AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Norovirus: ಮಕ್ಕಳು ಮತ್ತು ವೃದ್ಧರಿಗೆ ಶುರುವಾಯ್ತು ನೊರೊವೈರಸ್​ ಭಯ; ದೇಹವನ್ನು ಬಳಲಿಸುವ ಈ ಕಾಯಿಲೆ ಬಗ್ಗೆ ಇರಲಿ ನಿಗಾ

The Vomiting Bug: ಆರೋಗ್ಯವಂತರು, ಸದೃಢವಾಗಿರುವವರು ಈ ಕಾಯಿಲೆಯನ್ನು ಆರಾಮಾಗಿ ಎದುರಿಸಬಹುದಾದರೂ ಮಕ್ಕಳು ಹಾಗೂ ವೃದ್ಧರ ವಿಚಾರದಲ್ಲಿ ಅಗತ್ಯ ಎಚ್ಚರಿಕೆ ತೆಗೆದುಕೊಳ್ಳಲೇಬೇಕು.

Norovirus: ಮಕ್ಕಳು ಮತ್ತು ವೃದ್ಧರಿಗೆ ಶುರುವಾಯ್ತು ನೊರೊವೈರಸ್​ ಭಯ; ದೇಹವನ್ನು ಬಳಲಿಸುವ ಈ ಕಾಯಿಲೆ ಬಗ್ಗೆ ಇರಲಿ ನಿಗಾ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Jul 19, 2021 | 3:18 PM

Share

ಕಳೆದ ಒಂದೂವರೆ ವರ್ಷದಿಂದ ಇಡೀ ಜಗತ್ತು ಕೊರೊನಾ ವೈರಾಣುವಿನ (Coronavirus) ಹೊಡೆತಕ್ಕೆ ಸಿಲುಕಿ ತಲ್ಲಣಿಸಿದೆ. ಪದೇ ಪದೇ ರೂಪಾಂತರಗೊಂಡು (Mutation) ಕಾಡುತ್ತಿರುವ ಕೊರೊನಾ ಹತೋಟಿಗೆ ಸಿಗದೇ ಸತಾಯಿಸುತ್ತಿದೆ. ಇದರ ನಡುವೆಯೇ ಚೀನಾದಲ್ಲಿ ಕಾಣಿಸಿಕೊಂಡ ಮಂಕಿ ಬಿ ವೈರಸ್ (Monkey B Virus) ಕೂಡಾ ಆತಂಕಕ್ಕೆ ಕಾರಣವಾಗಿದೆ. ಇದೀಗ, ಆತಂಕಕಾರಿ ವೈರಾಣುಗಳ ಸಾಲಿಗೆ ಹೊಸದೊಂದು ಸೇರ್ಪಡೆಯಾಗಿದ್ದು, ಇಂಗ್ಲೆಂಡ್​ನಲ್ಲಿ ಈಗಾಗಲೇ ತಳಮಳ ಹುಟ್ಟುಹಾಕಿದೆ. ನೊರೊವೈರಸ್ (Norovirus) ಅಥವಾ ವಾಮಿಟಿಂಗ್ ಬಗ್ (The Vomiting Bug) ಎಂದು ಕರೆಯಲ್ಪಡುವ ಈ ವೈರಾಣು ಇಂಗ್ಲೆಂಡ್​ನಲ್ಲಿ ದಿನೇ ದಿನೇ ವ್ಯಾಪಿಸುತ್ತಿದೆ.

ನೊರೊವೈರಸ್ ಒಂದು ಸಾಂಕ್ರಾಮಿಕ ಕಾಯಿಲೆಗೆ ಕಾರಣವಾದ ವೈರಾಣುವಾಗಿದ್ದು, ಅಮೆರಿಕಾದಲ್ಲಿ ಆಹಾರದಿಂದ ಉಂಟಾಗುವ ಹೆಚ್ಚಿನ ಸಮಸ್ಯೆಗಳಿಗೆ ಇದೇ ವೈರಾಣು ಮೂಲವಾಗಿದೆ ಎಂದು ಸಿಡಿಸಿ (ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್) ಹೇಳಿದೆ. ಇದನ್ನು ಹೊಟ್ಟೆ ಜ್ವರ ಎಂದೂ ಕರೆಯಲಾಗುತ್ತಿದ್ದು, ಸಾಧಾರಣವಾಗಿ ಇದು ಕಾಲದಲ್ಲೂ ಕಾಣಿಸಿಕೊಳ್ಳುವುದಿಲ್ಲ.

ಗುಣಲಕ್ಷಣಗಳೇನು? ನೊರೊವೈರಸ್ ದೇಹವನ್ನು ಪ್ರವೇಶಿಸಿದ 12ರಿಂದ 48 ಗಂಟೆಗಳೊಳಗೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸುಮಾರು ಮೂರ್ನಾಲ್ಕು ದಿನಗಳ ಕಾಲ ಬಾಧಿಸುವ ಈ ಕಾಯಿಲೆ ಹೊಟ್ಟೆನೋವು, ಅತಿಸಾರ, ವಾಕರಿಕೆ, ವಾಂತಿ, ಜ್ವರ, ಹೊಟ್ಟೆನೋವು, ಮೈಕೈ ನೋವು, ಸುಸ್ತಿಗೆ ಕಾರಣವಾಗುತ್ತದೆ. ಕೆಲವೊಮ್ಮೆ ಈ ಯಾವ ಗುಣಲಕ್ಷಣಗಳನ್ನೂ ತೋರಿಸದೆಯೂ ವೈರಾಣು ಬಾಧಿಸುವ ಸಾಧ್ಯತೆ ಇರುತ್ತದೆ ಎನ್ನುವುದನ್ನೂ ತಜ್ಞರು ಹೇಳುತ್ತಾರೆ.

ನೊರೊವೈರಸ್ ಸೋಂಕಿತರ ವಾಂತಿ ಹಾಗೂ ವಿಸರ್ಜಿಸಿದ ಕಲ್ಮಶಗಳಲ್ಲಿ ಸಕ್ರಿಯವಾಗಿರುತ್ತದೆ. ನಂತರ ಇದು ಯಾವುದೇ ಸ್ವರೂಪದಲ್ಲಿ ದೇಹವನ್ನು ಪ್ರವೇಶಿಸುವ ಸಾಧ್ಯತೆ ಇದ್ದು, ಆಹಾರ, ಅಶುದ್ಧ ನೀರಿನ ಮೂಲಕವೂ ಸೋಂಕು ತಗುಲುತ್ತದೆ. ವೈರಾಣು ಇರುವ ನೀರಿನಲ್ಲಿಯೇ ಬೆಳೆಯಲ್ಪಟ್ಟ ಆಹಾರ ಪದಾರ್ಥಗಳಿಗೆ ಇದು ಅಂಟಿಕೊಂಡಿರುವ ಸಾಧ್ಯತೆಯೂ ಇದ್ದು, ಅವುಗಳನ್ನು ಸ್ವಚ್ಛಗೊಳಿಸದೇ ಸೇವಿಸಿದಾಗ ಅಥವಾ ಅವುಗಳನ್ನು ಮುಟ್ಟಿದ ನಂತರ ಕೈ ತೊಳೆಯದೇ ಮುಖವನ್ನು ಸ್ಪರ್ಶಿಸಿಕೊಂಡಾಗ, ಊಟ ಮಾಡಿದಾಗ ವೈರಾಣು ದೇಹವನ್ನು ಪ್ರವೇಶಿಸುತ್ತದೆ.

ಈ ವೈರಾಣುವಿನಿಂದ ಹೆಚ್ಚಿನವರು ಯಾವುದೇ ಚಿಕಿತ್ಸೆ ಇಲ್ಲದೇ ಗುಣಮುಖರಾಗುವ ಸಾಧ್ಯತೆ ಇದೆಯಾದರೂ ವೃದ್ಧರು, ಚಿಕ್ಕ ಮಕ್ಕಳು ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾದ ಸ್ಥಿತಿ ಎದುರಾಗಬಹುದು. ಹೀಗಾಗಿ ಆರೋಗ್ಯವಂತರು, ಸದೃಢವಾಗಿರುವವರು ಈ ಕಾಯಿಲೆಯನ್ನು ಆರಾಮಾಗಿ ಎದುರಿಸಬಹುದಾದರೂ ಮಕ್ಕಳು ಹಾಗೂ ವೃದ್ಧರ ವಿಚಾರದಲ್ಲಿ ಅಗತ್ಯ ಎಚ್ಚರಿಕೆ ತೆಗೆದುಕೊಳ್ಳಲೇಬೇಕು.

ಇದನ್ನೂ ಓದಿ: Monkey B Virus: ಚೀನಾದಲ್ಲಿ ಮಂಕಿ ಬಿ ವೈರಸ್​ಗೆ ಮೊದಲ ಸಾವು; ಕೊರೊನಾ ನಡುವೆಯೇ ಮತ್ತೊಂದು ವೈರಾಣು ಪ್ರತ್ಯಕ್ಷ, ನಿಯಂತ್ರಣ ಹೇಗೆ? 

Corona Third Wave: ಜಾಗತಿಕ ಮಟ್ಟದಲ್ಲಿ ಶೇ.16ರಷ್ಟು ಏರಿಕೆ ಕಂಡ ಕೊರೊನಾ ಪ್ರಕರಣಗಳ ಸಂಖ್ಯೆ; ಭಾರತಕ್ಕೆ ನಾಲ್ಕನೇ ಸ್ಥಾನ

Follow Us
TV9 Web
TV9 Web

TV9 Kannada

Read More
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!