Monkey B Virus: ಚೀನಾದಲ್ಲಿ ಮಂಕಿ ಬಿ ವೈರಸ್​ಗೆ ಮೊದಲ ಸಾವು; ಕೊರೊನಾ ನಡುವೆಯೇ ಮತ್ತೊಂದು ವೈರಾಣು ಪ್ರತ್ಯಕ್ಷ, ನಿಯಂತ್ರಣ ಹೇಗೆ?

ಮಂಕಿ ಬಿ ವೈರಸ್​ 1932ರಲ್ಲಿ ಮೊದಲ ಬಾರಿಗೆ ಕಂಡುಬಂದಿದ್ದು, ಸೋಂಕಿತರೊಂದಿಗೆ ನೇರ ಸಂಪರ್ಕಕ್ಕೆ ಬರುವುದರಿಂದ, ಅವರ ದೇಹದಲ್ಲಿನ ಯಾವುದಾದರೊಂದು ಅಂಶ ಆರೋಗ್ಯಪೂರ್ಣ ವ್ಯಕ್ತಿಗೆ ವರ್ಗ ಆಗುವುದರಿಂದ ಸೋಂಕು ಹರಡಬಹುದು ಎನ್ನಲಾಗಿದೆ.

Monkey B Virus: ಚೀನಾದಲ್ಲಿ ಮಂಕಿ ಬಿ ವೈರಸ್​ಗೆ ಮೊದಲ ಸಾವು; ಕೊರೊನಾ ನಡುವೆಯೇ ಮತ್ತೊಂದು ವೈರಾಣು ಪ್ರತ್ಯಕ್ಷ, ನಿಯಂತ್ರಣ ಹೇಗೆ?
ಸಾಂಕೇತಿಕ ಚಿತ್ರ
Follow us
| Updated By: Skanda

Updated on: Jul 19, 2021 | 2:10 PM

ಬೀಜಿಂಗ್: ಕೊರೊನಾ ವೈರಾಣುವಿನ ಉಗಮ ಸ್ಥಳ ಎಂಬ ಅಪಖ್ಯಾತಿಯನ್ನು ಹೊತ್ತಿರುವ ಚೀನಾದಲ್ಲಿ ಮತ್ತೊಂದು ಪ್ರಭೇದದ ವೈರಾಣುವಿನಿಂದ ವ್ಯಕ್ತಿಯೋರ್ವ ಸಾವಿಗೀಡಾದ (Death) ಘಟನೆ ವರದಿಯಾಗಿದೆ. ಚೀನಾದಲ್ಲಿ ಮಂಕಿ ಬಿ ವೈರಸ್​ (Monkey B Virus) ನಿಂದ ಮೊದಲ ಸಾವು ಸಂಭವಿಸಿದ್ದು, ಬೀಜಿಂಗ್ (Beijing) ಮೂಲದ ಪಶುವೈದ್ಯರೊಬ್ಬರು (Veterinary Doctor) ಸೋಂಕು ತಗುಲಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಮಾರ್ಚ್​ ತಿಂಗಳ ಸಂದರ್ಭದಲ್ಲಿ ಎರಡು ಸತ್ತ ಮಂಗಗಳ ಮರಣೋತ್ತರ ಪರೀಕ್ಷೆಯನ್ನು ಇದೇ ವೈದ್ಯರು ನಡೆಸಿದ್ದರು ಎಂಬ ಅಂಶವನ್ನು ಚೀನಾದ ಸಿಡಿಸಿ (CDC) ವೀಕ್ಲಿ ಪ್ರಕಟಿಸಿದೆ.

ಸುಮಾರು 53 ವರ್ಷದ ಪಶುವೈದ್ಯರಿಗೆ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿದ ಒಂದು ತಿಂಗಳ ನಂತರ ವಾಕರಿಕೆ, ವಾಂತಿ ಸಮಸ್ಯೆ ಆರಂಭವಾಗಿದೆ. ಅದರ ಬೆನ್ನಲ್ಲೇ ಜ್ವರ ಹಾಗೂ ನರ ಸಂಬಂಧಿ ತೊಂದರೆಗಳು ಕೂಡಾ ತಲೆದೋರಿದ್ದು, ತೀರಾ ಅಸ್ವಸ್ತಗೊಂಡ ಅವರು ಮೇ 27ನೇ ತಾರೀಖಿನಂದು ಮೃತಪಟ್ಟಿದ್ದಾರೆ. ಇದೀಗ ಆ ವ್ಯಕ್ತಿಗೆ ನಡೆಸಲಾದ ವೈದ್ಯಕೀಯ ಪರೀಕ್ಷೆಯ ವರದಿಗಳು ಬಹಿರಂಗಗೊಂಡಿದ್ದು, ಅವರು ಮಂಕಿ ಬಿ ವೈರಸ್​ನಿಂದ ಮೃತಪಟ್ಟಿದ್ದಾರೆ ಎನ್ನುವುದು ಖಚಿತವಾಗಿದೆ.

ಪಶುವೈದ್ಯರಿಗೆ ಅನಾರೋಗ್ಯ ಕಾಣಿಸಿಕೊಂಡ ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆರೋಗ್ಯ ಸ್ಥಿತಿ ಹಂತಹಂತವಾಗಿ ಹದಗೆಡುತ್ತಾ ಬಂದಿದೆ. ನಂತರ ಅವರ ದೇಹದಿಂದ ವಿವಿಧ ಅಂಶಗಳ ಮಾದರಿಗಳನ್ನು ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪ್ರಯೋಗಾಲಯದಲ್ಲಿ ಆರ್​ಟಿಪಿಸಿಆರ್ ಸೇರಿದಂತೆ ಒಟ್ಟು 4 ಪರೀಕ್ಷೆಗಳನ್ನು ನಡೆಸಿದಾಗ ಆ ವ್ಯಕ್ತಿಗೆ ಮಂಕಿ ಬಿ ವೈರಸ್ ತಗುಲಿರುವುದು ದೃಢಪಟ್ಟಿದೆ.

ಅದೃಷ್ಟವಶಾತ್, ಪಶುವೈದ್ಯನ ನಿಕಟ ಸಂಪರ್ಕದಲ್ಲಿದ್ದವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಮಂಕಿ ಬಿ ವೈರಸ್ ನೆಗೆಟಿವ್ ಕಾಣಿಸಿಕೊಂಡಿದ್ದು, ಹೆಚ್ಚು ಜನಕ್ಕೆ ಹಬ್ಬಿರಬಹುದೆಂಬ ಭೀತಿಯನ್ನು ತಗ್ಗಿಸಿದೆ. ಆದರೂ, ತಜ್ಞರ ಪ್ರಕಾರ ಈ ವೈರಾಣು ಪಶುವೈದ್ಯರಿಗೆ, ಅರಣ್ಯದೊಂದಿಗೆ ನಿಕಟ ಸಂಬಂಧ ಹೊಂದಿದವರಿಗೆ, ಪ್ರಾಣಿಗಳನ್ನು ನೋಡಿಕೊಳ್ಳುವವರಿಗೆ, ಪ್ರಯೋಗಾಲಯದ ಸಿಬ್ಬಂದಿಗೆ ಬೇಗ ತಗುಲಬಹುದಾಗಿದ್ದು ಎಚ್ಚರಿಕೆ ಅತ್ಯವಶ್ಯಕ ಎನ್ನಲಾಗಿದೆ.

ಏನಿದು ಮಂಕಿ ಬಿ ವೈರಸ್? ಮಂಕಿ ಬಿ ವೈರಸ್​ 1932ರಲ್ಲಿ ಮೊದಲ ಬಾರಿಗೆ ಕಂಡುಬಂದಿದ್ದು, ಸೋಂಕಿತರೊಂದಿಗೆ ನೇರ ಸಂಪರ್ಕಕ್ಕೆ ಬರುವುದರಿಂದ, ಅವರ ದೇಹದಲ್ಲಿನ ಯಾವುದಾದರೊಂದು ಅಂಶ ಆರೋಗ್ಯಪೂರ್ಣ ವ್ಯಕ್ತಿಗೆ ವರ್ಗ ಆಗುವುದರಿಂದ ಸೋಂಕು ಹರಡಬಹುದು ಎನ್ನಲಾಗಿದೆ. ಸೋಂಕು ತಗುಲಿದ ಒಂದರಿಂದ ಮೂರು ವಾರಗಳ ಅವಧಿಯಲ್ಲಿ ಕಾಯಿಲೆಯ ಗುಣಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಕೇಂದ್ರ ನರಮಂಡಲವನ್ನು ಹಾನಿಗೊಳಿಸುವ ಈ ರೋಗದಲ್ಲಿ ಮರಣ ಪ್ರಮಾಣವೂ ತುಸು ಹೆಚ್ಚೇ ಇರುವುದರಿಂದ ಎಚ್ಚರಿಕೆ ತಪ್ಪಿದರೆ ಕಂಟಕ. ಹೀಗಾಗಿ ಸೋಂಕು ಕಾಣಿಸಿಕೊಂಡ ಕೂಡಲೇ ಚಿಕಿತ್ಸೆ ಅಗತ್ಯ ಎನ್ನುವುದನ್ನು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ ಆತಂಕದ ಮಧ್ಯೆ ಕಾಣಿಸಿಕೊಂಡ ಮಂಕಿಪಾಕ್ಸ್​​; ಕಳೆದ 20 ದಶಕಗಳಲ್ಲಿ ಪತ್ತೆಯಾದ ಮೊದಲ ಪ್ರಕರಣ 

ಪ್ರಾಣಿಗಳಿಂದ ಮನುಷ್ಯರಿಗೆ ಬಂತೇ ಕೊರೊನಾ ಸೋಂಕು? ಚೀನಾದಲ್ಲಿ ನಿಜಕ್ಕೂ ನಡೆದದ್ದು ಏನು?

Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ