ಕಪ್ಪು ಜೀರಿಗೆಯಲ್ಲಿ ಕೊವಿಡ್ ಸೋಂಕು ತಡೆಗಟ್ಟುವ ಸಾಮರ್ಥ್ಯವಿದೆ: ವರದಿ

Kalonji Seeds: ಕಪ್ಪು ಜೀರಿಗೆ ಅಸ್ತಮಾ, ಸಂಧಿವಾತ ಮತ್ತು ಅರ್ಜಿಯಂತಹ ಸಮಸ್ಯೆಗಳಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ನಿಗೆಲ್ಲಾ ಸಟಿವಾ ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಮಧುಮೇಹ ಚಿಕಿತ್ಸೆಯಲ್ಲಿ ಸಹಾಯಕಾರಿಯಾಗಿದೆ.

ಕಪ್ಪು ಜೀರಿಗೆಯಲ್ಲಿ ಕೊವಿಡ್ ಸೋಂಕು ತಡೆಗಟ್ಟುವ ಸಾಮರ್ಥ್ಯವಿದೆ: ವರದಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Aug 05, 2021 | 4:17 PM

ಆಸ್ಟ್ರೇಲಿಯಾದ ಸಂಶೋಧಕರು ಇತ್ತೀಚೆಗೆ ಕಲೋಂಜಿ ಬೀಜಗಳನ್ನು (ಕಪ್ಪು ಜೀರಿಗೆ) ಕೊವಿಡ್19 ಸೋಂಕಿನ ಚಿಕಿತ್ಸೆಯಲ್ಲಿ ಬಳಸಬಹುದು ಎಂದು ಕಂಡು ಹಿಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕೊಲೋಂಜಿಯ ಬೀಜಗಳನ್ನು ನಿಗೆಲ್ಲಾ ಸಟಿವಾ ಎಂದು ಕರೆಯಲಾಗುತ್ತದೆ. ಉತ್ತರ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದಲ್ಲಿ ಇದನ್ನು ಬೆಳೆಯಲಾಗುತ್ತದೆ. ಉರಿಯೂತ ಮತ್ತು ಸೋಂಕುಗಳ ನಿವಾರಣೆಗೆ ವೈದ್ಯಕೀಯವಾಗಿಯೂ ಸಹ ಇದನ್ನು ಬಳಸಲಾಗುತ್ತಿದೆ. ಸಿಡ್ನಿಯಲ್ಲಿರುವ ಯುನಿವರ್ಸಿಟಿ ಆಫ್ ಟೆಕ್ನಾಲಜಿ ತಂಡವು ಕೊವಿಡ್19 ಸಾಂಕ್ರಾಮಿಕ ರೋಗದ ವೈರಸ್ಅನ್ನು ತಡೆಗಟ್ಟುವ ಸಾಮರ್ಥ್ಯ ನಿಗೆಲ್ಲಾ ಸಟಿವಾದಲ್ಲಿದೆ ಎಂದು ತಿಳಿಸಿದ್ದಾರೆ.

ಫೆನೆಲ್ ಫ್ಲವರ್ ಎಂದು ಕರೆಯಲ್ಪಡುವ ಈ ಸಸ್ಯದ ಬೀಜಗಳನ್ನು ಶ್ವಾಸಕೋಶ ಸಂಬಂಧಿ ಖಾಯಿಲೆಗೆ ಬಳಸಲಾಗುತ್ತದೆ ಎಂದು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾದ ಖನೀಜ್ ಫತಿಮಾ ಶಾದ್ ಹೇಳಿದ್ದಾರೆ. ಕೊವಿಡ್ 19 ಸಾಂಕ್ರಾಮಿಕದಿಂದ ಆಸ್ಪತ್ರೆಗೆ ದಾಖಲಾಗುವ ಹಾಗೂ ಅನಾರೋಗ್ಯ ಪೀಡಿತ ರೋಗಿಗಳ ಮೇಲೆ ಪರಿಣಾಮ ಬೀರುವ ಸೈಟೊಕಿನ್ಅನ್ನು ತಡೆಯಬಹುದು ಎಂದು ಶಾದ್ ಹೇಳಿದ್ದಾರೆ.

ಈ ಅಧ್ಯಯನವನ್ನು ಕ್ಲಿನಿಕ್ ಮತ್ತು ಎಕ್ಸ್ಪೆರಿಮೆಂಟಲ್ ಫಾರ್ಮಲಜಿ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಥೈಮೊಕ್ವಿನೋನ್ಅನ್ನು ಪ್ರಯೋಗಾಲಯದಲ್ಲಿ ಅಧ್ಯಯನ ಕೈಗೊಳ್ಳಲಾಗಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಬಲ್ಲದು ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ದೇಹದಲ್ಲಿನ ಉರಿಯೂತದ ಪರ ಉತ್ಪತ್ತಿಯಾಗುವ ರಾಸಾಯನಿಕಗಳ ಬಿಡುಗಡೆಯನ್ನು ಇದು ತಡೆಯುತ್ತದೆ ಎಂಬುದು ವರದಿಯಾಗಿದೆ.

ಇದು ಅಸ್ತಮಾ, ಸಂಧಿವಾತ ಮತ್ತು ಅರ್ಜಿಯಂತಹ ಸಮಸ್ಯೆಗಳಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ನಿಗೆಲ್ಲಾ ಸಟಿವಾ ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಮಧುಮೇಹ ಚಿಕಿತ್ಸೆಯಲ್ಲಿ ಸಹಾಯಕಾರಿಯಾಗಿದೆ. ಸ್ಟ್ಯಾಫಿಲೋಕೊಕಸ್ ಔರಿಯಸ್ನಂತಹ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಶಕ್ತಿ ಕಪ್ಪು ಜೀರಿಗೆಗಿದೆ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ:

Kalonji Seeds: ಕಪ್ಪು ಜೀರಿಗೆಯಲ್ಲಿದೆ ನಿಮಗೆ ತಿಳಿಯದ ಪ್ರಮುಖ ಆರು ಪ್ರಯೋಜಗಳು

Health Benefits: ನೆನೆಸಿದ ಕಡಲೆಕಾಳು ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ

ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ