ್ರಕಾರ, ಜೀವಕೋಶಗಳು ಹಾರ್ಮೋನ್ ಇನ್ಸುಲಿನ್ ಸಿಗ್ನಲ್ಗೆ ಪ್ರತಿಕ್ರಿಯಿಸದಿದ್ದಾಗ, ಇನ್ಸುಲಿನ್ ಪ್ರತಿರೋಧ ಉಂಟಾಗುತ್ತದೆ. ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. ಇನ್ಸುಲಿನ್ ಪ್ರತಿರೋಧವು ಟೈಪ್ -2 ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
2. ಹೃದಯಾಘಾತ ಮತ್ತು ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತದೆ ಕಡಿಮೆ ಉಪ್ಪನ್ನು ತಿನ್ನುವುದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ನಿಜ. ಅದಾಗ್ಯೂ, ಅಧಿಕ ರಕ್ತದೊತ್ತಡಕ್ಕೆ ಉಪ್ಪು ಮಾತ್ರ ಕಾರಣವಲ್ಲ. ಅಧ್ಯಯನದ ಪ್ರಕಾರ, ದಿನಕ್ಕೆ 2,000 ಮಿಗ್ರಾಂ ಗಿಂತ ಕಡಿಮೆ ಸೋಡಿಯಂ ತೆಗೆದುಕೊಳ್ಳುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಹೃದ್ರೋಗದಿಂದ ಸಾಯುವ ಅಪಾಯ ಹೆಚ್ಚಾಗುತ್ತದೆ.
ಹೃದಯ ಮತ್ತು ರಕ್ತಕ್ಕೆ ಆಮ್ಲಜನಕದ ಅಗತ್ಯಗಳನ್ನು ಪೂರೈಸಲು ಬೇಕಾದಷ್ಟು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಹೃದಯ ವೈಫಲ್ಯ ಸಂಭವಿಸುತ್ತದೆ. ಹೃದಯವು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂದು ಇದರ ಅರ್ಥವಲ್ಲ. ಆದರೆ ಇದು ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದೆ. ರಾಡ್ ಎಸ್. ಟೇಲರ್ ಮತ್ತು ಸಹೋದ್ಯೋಗಿಗಳ ಸಂಶೋಧನೆಯು, ಹೃದಯ ವೈಫಲ್ಯ ಹೊಂದಿರುವ ಜನರು ಕಡಿಮೆ ಸೋಡಿಯಂ ಸೇವನೆಯಿಂದ ಸಾಯುವ ಅಪಾಯವನ್ನು ಸೂಚಿಸುತ್ತದೆ.
3. ಕೆಟ್ಟ ಕೊಲೆಸ್ಟ್ರಾಲ್ (LDL)ಹೆಚ್ಚಿಸುತ್ತದೆ 2012 ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕಡಿಮೆ ಉಪ್ಪನ್ನು ತಿನ್ನುವ ಜನರು ಸಾಮಾನ್ಯ ಜನರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರೆನಿನ್, ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಹೊಂದಿರುತ್ತಾರೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಆರೋಗ್ಯವಂತ ವ್ಯಕ್ತಿಗಳಲ್ಲಿ ಕಡಿಮೆ ಸೋಡಿಯಂ ಆಹಾರವು ಎಲ್‌ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಅನ್ನು ಶೇ. 4.6 ಮತ್ತು ಟ್ರೈಗ್ಲಿಸರೈಡ್‌ಗಳನ್ನು ಶೇ. 5.9 ರಷ್ಟು ಹೆಚ್ಚಿಸಿದೆ ಎಂದು ತಿಳಿಸಿದೆ.
4. ಮಧುಮೇಹ ರೋಗಿಗಳಿಗೆ ಅಪಾಯಕಾರಿ ಮಧುಮೇಹವಿದ್ದರೆ ಉಪವಾಸವು ನಿಮ್ಮ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಏಕೆಂದರೆ ನಿಮ್ಮ ದೇಹದಲ್ಲಿ ಇದ್ದಕ್ಕಿದ್ದಂತೆ ಉಪ್ಪು ಖಾಲಿಯಾಗುತ್ತದೆ. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಟೈಪ್ 1 ಹಾಗೂ ಟೈಪ್ 2 ಡಯಾಬಿಟಿಸ್ ಇರುವವರು ಕಡಿಮೆ ಸೋಡಿಯಂ ಡಯಟ್ನಿಂದ ಸಾಯುವ ಅಪಾಯವಿದೆ ಎಂದು ಸಂಶೋಧನೆಗಳು ತಿಳಿಸಿವೆ.
5. ಮೆದುಳಿನ ಊತ ಹೈಪೋನಾಟ್ರೀಮಿಯಾ ಎನ್ನುವುದು ರಕ್ತದಲ್ಲಿ ಕಡಿಮೆ ಮಟ್ಟದ ಸೋಡಿಯಂನಿಂದ ಉಂಟಾಗುವ ಸ್ಥಿತಿಯಾಗಿದೆ. ಕಡಿಮೆ ಉಪ್ಪನ್ನು ತಿನ್ನುವುದರಿಂದ ಹೈಪೋನಾಟ್ರೀಮಿಯಾದ ಅಪಾಯ ಹೆಚ್ಚಾಗುತ್ತದೆ. ಇದರ ಲಕ್ಷಣಗಳು ನಿರ್ಜಲೀಕರಣದಿಂದ ಉಂಟಾಗುವ ಲಕ್ಷಣಗಳನ್ನು ಹೋಲುತ್ತವೆ. ತೀವ್ರತರವಾದ ಪ್ರಕರಣಗಳಲ್ಲಿ ಮೆದುಳಿನ ಊತ ಇರಬಹುದು. ಇದು ತಲೆನೋವು, ಕೋಮಾ ಮತ್ತು ಸಾವಿಗೆ ಕಾರಣವಾಗಬಹುದು.
ಇದನ್ನೂ ಓದಿ: Health Tips: ತಲೆಕೂದಲು ಬಿಳಿಯಾಗಿದೆ ಎಂದು ಚಿಂತಿಸುವ ಬದಲು ಈ 5 ಕ್ರಮಗಳನ್ನು ಅನುಸರಿಸಿ
Health Benefits: ಹೂವು ಕೇವಲ ಅಂದಕ್ಕಷ್ಟೇ ಅಲ್ಲ ಅನೇಕ ಆರೋಗ್ಯಕರ ಗುಣಗಳು ಇದರಲ್ಲಿ ಅಡಗಿದೆ