AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Udalu Benefits: ಊದಲು ಸಿರಿಧಾನ್ಯದ ಬಗ್ಗೆ ನಿಮಗೆಷ್ಟು ಗೊತ್ತು? ಪಿತ್ತಜನಕಾಂಗದ ಸ್ವಚ್ಛತೆಗೆ ವಾರಕ್ಕೊಮ್ಮೆ ಸೇವಿಸಿ

Health benefits: ರುಚಿಗೆ ಸಿಹಿಯಾಗಿರುವ ಊದಲಿನಿಂದ ಮಾಡಿದ ಆಹಾರಗಳು ಉತ್ತಮ ಬಲವರ್ಧಕವಾಗಿದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ. ಅದಕ್ಕಾಗಿಯೇ ಉತ್ತರ ಭಾರತದಲ್ಲಿ ಅನೇಕ ಜನರು ಉಪವಾಸದ ಸಮಯದಲ್ಲಿ ಊದಲಿನಿಂದ ಮಾಡಿದ ಆಹಾರವನ್ನು ಸೇವಿಸುತ್ತಾರೆ.

Udalu Benefits: ಊದಲು ಸಿರಿಧಾನ್ಯದ ಬಗ್ಗೆ ನಿಮಗೆಷ್ಟು ಗೊತ್ತು? ಪಿತ್ತಜನಕಾಂಗದ ಸ್ವಚ್ಛತೆಗೆ ವಾರಕ್ಕೊಮ್ಮೆ ಸೇವಿಸಿ
ಊದಲು
TV9 Web
| Edited By: |

Updated on: Aug 03, 2021 | 8:43 AM

Share

ಊದಲು ಸಣ್ಣ ಸಿರಿಧಾನ್ಯಗಳಲ್ಲಿ ಒಂದಾಗಿದೆ. ಸಿಹಿ ಮತ್ತು ರುಚಿಯಾಗಿರುವ ಊದಲನ್ನು(Udalu) ಮುಖ್ಯವಾಗಿ ಭಾರತ, ಪಾಕಿಸ್ತಾನ, ನೇಪಾಳ, ಜಪಾನ್ ಮತ್ತು ಚೀನಾದ ಪರ್ವತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಅದರಲ್ಲೂ ಭಾರತದಲ್ಲಿ ಈ ಸಿರಿಧಾನ್ಯವನ್ನು ಹೆಚ್ಚಾಗಿ ಉತ್ತರಾಖಂಡದಲ್ಲಿ ಬೆಳೆಯಲಾಗುತ್ತದೆ. ಅಲ್ಲದೇ ತಮಿಳುನಾಡಿನ ಪರ್ವತ ಪ್ರದೇಶಗಳಲ್ಲಿ ಕೂಡ ಇವುಗಳನ್ನು ಬೆಳೆಯಲಾಗುತ್ತದೆ.

ರುಚಿಗೆ ಸಿಹಿಯಾಗಿರುವ ಊದಲಿನಿಂದ ಮಾಡಿದ ಆಹಾರಗಳು ಉತ್ತಮ ಬಲವರ್ಧಕವಾಗಿದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ. ಅದಕ್ಕಾಗಿಯೇ ಉತ್ತರ ಭಾರತದಲ್ಲಿ ಅನೇಕ ಜನರು ಉಪವಾಸದ ಸಮಯದಲ್ಲಿ ಊದಲಿನಿಂದ ಮಾಡಿದ ಆಹಾರವನ್ನು ಸೇವಿಸುತ್ತಾರೆ. ಊದಲು ತಿನ್ನುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಅವುಗಳು ಏನು ಎಂದು ಹುಬ್ಬೇರಿಸುವವರಿಗೆ ಇಲ್ಲಿದೆ ಉತ್ತರ.

ಉಷ್ಣತೆಯನ್ನು ಸಮತೋಲನಗೊಳಿಸುತ್ತದೆ ನಮ್ಮ ದೇಹದ ಸ್ಥಿತಿಯೂ ಯಾವಾಗಲೂ ಒಂದೇ ತೆರನಾಗಿರುವುದಿಲ್ಲ. ಅದರಲ್ಲೂ ಉಷ್ಣತೆಯಿಂದಾಗಿ ಅನೇಕ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಕೆಲವೊಮ್ಮೆ ಸೇವಿಸಿದ ಔಷಧಿಯ ಪರಿಣಾಮದಿಂದಾಗಿಯೂ ದೇಹದಲ್ಲಿ ಉಷ್ಣತೆ ಕಾಣಿಸಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಊದಲು ಸೇವಿಸುವುದು ಉತ್ತಮ. ಇದು ದೇಹದ ಉಷ್ಣತೆಯನ್ನು ಸಮತೋಲನದಲ್ಲಿರಿಸುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಊದಲು ಸಿರಿಧಾನ್ಯವು ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಇದು ಉತ್ಕರ್ಷಣ ನಿರೋಧಕವಾಗಿಯೂ ಕೆಲಸ ಮಾಡುತ್ತದೆ. ಅದರಲ್ಲೂ ಕೊರೊನಾ ಕಾಲಘಟ್ಟದಲ್ಲಿ ಈ ಸಿರಿಧಾನ್ಯವನ್ನು ದಿನಕ್ಕೆ ಒಂದು ಬಾರಿಯಾದರೂ ಸೇವಿಸುವುದು ಸೂಕ್ತ.

ಜೀರ್ಣಕ್ರಿಯೆಗೆ ಸಹಕಾರಿ ದೀರ್ಘಕಾಲದವರೆಗೆ ಒಂದೇ ಕಡೆ ಕುಳಿತು ಕೆಲಸ ಮಾಡುವವರಿಗೆ ಇದು ಉತ್ತಮ ಆಹಾರವಾಗಿದ್ದು, ಊದಲು ಸುಲಭವಾಗಿ ಜೀರ್ಣವಾಗುತ್ತದೆ. ಅಲ್ಲದೇ ಇದು ಅಜೀರ್ಣ, ಹೊಟ್ಟೆ ನೋವು ಮುಂತಾದ ಸಮಸ್ಯೆಯನ್ನು ದೂರ ಮಾಡುತ್ತದೆ.

ಮಲಬದ್ಧತೆ ಊದಲಿನಲ್ಲಿ ನಾರಿನಂಶ ಹೆಚ್ಚಾಗಿರುವುದರಿಂದ ಮಲಬದ್ಧತೆ ಮತ್ತು ಮಧುಮೇಹಕ್ಕೆ ತುಂಬಾ ಒಳ್ಳೆಯದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದಯದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಮೂಲವ್ಯಾದಿ ಸಮಸ್ಯೆಯಿಂದ ಬಳುತ್ತಿರುವವರಿಗೆ ವೈದ್ಯರು ಈ ಆಹಾರವನ್ನು ಸೇವಿಸಲು ಸೂಚಿಸುತ್ತಾರೆ.

ಗ್ಯಾಸ್ಟ್ರಿಕ್ ನಿವಾರಕ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡಲು ಇದು ಉಪಯುಕ್ತವಾಗಿದೆ. ಅಲ್ಲದೇ ಕ್ಯಾನ್ಸರ್​ನ ಪರಿಣಾಮವನ್ನು ತಡೆಯಲು ಊದಲು ಸಹಾಯ ಮಾಡುತ್ತದೆ. ಮೂತ್ರಕೋಶ, ಪಿತ್ತಜನಕಾಂಗ ಮತ್ತು ಪಿತ್ತಕೋಶವನ್ನು ಸ್ವಚ್ಛಗೊಳಿಸಲು ಕೂಡ ಇದು ಸಹಾಯ ಮಾಡುತ್ತದೆ.

ಗರ್ಭಿಣಿಯರಿಗೆ ಉತ್ತಮ ಆಹಾರ ಉತ್ತರಾಖಂಡ ಮತ್ತು ನೇಪಾಳದಲ್ಲಿ ಊದಲನ್ನು ಗರ್ಭಿಣಿ ಮತ್ತು ಪ್ರಸವಾನಂತರದ ಮಹಿಳೆಯರಿಗೆ ನೀಡಲಾಗುತ್ತದೆ. ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರನ್ನು ಬಲಪಡಿಸುವ ಆಹಾರವಾಗಿ ಇದನ್ನು ನೀಡಲಾಗುತ್ತದೆ. ಗರ್ಭಕಂಠದ ಕ್ಯಾನ್ಸರ್ ಅನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ಇನ್ನಿತರ ಉಪಯೋಗಗಳು ಜಾಂಡೀಸ್ ಅನ್ನು ಕಡಿಮೆ ಮಾಡಲು ಮತ್ತು ಲಿವರ್ ಅನ್ನು ಪೋಷಿಸಲು ಊದಲು ಸಹಕಾರಿಯಾಗಿದೆ. ವಯಸ್ಕರಲ್ಲಿ ಗಾಳಿಗುಳ್ಳೆಯ ನಿಯಂತ್ರಣಕ್ಕೆ, ಪಿತ್ತಕಲ್ಲುಗಳನ್ನು ತೊಡೆದುಹಾಕಲು ಮತ್ತು ಟೈಫಾಯಿಡ್ ನಂತಹ ಜೀವಾಣುಗಳನ್ನು ಗುಣಪಡಿಸಲು ಊದಲು ಸಹಾಯಕವಾಗಿದೆ.

ಇದನ್ನೂ ಓದಿ: Health Benefits: ಹೂವು ಕೇವಲ ಅಂದಕ್ಕಷ್ಟೇ ಅಲ್ಲ ಅನೇಕ ಆರೋಗ್ಯಕರ ಗುಣಗಳು ಇದರಲ್ಲಿ ಅಡಗಿದೆ

Health Tips: ತಲೆಕೂದಲು ಬಿಳಿಯಾಗಿದೆ ಎಂದು ಚಿಂತಿಸುವ ಬದಲು ಈ 5 ಕ್ರಮಗಳನ್ನು ಅನುಸರಿಸಿ

ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್