AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಮಳೆಗಾಲದಲ್ಲಿ ಕಾಯಿಲೆಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚು, ಹೀಗಾಗಿ ಈ 5 ಆಹಾರಗಳ ಬಗ್ಗೆ ಗಮನಹರಿಸಿ

ಮಳೆಗಾಲದಲ್ಲಿ ಬಿಸಿ ಚಹಾ ಮತ್ತು ಪಕೋಡಗಳನ್ನು ಇಷ್ಟಪಡುತ್ತಾರೆ. ಆದರೆ ಇವುಗಳನ್ನೇ ಯಾವಾಗಲೂ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ. ತೂಕ ಹೆಚ್ಚಳಕ್ಕೆ ಕೂಡ ಇದು ಕಾರಣವಾಗುತ್ತದೆ. ಹೀಗಾಗಿ ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿಗಳನ್ನು ಅನುಸರಿಸಿ.

Health Tips: ಮಳೆಗಾಲದಲ್ಲಿ ಕಾಯಿಲೆಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚು, ಹೀಗಾಗಿ ಈ 5 ಆಹಾರಗಳ ಬಗ್ಗೆ ಗಮನಹರಿಸಿ
ಪ್ರಾತಿನಿಧಿಕ ಚಿತ್ರ
TV9 Web
| Updated By: preethi shettigar|

Updated on: Aug 04, 2021 | 3:30 PM

Share

ಮಳೆಗಾಲದಲ್ಲಿ ರೋಗಗಳ ಅಪಾಯ ಹೆಚ್ಚಾಗಿರುತ್ತದೆ. ತಂಪಾದ ವಾತಾವರಣ ಇರುವುದರಿಂದ ಸೋಂಕಿನ ಅಪಾಯ ಕೂಡ ಹಾಗೆಯೇ ಇರುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ಈ ಋತುವಿನಲ್ಲಿ ಆಹಾರದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಹೆಚ್ಚಿನವರು ಮಳೆಗಾಲದಲ್ಲಿ(Monsson) ಬಿಸಿ ಚಹಾ ಮತ್ತು ಪಕೋಡಗಳನ್ನು ಇಷ್ಟಪಡುತ್ತಾರೆ. ಆದರೆ ಇವುಗಳನ್ನೇ ಯಾವಾಗಲೂ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ. ತೂಕ ಹೆಚ್ಚಳಕ್ಕೆ ಕೂಡ ಇದು ಕಾರಣವಾಗುತ್ತದೆ. ಹೀಗಾಗಿ ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿಗಳನ್ನು ಅನುಸರಿಸಿ.

1. ಜೋಳದಿಂದ ತಯಾರಿಸಿದ ತಿಂಡಿ ಸಂಜೆ ಕಾಲಕ್ಕೆ ನಾವೆಲ್ಲರೂ ನಮ್ಮ ಹಸಿವನ್ನು ನೀಗಿಸಲು ಸಮೋಸ, ಪಕೋಡ ಮತ್ತು ಬಜ್ಜಿಗಳನ್ನು ತಿನ್ನುತ್ತೇವೆ. ಆದರೆ, ಇವುಗಳನ್ನು ಯಾವಾಗಲೂ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ. ಸಂಜೆ ಹೊತ್ತಿಗೆ ಆರೋಗ್ಯಕರ ತಿಂಡಿಗಳನ್ನು ಸೇವಿಸಿ. ನೀವು ಜೋಳ, ಪಾಪ್‌ಕಾರ್ನ್ ತಿನ್ನಬಹುದು. ಇವುಗಳಲ್ಲಿ ಕಡಿಮೆ ಕ್ಯಾಲೋರಿಗಳಿವೆ ಮತ್ತು ಆರೋಗ್ಯಕ್ಕೂ ಪ್ರಯೋಜನಕಾರಿ.

2. ಟೀ ಅಥವಾ ಕಾಫಿ ಮಳೆಗಾಲದಲ್ಲಿ ದೇಹವನ್ನು ಸ್ವಚ್ಛವಾಗಿರಿಸುವುದು ಬಹಳ ಮುಖ್ಯ. ಹೀಗಾಗಿ ನೀರಿನಾಂಶದಿಂದ ಕೂಡಿದ ಆಹಾರ ಸೇವಿಸಿ. ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ತೂಕ ಇಳಿಸಿಕೊಳ್ಳಲು ಕೂಡ ಸಹಾಯ ಮಾಡುತ್ತದೆ. ಬಾಯಾರಿಕೆಯಾಗುತ್ತಿದೆ ಎಂದು ತಿಳಿಯುವ ಮೊದಲೇ ನೀರು ಕುಡಿಯುವುದು ಸೂಕ್ತ. ಮಳೆಗಾಲದಲ್ಲಿ ನೀರು, ಜ್ಯೂಸ್ ಮತ್ತು ಹರ್ಬಲ್ ಟೀಗಳನ್ನು ಕಾಲಕಾಲಕ್ಕೆ ಕುಡಿಯುವುದು ಸೂಕ್ತ.

3. ಹಣ್ಣುಗಳನ್ನು ಸೇವಿಸಿ ಆಹಾರದ ಜತೆಗೆ ಹಣ್ಣುಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತವೆ. ಆಹಾರದಲ್ಲಿ ಸ್ಟ್ರಾಬೆರಿಗಳು, ದಾಳಿಂಬೆ ಇತ್ಯಾದಿಗಳನ್ನು ಸೇರಿಸಬೇಕು. ಇದು ಉತ್ತಮ ಆರೋಗ್ಯಕ್ಕೆ ಮಾತ್ರವಲ್ಲ, ತೂಕ ಇಳಿಸಲು  ಸಹಾಯ ಮಾಡುತ್ತದೆ.

4. ಶುಂಠಿ ಚಹಾ ಕುಡಿಯಿರಿ ಮಳೆಗಾಲದಲ್ಲಿ ಶುಂಠಿ ಚಹಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಶುಂಠಿಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದು ಕಾಲೋಚಿತ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಶುಂಠಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶುಂಠಿಯೊಂದಿಗೆ ಕರಿಮೆಣಸು, ಲವಂಗ, ದಾಲ್ಚಿನ್ನಿ ಮಿಶ್ರಣ ಮಾಡಿ ಕುಡಿಯುವುದು ಸೂಕ್ತ.

5. ಸೂಪ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಮಳೆಗಾಲದಲ್ಲಿ ಸೂಪ್ ಕುಡಿಯುವುದು ತುಂಬಾ ಪ್ರಯೋಜನಕಾರಿ. ಸೂಪ್ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಇದರಲ್ಲಿ ಹೆಚ್ಚಿನ ಶೇಕಡಾವಾರು ನೀರು ಇರುವುದರ ಜತೆಗೆ, ಕ್ಯಾಲೋರಿ ಕೂಡ ಕಡಿಮೆ ಇರುತ್ತದೆ, ಸೂಪ್ ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ ಮತ್ತು ತೂಕ ಕೂಡ ಕಡಿಮೆಯಾಗುತ್ತದೆ.

ಇದನ್ನೂ ಓದಿ: Garam Masala Benefits: ಗರಂ ಮಸಾಲೆ ಪರಿಮಳ ಮತ್ತು ರುಚಿಗಷ್ಟೇ ಸಿಮಿತವಾಗಿಲ್ಲ ಅನೇಕ ಆರೋಗ್ಯಕರ ಗುಣಗಳು ಇದರಲ್ಲಿದೆ

Health Benefits: ಹೂವು ಕೇವಲ ಅಂದಕ್ಕಷ್ಟೇ ಅಲ್ಲ ಅನೇಕ ಆರೋಗ್ಯಕರ ಗುಣಗಳು ಇದರಲ್ಲಿ ಅಡಗಿದೆ