ಬ್ರಿಟನ್ನಿನ ಚಾಂಪಿಯನ್ ಡೈವರ್ ನಿಟ್ಟಿಂಗ್ ಕೆಲಸದಲ್ಲಿ ಹಳೆ ಜಮಾನಾದ ಮಹಿಳೆಯರನ್ನೂ ಮೀರಿಸಬಲ್ಲ ಅಂತ ನಿಮಗೆ ಗೊತ್ತಾ?
ಒಲಂಪಿಕ್ಸ್ನಲ್ಲಿ ಗೆದ್ದಿರುವ ಚಿನ್ನದ ಪದಕವನ್ನು; ಒಂದೆಡೆ ಬ್ರಿಟನ್ನಿನ ರಾಷ್ಟ್ರಧ್ವಜ ಮತ್ತೊಂದೆಡೆ ಜಪಾನಿನ ಧ್ವಜವಿರುವ ತಾನೇ ಹೆಣದಿರುವ ಒಂದು ಚಿಕ್ಕ ಬ್ಯಾಗಿನಲ್ಲಿ ಡೇಲಿ ಇಡುತ್ತಾರೆ. ನೋಡುವುದಕ್ಕೆ ಅದು ತುಂಬಾ ಅಪ್ಯಾಯಮಾನವಾಗಿ ಕಾಣುತ್ತದೆ.
ಕುಸುರಿ ಕೆಲಸ ನಮ್ಮ ತಾಯಂದಿರು, ಅವರ ತಾಯಂದಿರು ಮಾಡುತ್ತಿದ್ದರು ಅಂತ ನಮಗೆ ಗೊತ್ತು. ಹಳೆ ಸಿನಿಮಾಗಳಲ್ಲಿ ನೀವು ನೋಡಿರಬಹುದು. ಚಿತ್ರದ ನಾಯಕಿ ಗರ್ಭಿಣಿಯಾಗಿದ್ದರೆ ಆಕೆ, ತನ್ನ ಹುಟ್ಟುಲಿರುವ ಮಗುವಿಗೋ ಅಥವಾ ಗಂಡನಿಗೋ (ಆಫ್ ಕೋರ್ಸ್ ಸಿನಿಮಾದ ಹೀರೊ!) ಸ್ವೆಟರ್ ಹೆಣೆಯುತ್ತಿರುತ್ತಾಳೆ. ಆದರೆ ಈಗ ಅದೆಲ್ಲ ಒಂದಕಾಲತ್ತಿಲ್ ಅನ್ನುವಂತಾಗಿದೆ. ಈಗ ಮನೆಗಳಲ್ಲೇ ಆಗಲಿ, ಸಿನಿಮಾಗಳಲ್ಲೇ ಆಗಲಿ, ಗರ್ಭಿಣಿ ಸ್ತ್ರೀಯರು, ಮೊಬೈಲ್ಗಳನ್ನು ಹಿಡಿದುಕೊಂಡು ಕೂತಿರುತ್ತಾರೆ. ಮತ್ತೊಂದು ಸಂಗತಿಯೆಂದರೆ ಕುಸುರಿ, ಹೆಣೆಯುವ ಅಥವಾ ನಿಟ್ಟಿಂಗ್ ಕೆಲಸ ಈಗ ಕೇವಲ ವೃತ್ತಿಪರರಿಗಷ್ಟೇ ಮೀಸಲಾಗಿದೆ. ಬಿಡಿ ವಿಷಯ ಅದಲ್ಲ; ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ತನ್ನ ದೇಶಕ್ಕೆ ಚಿನ್ನದ ಪದಕ ಗೆದ್ದುಕೊಡುವ ಪುರುಷ ಅಥ್ಲೀಟ್ ಒಬ್ಬ ಅದೇ ಸ್ಟೇಡಿಯಂನಲ್ಲಿ ಕೂತು ಗಂಭೀರವಾಗಿ ನಿಟ್ಟಿಂಗ್ ಕೆಲಸದಲ್ಲಿ ತೊಡಗಿರುವ ಸನ್ನಿವೇಶವನ್ನು ನೀವು ಊಹಿಸಿಕೊಳ್ಳಬಲ್ಲಿರಾ? ಈ ವಿಡಿಯೋನಲ್ಲಿ ನಿಮಗದು ಕಾಣಿಸುತ್ತದೆ!
ಅಂದಹಾಗೆ, ಈ ಅಥ್ಲೀಟ್ ಹೆಸರು ಟಾಮ್ ಡೇಲಿ. ಗ್ರೇಟ್ ಬ್ರಿಟನ್ನಿನ ಈಜುಗಾರ ಬೇಲಿ ತಮ್ಮ ಜೊತೆಗಾರ ಮ್ಯಾಟಿ ಲೀ ಅವರೊಂದಿಗೆ ಪುರುಷರ 10-ಮೀ ಪ್ಲಾಟ್ಫಾರ್ಮ್ ಈವೆಂಟ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಒಲಂಪಿಕ್ಸ್ನಲ್ಲಿ ಗೆದ್ದಿರುವ ಚಿನ್ನದ ಪದಕವನ್ನು; ಒಂದೆಡೆ ಬ್ರಿಟನ್ನಿನ ರಾಷ್ಟ್ರಧ್ವಜ ಮತ್ತೊಂದೆಡೆ ಜಪಾನಿನ ಧ್ವಜವಿರುವ ತಾನೇ ಹೆಣದಿರುವ ಒಂದು ಚಿಕ್ಕ ಬ್ಯಾಗಿನಲ್ಲಿ ಡೇಲಿ ಇಡುತ್ತಾರೆ. ನೋಡುವುದಕ್ಕೆ ಅದು ತುಂಬಾ ಅಪ್ಯಾಯಮಾನವಾಗಿ ಕಾಣುತ್ತದೆ.
ಟೋಕಿಯೋದ ಅಕ್ವೆಟಿಕ್ಸ್ ಸೆಂಟರ್ನಲ್ಲಿ ರವಿವಾರದಂದು ಅವರು ತನ್ನ ದೇಶದ ಇತರ ಈಜು ಸ್ಪರ್ಧಿಗಳನ್ನು ಹುರಿದುಂಬಿಸಲು ಕೂತಾಗ ನಿಟ್ಟಿಂಗ್ ಕೆಲಸದಲ್ಲೂ ಮಗ್ನರಾಗಿರುವುದನ್ನು ಸೆಂಟರ್ನಲ್ಲಿದ್ದ ಕೆಮೆರಾಗಳು ಸೆರೆ ಹಿಡಿದಿವೆ ಮತ್ತು ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ರಾಜ್ ಕುಂದ್ರಾ ಮುಖವಾಡ ಕಳಚಲಾರಂಭಿಸಿದೆ, ಬೆತ್ತಲೆ ಮಾಡಿ ವಿಡಿಯೋ ಶೂಟ್ ಮಾಡಲಾಯಿತು ಅಂತ ದೂರಿದ್ದಾರೆ ಒಬ್ಬ ಮಾಡೆಲ್!