Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಿವಿ ಹಣ್ಣು ತಿನ್ನಿ; ಇದರ ಪ್ರಯೋಜನಗಳು ಎಷ್ಟಿವೆ ಗೊತ್ತಾ?

ಕಿವಿ ಹಣ್ಣು ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು. ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಈ ಹಣ್ಣನ್ನು ದೈನಂದಿನ ಆಹಾರದಲ್ಲಿ ಸೇರಿಸಿ ತಿನ್ನಬಹುದು. ಕಿವಿ ಹಣ್ಣಿನಿಂದ ಆಗಾಗ ಸಲಾಡ್ ಮಾಡಿ ತಿನ್ನಿ.

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಿವಿ ಹಣ್ಣು ತಿನ್ನಿ; ಇದರ ಪ್ರಯೋಜನಗಳು ಎಷ್ಟಿವೆ ಗೊತ್ತಾ?
ಕಿವಿ ಹಣ್ಣು
Follow us
TV9 Web
| Updated By: ಆಯೇಷಾ ಬಾನು

Updated on: Aug 05, 2021 | 8:01 AM

ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಶುರುವಾಗಿದೆ. ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಮೂರನೇ ಅಲೆ ಭೀತಿ ಹೆಚ್ಚಾಗಿದೆ. ಕೊರೊನಾ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಅಸ್ತ್ರವಿದ್ದಂತೆ. ಹೀಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಿವಿ ಹಣ್ಣನ್ನು ಹೆಚ್ಚು ತಿನ್ನಬೇಕು. ಕೊರೊನಾ ಮಾತ್ರವಲ್ಲ ಶೀತ, ನೆಗಡಿ, ಜ್ವರದಿಂದ ದೂರವಿರಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಅನಿವಾರ್ಯವಾಗಿದೆ. ಕಿವಿ ಹಣ್ಣು ವಿಟಮಿನ್ ಸಿ ಮತ್ತು ಫೈಬರ್ ಸಮೃದ್ಧವಾಗಿರುವ ಅನೇಕ ಆರೋಗ್ಯಕರ ಹಣ್ಣುಗಳಲ್ಲಿ ಒಂದಾಗಿದ್ದು, ಇದನ್ನು ಹೆಚ್ಚು ಸೇವಿಸಬೇಕು.

ಕಿವಿ ಹಣ್ಣು ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು. ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಈ ಹಣ್ಣನ್ನು ದೈನಂದಿನ ಆಹಾರದಲ್ಲಿ ಸೇರಿಸಿ ತಿನ್ನಬಹುದು. ಕಿವಿ ಹಣ್ಣಿನಿಂದ ಆಗಾಗ ಸಲಾಡ್ ಮಾಡಿ ತಿನ್ನಿ. ಸಲಾಡ್ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಸಲಾಗಿದೆ.

ಸಲಾಡ್ ಮಾಡಲು ಕಿವಿ ಹಣ್ಣು, ಸೌತೆಕಾಯಿ, ಕ್ಯಾರೆಟ್, ಡ್ರ್ಯಾಗನ್ ಹಣ್ಣು, ಎಳ್ಳು ಮತ್ತು ನಿಂಬೆ ರಸ, ಮೆಣಸಿನಕಾಯಿ ಮತ್ತು ಉಪ್ಪು ಬೇಕಾಗುತ್ತದೆ. ಒಂದು ಬೌಲ್ಗೆ ಕತ್ತರಿಸಿದ ಕಿವಿ ಹಣ್ಣು, ತುರಿದ ಕ್ಯಾರೆಟ್, ಸೌತೆಕಾಯಿಯ ಸಣ್ಣ ಸಣ್ಣ ತುಂಡುಗಳು, ಕತ್ತರಿಸಿದ ಡ್ರ್ಯಾಗನ್ ಹಣ್ಣು, ಎಳ್ಳು ಸೇರಿಸಿ. ಜೊತೆಗೆ ನಿಂಬೆ ರಸ, ಸಣ್ಣದಾಗಿ ಕತ್ತರಿಸಿದ ಮೆಣಸಿನಕಾಯಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ತಿನ್ನಿ.

ಕಿವಿ ಹಣ್ಣನ್ನು ಹೀಗೂ ತಿನ್ನಬಹುದು ಕಡಿಮೆ ಸಮಯದಲ್ಲಿ ನೀವು ಕಿವಿ ಹಣ್ಣಿನ ಸ್ಯಾಂಡ್ವಿಚ್ ಮಾಡಿ ತಿನ್ನಬಹುದು. ಸ್ಯಾಂಡ್ವಿಚ್ ಮಾಡಲು ಕಿವಿ ಹಣ್ಣು, ಬ್ರೆಡ್ ತುಂಡು, ಬೆಣ್ಣೆ ಅಥವಾ ಹಾಲಿನ ಕೆನೆ ಬೇಕಾಗುತ್ತದೆ. ನಾನ್ ಸ್ಟಿಕ್ ತವಕ್ಕೆ ಸ್ವಲ್ಪ ಬೆಣ್ಣೆ ಹಾಕಿ ಬ್ರೆಡ್ ರೋಸ್ಟ್ ಮಾಡಿ. ಎರಡು ಬದಿ ಕಂದು ಬಣ್ಣ ಬರುವವರೆಗೆ ಬ್ರೆಡ್ ರೋಸ್ಟ್ ಮಾಡಬೇಕು. ನಂತರ ಅದರ ಮೇಲೆ ಹಾಲಿನ ಕೆನೆ ಅಥವಾ ಬೆಣ್ಣೆ ಹಚ್ಚಿ. ಬ್ರೆಡ್ ಮಧ್ಯಕ್ಕೆ ಕಿವಿ ಹಣ್ಣನ್ನು ಇಟ್ಟು ತಿನ್ನಿ.

ಕಿವಿ ಹಣ್ಣಿನ ಸ್ಯಾಂಡ್​ವಿಚ್​

ಕಿವಿ ಹಣ್ಣನ್ನು ತಿನ್ನುವುದರಿಂದ ಪ್ರಯೋಜನವೇನು? * ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಯಾಗುತ್ತದೆ. * ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. * ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. * ಉರಿಯೂತದ ಸಮಸ್ಯೆ ನಿವಾರಣೆ. * ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. * ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ.

ಇದನ್ನೂ ಓದಿ

Kidney Health Tips: ಮೂತ್ರಪಿಂಡದ ಆರೈಕೆಗೆ ಪ್ರತಿ ದಿನ ಈ ಆಹಾರಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ

Health Tips: ಮಳೆಗಾಲದಲ್ಲಿ ಕಾಯಿಲೆಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚು, ಹೀಗಾಗಿ ಈ 5 ಆಹಾರಗಳ ಬಗ್ಗೆ ಗಮನಹರಿಸಿ

(Health Tips Kiwi fruit should be eaten to boost immunity)

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್