ಪತ್ನಿಯ ವೇಷ ಧರಿಸಿ ವಿಮಾನ ಹತ್ತಿದ ಕೊವಿಡ್​ 19 ಸೋಂಕಿತ; ಮಾರ್ಗ ಮಧ್ಯೆ ಫ್ಲೈಟ್​ನ ಬಾತ್​ರೂಂನಲ್ಲಿ ಮಾಡಿದ ಅದೊಂದು ತಪ್ಪಿನಿಂದ ಸಿಕ್ಕಿಬಿದ್ದ !

ಈತ ಇಂಡೋನೇಷಿಯಾದ ಜಕಾರ್ತಾದಿಂದ ಟೆರ್ನೇಟ್‌ಗೆ ಹೊರಟಿದ್ದ. ಸದ್ಯ ಆ ದೇಶದಲ್ಲಿ ಕೊವಿಡ್​ 19 ಸೋಂಕಿನ ಪ್ರಮಾಣ ಜಾಸ್ತಿಯೇ ಇರುವುದರಿಂದ ಅಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಲಾಗಿದೆ.

ಪತ್ನಿಯ ವೇಷ ಧರಿಸಿ ವಿಮಾನ ಹತ್ತಿದ ಕೊವಿಡ್​ 19 ಸೋಂಕಿತ; ಮಾರ್ಗ ಮಧ್ಯೆ ಫ್ಲೈಟ್​ನ ಬಾತ್​ರೂಂನಲ್ಲಿ ಮಾಡಿದ ಅದೊಂದು ತಪ್ಪಿನಿಂದ ಸಿಕ್ಕಿಬಿದ್ದ !
ಇಂಡೋನೇಷಿಯಾ ವಿಮಾನ
Follow us
| Updated By: Lakshmi Hegde

Updated on:Jul 25, 2021 | 10:55 AM

ಕೊವಿಡ್​ 19 (Covid 19) ಸೋಂಕಿತ ವ್ಯಕ್ತಿಯೊಬ್ಬ ತನ್ನ ಪತ್ನಿಯಂತೆ ವೇಷ ಧರಿಸಿ, ವಿಮಾನ ಹತ್ತಿ ಇದೀಗ ಅರೆಸ್ಟ್ ಆಗಿದ್ದಾನೆ. ಹೀಗೊಂದು ಘಟನೆ ನಡೆದಿದ್ದ ಇಂಡೋನೇಷಿಯಾದಲ್ಲಿ. ಈಗ ವಿಮಾನ ಪ್ರಯಾಣ ಮಾಡುವವರಿಗೆ ಕೊವಿಡ್ 19 ನೆಗೆಟಿವ್​ ರಿಪೋರ್ಟ್​ ಕಡ್ಡಾಯ. ಆದರೆ ಈತನಿಗೆ ತಪಾಸಣೆ ಮಾಡಿಸಿದಾಗ ವರದಿ ಪಾಸಿಟಿವ್​ ಬಂದಿತ್ತು. ಹಾಗಿದ್ದಾಗ್ಯೂ ವಿಮಾನದಲ್ಲಿ ಆತ ಹೋಗಲೇ ಬೇಕಿತ್ತು. ಹೀಗಾಗಿ ಒಂದು ಕ್ರಿಮಿನಲ್​ ಉಪಾಯ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ.

ಈತ ಇಂಡೋನೇಷಿಯಾ(Indonesia) ದ ಜಕಾರ್ತಾದಿಂದ ಟೆರ್ನೇಟ್‌ಗೆ ಹೊರಟಿದ್ದ. ಸದ್ಯ ಆ ದೇಶದಲ್ಲಿ ಕೊವಿಡ್​ 19 ಸೋಂಕಿನ ಪ್ರಮಾಣ ಜಾಸ್ತಿಯೇ ಇರುವುದರಿಂದ ಅಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಲಾಗಿದೆ. ಆದರೆ ಈತ ತಪಾಸಣೆ ಮಾಡಿಸಿದಾಗ ಕೊರೊನಾ ಪಾಸಿಟಿವ್​ ಬಂದಿತ್ತು. ಹಾಗಾಗಿ ತನ್ನ ಪತ್ನಿಯ ವೇಲ್​​ನ್ನು ತಲೆಯ ಮೇಲೆ ಪೂರ್ತಿಯಾಗಿ ಹೊದ್ದು, ಆಕೆಯದ್ದೇ ಪಾಸ್​ಪೋರ್ಟ್​, ಕೊವಿಡ್​ 19 ನೆಗೆಟಿವ್​ ರಿಪೋರ್ಟ್​ ತೆಗೆದುಕೊಂಡು ಏರ್​ಪೋರ್ಟ್​​ಗೆ ಬಂದಿದ್ದ. ಅಲ್ಲಿ ಎಲ್ಲರನ್ನೂ ಯಾಮಾರಿಸಿದ್ದ ಕೂಡ. ಆದರೆ ಮಾರ್ಗ ಮಧ್ಯದಲ್ಲಿ ಆತ ತನ್ನ ಬಟ್ಟೆ ಬದಲಿಸಿದ್ದೇ ಸಿಕ್ಕಿಬೀಳಲು ಕಾರಣವಾಯಿತು ಎಂದು ಬಿಬಿಸಿ ವರದಿ ಮಾಡಿದೆ.

ಸ್ವಲ್ಪ ದೂರ ಹೋಗುತ್ತಿದ್ದಂತೆ ಆತ ವಿಮಾನದ ಬಾತ್​ ರೂಂಗೆ ತೆರಳಿ ಪುರುಷರ ಬಟ್ಟೆ ಧರಿಸಿ ಬಂದ. ಅದನ್ನು ಗಗನಸಖಿಯೊಬ್ಬರು ಗಮನಿಸಿದ್ದರು. ನಂತರ ಟೆರ್ನೇಟ್​​ನಲ್ಲಿ ಇಳಿಯುತ್ತಿದ್ದಂತೆ, ಏರ್​ಪೋರ್ಟ್ ಅಧಿಕಾರಿಗಳ ಬಳಿ ತೆರಳಿದ ಆಕೆ, ಈ ಬಗ್ಗೆ ತಿಳಿಸಿದರು. ನಂತರ ವ್ಯಕ್ತಿಯನ್ನು ಹಿಡಿದು, ವಿಚಾರಣೆ ನಡೆಸಲಾಯಿತು. ಅಲ್ಲಿಯೇ ಕೊವಿಡ್​ 19 ಟೆಸ್ಟ್​ ಕೂಡ ಮಾಡಲಾಯಿತು. ವರದಿ ಪಾಸಿಟಿವ್​ ಎಂದು ಬಂದಿತು. ಆತನನ್ನು ಸದ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚೇತರಿಕೆ ಕಂಡ ತಕ್ಷಣ ವಶಕ್ಕೆ ತೆಗೆದುಕೊಂಡು, ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಇಂಡೋನೇಷಿಯಾದಲ್ಲಿ ಒಂದು ದಿನಕ್ಕೆ ಸುಮಾರು 50,000 ಕೊರೊನಾ ಕೇಸ್​ಗಳು ದಾಖಲಾಗುತ್ತಿವೆ. ಅದರ ಮಧ್ಯೆ ಡೆಲ್ಟಾ ರೂಪಾಂತರಿ ವೈರಾಣು ಕಾಟವೂ ಹೆಚ್ಚಾಗಿದೆ.

ಇದನ್ನೂ ಓದಿ: Coronavirus cases in India: ದೇಶದಲ್ಲಿ 39,742 ಹೊಸ ಕೊವಿಡ್ ಪ್ರಕರಣ ಪತ್ತೆ, 535 ಮಂದಿ ಸಾವು

Shivamogga: ಮಳೆಗೆ ನಲುಗಿದ ಶಿವಮೊಗ್ಗ; ಸೋಮಿನಕೊಪ್ಪದಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕ ಸಾವು

A man arrested for boarding a flight disguised as his wife despite testing positive for coronavirus in Indonesia

Published On - 10:53 am, Sun, 25 July 21

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ