ಆಷಾಢ ಹಬ್ಬದ ಮದ್ದು ನೀರಿನ ಜೆಲ್ಲಿ; ಆಟಿ ಸೊಪ್ಪಿನಿಂದ ತಯಾರಿಸಿದ ವಿಶೇಷ ಅಡುಗೆ
ವೈಜ್ಞಾನಿಕವಾಗಿ ಜಸ್ಟೀಸಿಯ ವೈನಾಡೆನ್ನಿಸ್ ಎಂದು ಕರೆಯುವ ಈ ಸಸ್ಯ ಜಿಲ್ಲೆಯ ಕಾಡುಗಳು ಮಾತ್ರವಲ್ಲದೇ, ಕಾಫಿ ತೋಟದಲ್ಲೂ ಹೇರಳವಾಗಿ ಸಿಗುತ್ತದೆ. ಹಾಗಿದ್ದರೆ ಇಂದು ಕೊಡಗಿನ ಆಷಾಢ ಹಬ್ಬದ ಮದ್ದು ನೀರಿನ ಜೆಲ್ಲಿ ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ.
ಆಟಿ (ಮದ್ದು) ಸೊಪ್ಪು ಎಂದು ಕರೆಯಲ್ಪಡುವ ಔಷಧೀಯ ಗಿಡದ ರಸದಿಂದ ತಯಾರಿಸಿದ ಮದ್ದು ನೀರಿನ ಜೆಲ್ಲಿಯನ್ನು ಕೊಡಗಿನ ಎಲ್ಲರ ಮನೆಯಲ್ಲಿಯೂ ಮಾಡಿ ಸವಿಯುವುದು ವಾಡಿಕೆ. ಕಕ್ಕಡ ಎಂದರೇ ಆಟಿ ತಿಂಗಳು ಅಥವಾ ಕರ್ಕಾಟಕ ಮಾಸ ಎಂದು ಅರ್ಥ. ಈ ತಿಂಗಳಲ್ಲಿ ಆಟಿ ಸೊಪ್ಪಿನಿಂದ ವಿವಿಧ ಅಡುಗೆಗಳನ್ನು ಮಾಡಲಾಗುತ್ತದೆ. ಕೊಡಗಿನಲ್ಲಿ ಸಾಕಷ್ಟು ಔಷಧೀಯ ಗುಣಗಳುಳ್ಳ ಸಸ್ಯ ಪ್ರಭೇದಗಳಿವೆ. ಅವುಗಳಲ್ಲಿ ಆಟಿ ಸೊಪ್ಪು ಪ್ರಮುಖವಾದದ್ದು, ಇನ್ನು ವೈಜ್ಞಾನಿಕವಾಗಿ ಜಸ್ಟೀಸಿಯ ವೈನಾಡೆನ್ನಿಸ್ ಎಂದು ಕರೆಯುವ ಈ ಸಸ್ಯ ಜಿಲ್ಲೆಯ ಕಾಡುಗಳು ಮಾತ್ರವಲ್ಲದೇ, ಕಾಫಿ ತೋಟದಲ್ಲೂ ಹೇರಳವಾಗಿ ಸಿಗುತ್ತದೆ. ಹಾಗಿದ್ದರೆ ಇಂದು ಕೊಡಗಿನ ಆಷಾಢ ಹಬ್ಬದ ಮದ್ದು ನೀರಿನ ಜೆಲ್ಲಿ ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ.
ಆಷಾಢ ಹಬ್ಬದ ಮದ್ದು ನೀರಿನ ಜೆಲ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು ಆಟಿ ಸೊಪ್ಪು, ಜೆಲೆಟಿನ್, ಸಕ್ಕರೆ.
ಆಷಾಢ ಹಬ್ಬದ ಮದ್ದು ನೀರಿನ ಜೆಲ್ಲಿ ಮಾಡುವ ವಿಧಾನ
ಒಂದು ಪಾತ್ರೆಗೆ ಜೆಲೆಟಿನ್ ಹಾಕಿ, ಬಳಿಕ ಆಟಿ ಸೊಪ್ಪು ಬೇಯಿಸಿದ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ನಂತರ ಇದಕ್ಕೆ ಸಕ್ಕರೆ ಹಾಕಿ, ಓವೆನ್ನಲ್ಲಿ ಇಡಿ. ಬಳಿಕ ಇದನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಬೌಲ್ಗೆ ಹಾಕಿ ಫ್ರೀಡ್ಜ್ನಲ್ಲಿ 3 ಗಂಟೆಗಳ ಕಾಲ ಇಟ್ಟರೆ ಆಷಾಢ ಹಬ್ಬದ ಮದ್ದು ನೀರಿನ ಜೆಲ್ಲಿ ಸವಿಯಲು ಸಿದ್ಧ.
ಇದನ್ನೂ ಓದಿ:
Chicken Gravy: ಕರಾವಳಿ ಸ್ಪೆಷಲ್ ಚಿಕನ್ ಗ್ರೇವಿ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ