ಮಕ್ಕಳಲ್ಲಿ ನೆನಪಿನಶಕ್ತಿ ಮತ್ತು ಜ್ಞಾನ ಭಂಡಾರ ಹೆಚ್ಚಿಸಲು ವ್ಯಾಯಾಮ ಅವಶ್ಯಕ- ವರದಿ

ಮಕ್ಕಳಲ್ಲಿ ನೆನಪಿನಶಕ್ತಿ ಮತ್ತು ಜ್ಞಾನ ಭಂಡಾರ ಹೆಚ್ಚಿಸಲು ವ್ಯಾಯಾಮ ಅವಶ್ಯಕ- ವರದಿ
ಪ್ರಾತಿನಿಧಿನ ಚಿತ್ರ

ವ್ಯಾಯಾಮದ ಮೂಲಕ ಮೆದುಳಿನಿಂದ ನ್ಯೂರೋಟ್ರೋಫಿಕ್ ಅಂಶದ ಮಟ್ಟ ಹೆಚ್ಚುತ್ತದೆ. ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರೋಟೀನ್ ಮಹತ್ವದ್ದಾಗಿದೆ ಎಂದು ಸಂಶೋಧಕರು ತಿಳಿಸಿದರು.

TV9kannada Web Team

| Edited By: Skanda

Aug 04, 2021 | 7:08 AM

ಮಕ್ಕಳು ವ್ಯಾಯಾಮ ಮಾಡುವುದರಿಂದ ಶಬ್ದಕೋಶದ ಬೆಳವಣಿಗೆ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದು ಇತ್ತೀಚೆಗೆ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ. ಡೆಲವೇರ್ ವಿಶ್ವವಿದ್ಯಾಲಯವು ಇತ್ತೀಚೆಗೆ ಜೆ ವರ್ನಾಲ್ ಆಫ್ ಸ್ಪೀಚ್ ಲಾಂಗ್ವೇಜ್ ಮತ್ತು ಹಿಯರಿಂಗ್ ರಿಸರ್ಚ್​ನಲ್ಲಿ ಪ್ರಕಟವಾದ ಅಧ್ಯಯನವು ವ್ಯಾಯಾಮ ಮಕ್ಕಳ ಮೇಲೆ ಯಾವ ರೀತಿಯ ಒಳ್ಳೆಯ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಿದೆ. 6 ರಿಂದ 12 ವರ್ಷದ ಮಕ್ಕಳಿಗೆ ಮೂರು ವಿಷಯಗಳ ಪದಗಳನ್ನು ಕಲಿಸಲಾಯಿತು. ಶಬ್ದಗಳ ಪರೀಕ್ಷೆಯಲ್ಲಿ ಶೇ. 13ರಷ್ಟು ಹೆಚ್ಚು ನಿಖರವಾಗಿದ್ದರು.

ವ್ಯಾಯಾಮದ ಮೂಲಕ ಮೆದುಳಿನಿಂದ ನ್ಯೂರೋಟ್ರೋಫಿಕ್ ಅಂಶದ ಮಟ್ಟ ಹೆಚ್ಚುತ್ತದೆ. ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರೋಟೀನ್ ಮಹತ್ವದ್ದಾಗಿದೆ ಎಂದು ಸಂಶೋಧಕರು ತಿಳಿಸಿದರು.

ಮಕ್ಕಳಲ್ಲಿ ಈಜುವ ಕಲೆ ಶಬ್ದಕೋಶದ ಬೆಳವಣಿಗೆಗೆ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಈಜುವಿಕೆಯಲ್ಲಿ ಮಕ್ಕಳು ಹೆಚ್ಚಿನ ಆಲೋಚನೆಯನ್ನು ಹೊಂದದೆ ಪೂರ್ಣಗೊಳಿಸುವ ಚಟುವಟಿಕೆಯಾಗಿದೆ. ಆದರೆ ಮಕ್ಕಳು ಚಲನೆಯನ್ನು ಕಲಿಯಬೇಕು. ಅದಕ್ಕೆ ಮಾನಸಿಕ ಶಕ್ತಿ ಅಗತ್ಯವಿರುತ್ತದೆ. ಈ ಕುರಿತಂತೆ ಫ್ರುಯೆಟ್ ಅವರು ಸ್ನಾತಕೋತ್ತರದ ಒಂದು ಭಾಗವಾಗಿ ಅಧ್ಯಯನ ಕೈಗೊಂಡರು. ಅವರು ಇದೀಗ ದಕ್ಷಿಣ ಕೊರೊಲಿನಾದ ಪ್ರಾಥಮಿಕ ಶಾಲೆಯಲ್ಲಿ ಸ್ಪೀಚ್ -ಲ್ಯಾಂಗ್ವೇಜ್ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಾರೆ.

ನನ್ನ ತರಗತಿಯಲ್ಲಿ ಮಕ್ಕಳನ್ನು ಹೆಚ್ಚು ಆಟದ ಮೈದಾನಕ್ಕೆಕರೆದೊಯ್ಯುತ್ತೇನೆ. ಶಾಲೆಯ ಸುತ್ತಲೂ ನಾವು ನಡೆದಾಡುತ್ತೇವೆ ಎಂದು ಫ್ರುಯೆಟ್ ಹೇಳಿದ್ದಾರೆ. ಈ ಕುರಿತಂತೆ ಟೈಮ್ಸ್ ನೌ ನ್ಯೂಸ್ ವರದಿ ಮಾಡಿದೆ.

ವ್ಯಾಯಾಮದ ಮೂಲಕವಾಗಿ ಮಕ್ಕಳಲ್ಲಿ ಹೆಚ್ಚಿನ ನೆನಪಿನ ಶಕ್ತಿ ಮತ್ತು ಶಬ್ದಕೋಶಗಳ ಬೆಳವಣಿಗೆ ಆಗುತ್ತದೆ. ಈ ಕುರಿತಂತೆ ಇನ್ನೂ ಹೆಚ್ಚಿನ ಅಧ್ಯಯನದಲ್ಲಿ ತೊಡಗಿಕೊಂಡಿದ್ದೇವೆ. ಈ ಅಧ್ಯಯನ ನಡೆಸಲು ತುಂಬಾ ಉತ್ಸುಕರಾಗಿದ್ದೇವೆ ಎಂದು ಪ್ರಯೋಗಾಲಯದಲ್ಲಿ ಸಂಶೋಧನೆ ಕೈಗೊಂಡ ಮೋರಿನಿ ಹೇಳಿದ್ದಾರೆ. ಇದು ಸರಳ ವಿಷಯ ಅಸಾಮಾನ್ಯವಾದುದ್ದೇನೂ ಅಲ್ಲ. ಮಕ್ಕಳು ಹೆಚ್ಚಿನ ಅಂಕ ಪಡೆದು ಹೆಚ್ಚಿನ ಫಲಿತಾಂಶ ಪಡೆಯಲು ನಿಜವಾಗಿಯೂ ಸಹಾಯ ಮಾಡುತ್ತದೆ ಎಂದು ಮೋರಿನಿ ವಿವರಿಸಿದ್ದಾರೆ.

ಇದನ್ನೂ ಓದಿ:

Norovirus: ಮಕ್ಕಳು ಮತ್ತು ವೃದ್ಧರಿಗೆ ಶುರುವಾಯ್ತು ನೊರೊವೈರಸ್​ ಭಯ; ದೇಹವನ್ನು ಬಳಲಿಸುವ ಈ ಕಾಯಿಲೆ ಬಗ್ಗೆ ಇರಲಿ ನಿಗಾ

Morning Walk: ಬೆಳಗೆದ್ದು ವಾಕಿಂಗ್ ಮಾಡುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ?! 7 ಮುಖ್ಯ ಅಂಶಗಳ ವಿವರ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada