AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ತಲೆಕೂದಲು ಬಿಳಿಯಾಗಿದೆ ಎಂದು ಚಿಂತಿಸುವ ಬದಲು ಈ 5 ಕ್ರಮಗಳನ್ನು ಅನುಸರಿಸಿ

White Hair: ಒತ್ತಡ, ಹೆರಿಡಿಟಿ, ಜೀವನಶೈಲಿಯಲ್ಲಿನ ಬದಲಾವಣೆ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಕೂದಲನ್ನು ಬಿಳಿಯಾಗಿಸಬಹುದು. ಆದರೆ ಚಿಂತಿಸುವ ಅಗತ್ಯ ಇಲ್ಲ. ಈ 5 ವಿಧಾನಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿಯೇ ಬಿಳಿ ಕೂದಲಿನ ಸಮಸ್ಯೆಯನ್ನು ದೂರ ಮಾಡಬಹುದು.

Health Tips: ತಲೆಕೂದಲು ಬಿಳಿಯಾಗಿದೆ ಎಂದು ಚಿಂತಿಸುವ ಬದಲು ಈ 5 ಕ್ರಮಗಳನ್ನು ಅನುಸರಿಸಿ
ಬಿಳಿ ಕೂದಲು
TV9 Web
| Edited By: |

Updated on: Aug 02, 2021 | 8:01 AM

Share

ಇತ್ತೀಚೆಗೆ ಬಿಳಿ ಕೂದಲು ಯುವ ಪೀಳಿಗೆಯವರನ್ನು ಹೆಚ್ಚು ಕಾಡುತ್ತಿದೆ. ಅಷ್ಟೇ ಅಲ್ಲ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. 20 ವರ್ಷ ದಾಟುವಾಗಲೇ ತಲೆಯ ಎಲ್ಲಾ ಕೂದಲುಗಳು ಬೂದು ಬಣ್ಣಕ್ಕೆ ತಿರುಗುತ್ತವೆ. ಒತ್ತಡ, ಹೆರಿಡಿಟಿ, ಜೀವನಶೈಲಿಯಲ್ಲಿನ ಬದಲಾವಣೆ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಕೂದಲನ್ನು ಬಿಳಿ (White Hair)ಯಾಗಿಸಬಹುದು. ಆದರೆ ಚಿಂತಿಸುವ ಅಗತ್ಯ ಇಲ್ಲ. ಈ 5 ವಿಧಾನಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿಯೇ ಬಿಳಿ ಕೂದಲಿನ ಸಮಸ್ಯೆಯನ್ನು ದೂರ ಮಾಡಬಹುದು.

1. ನೆಲ್ಲಿಕಾಯಿ ಒಂದು ಪಾತ್ರೆಗೆ 500 ಮಿಲಿ ತೆಂಗಿನ ಎಣ್ಣೆ ಹಾಕಿ. ಅದು ಕಾದ ಮೇಲೆ 1 ಕಪ್ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ 20 ನಿಮಿಷಗಳ ಕಾಲ ಬಿಸಿ ಮಾಡಿ. ನಂತರ ಇದನ್ನು ತಣ್ಣಗಾಗಲು ಬಿಡಿ. ಬಳಿಕ ಗಾಳಿಯಾಡದ ಬಾಟಲಿಗೆ ಹಾಕಿ ಇಟ್ಟುಕೊಂಡು, ವಾರಕ್ಕೆ ಎರಡು ಬಾರಿ ಇದನ್ನು ತಲೆಗೆ ಹಾಕಿ 30 ನಿಮಿಷಗಳ ನಂತರ ತೊಳೆಯಿರಿ. ಈ ರೀತಿ ಮಾಡುವುದರಿಂದ ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ.

2. ಕರಿಬೇವಿನ ಎಲೆಗಳು ಕರಿಬೇವಿನ ಎಲೆ, ನೆಲ್ಲಿಕಾಯಿ ಪುಡಿ, ಬ್ರಾಹ್ಮಿ ಪುಡಿ ಹಾಕಿ ರುಬ್ಬಿಕೊಳ್ಳಿ. ಬಳಿಕ ಈ ಮಿಶ್ರಣವನ್ನು ಹೇರ್ ಮಾಸ್ಕ್ ಆಗಿ ಕೂದಲಿಗೆ ಹಚ್ಚಿಕೊಳ್ಳಿ. ಒಂದು ಗಂಟೆ ಬಿಟ್ಟು ಶಾಂಪೂವಿನಿಂದ ತೊಳೆಯಿರಿ. ಈ ಅಭ್ಯಾಸ ಕೂದಲನ್ನು ಬಲಗೊಳಿಸುತ್ತದೆ. ಅಲ್ಲದೆ ಬಿಳಿ ಕೂದಲನ್ನು ದೂರ ಮಾಡುತ್ತದೆ.

3. ಮದರಂಗಿ ಸೊಪ್ಪು ಮದರಂಗಿ ಸೊಪ್ಪನ್ನು ಕೂದಲಿಗೆ ಬಣ್ಣ ನೀಡಲು ಪ್ರಾಚೀನ ಕಾಲದಿಂದಲೂ ಬಳಸಲಾಗುವ ನೈಸರ್ಗಿಕ ವಿಧಾನವಾಗಿದೆ. ಇದು ಕೂದಲಿಗೆ ಹೊಳಪು ನೀಡುವುದರ ಜತೆಗೆ ಬಿಳಿ ಕೂದಲು ಇಲ್ಲದಂತೆ ಮಾಡುತ್ತದೆ.

4. ತೆಂಗಿನ ಎಣ್ಣೆ ತೆಂಗಿನ ಎಣ್ಣೆ ಮತ್ತು ನಿಂಬೆ ರಸವು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಇವೆರಡರ ಸಂಯೋಜನೆಯು ರಾಸಾಯನಿಕ ಕ್ರಿಯೆಯನ್ನು ಉಂಟುಮಾಡುತ್ತದೆ. ಹೀಗಾಗಿ ವಾರಕ್ಕೆ ಒಂದು ಬಾರಿ ಈ ವಿಧಾನ ಅನುಸರಿಸಿ.

5. ಚಹಾ ಬಿಳಿ ಕೂದಲನ್ನು ತಡೆಯಲು ಸಹಾಯ ಮಾಡುವ ಇನ್ನೊಂದು ಪರಿಣಾಮಕಾರಿ ಅಂಶವೆಂದರೆ ಚಹಾದ ಎಲೆ. ಚಹಾದ ಎಲೆಗಳನ್ನು ಬೆಚ್ಚಗಿನ ನೀರಿನಲ್ಲಿ 2 ಗಂಟೆಗಳ ಕಾಲ ನೆನೆಸಿ. ಬಳಿಕ ಇದರಿಂದ ಪೇಸ್ಟ್ ತಯಾರಿಸಿ. ನಂತರ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ, 40 ನಿಮಿಷಗಳ ನಂತರ ಇದನ್ನು ನೀರಿನಿಂದ ತೊಳೆಯಿರಿ.

ಇದನ್ನೂ ಓದಿ: Noni Fruit: ನೋಣಿ ಹಣ್ಣಿನ ಬಗ್ಗೆ ನಿಮಗೆ ತಿಳಿದಿದೆಯೇ? ಇದರ ಬೇರು, ಹಣ್ಣು ಮತ್ತು ಎಲೆ ಅನೇಕ ಆರೋಗ್ಯಕರ ಗುಣಗಳಿಂದ ಕೂಡಿದೆ

Black Pepper Benefits: ನಾಲ್ಕು ಕಾಳು ಕರಿಮೆಣಸನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಅನೇಕ ಬದಲಾವಣೆಗಳಾಗುತ್ತದೆ

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ