Coronavirus cases in India: ದೇಶದಲ್ಲಿ 39,742 ಹೊಸ ಕೊವಿಡ್ ಪ್ರಕರಣ ಪತ್ತೆ, 535 ಮಂದಿ ಸಾವು

Covid 19: ಕಳೆದ 24 ಗಂಟೆಗಳಲ್ಲಿ 39,972 ರೋಗಿಗಳು ಚೇತರಿಸಿಕೊಂಡಿದ್ದು, 535 ಮಂದಿ ಸಾವನ್ನಪ್ಪಿದ್ದಾರೆ. ಸಾವು ಮತ್ತು ಚೇತರಿಕೆ ಒಟ್ಟು ಸಂಖ್ಯೆ ಕ್ರಮವಾಗಿ 4,20,551 ಮತ್ತು 3,05,43,138 ಕ್ಕೆ ತಲುಪಿದೆ.

Coronavirus cases in India: ದೇಶದಲ್ಲಿ 39,742 ಹೊಸ ಕೊವಿಡ್ ಪ್ರಕರಣ ಪತ್ತೆ, 535 ಮಂದಿ ಸಾವು
ದೆಹಲಿಯಲ್ಲಿ ಆಕ್ಸಿಜನ್ ತುಂಬಿಸಲು ಸಿಲಿಂಡರ್ ಹಿಡಿದು ಕಾದು ನಿಂತಿರುವ ಮಂದಿ
Follow us
| Updated By: ರಶ್ಮಿ ಕಲ್ಲಕಟ್ಟ

Updated on:Jul 25, 2021 | 10:46 AM

ದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 39,742 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದ್ದು ಕೊರೊನಾವೈರಸ್ ಕಾಯಿಲೆಯ ಒಟ್ಟು ಪ್ರಕರಣಗಳ ಸಂಖ್ಯೆ 31,371,901 ಕ್ಕೆ ಏರಿದೆ. ಅದೇ ಅವಧಿಯಲ್ಲಿ 39,972 ರೋಗಿಗಳು ಚೇತರಿಸಿಕೊಂಡಿದ್ದು, 535 ಮಂದಿ ಸಾವನ್ನಪ್ಪಿದ್ದಾರೆ. ಸಾವು ಮತ್ತು ಚೇತರಿಕೆ ಒಟ್ಟು ಸಂಖ್ಯೆ ಕ್ರಮವಾಗಿ 4,20,551 ಮತ್ತು 3,05,43,138 ಕ್ಕೆ ತಲುಪಿದೆ. ಕೊವಿಡ್ -19 ರ ಸಕ್ರಿಯ ಪ್ರಕರಣಗಳು 4,08,212 ರಷ್ಟಿದ್ದು, ಶನಿವಾರ ವರದಿಯಾದ 4,08,977 ಪ್ರಕರಣಗಳಿಂದ ಇಳಿಕೆ ಆಗಿದೆ. 39,097 ಜನರು ಕೊವಿಡ್ -19 ಪಾಸಿಟಿವ್ ಆಗಿದ್ದು ಭಾನುವಾರದ ಪ್ರಕರಣಗಳ ಸಂಖ್ಯೆ ಶನಿವಾರದ ಪ್ರಮಾಣಕ್ಕಿಂತ 645 ಹೆಚ್ಚಾಗಿದೆ.

ಇಲ್ಲಿಯವರೆಗೆ ದೇಶವು 430 ದಶಲಕ್ಷಕ್ಕೂ ಹೆಚ್ಚಿನ ಲಸಿಕೆ ಡೋಸ್ ವಿತರಣೆ ಮಾಡಿದ. ಇದರಲ್ಲಿ ಸುಮಾರು 4.6 ದಶಲಕ್ಷ ಡೋಸ್ ಕಳೆದ 24 ಗಂಟೆಗಳಲ್ಲಿ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೊವಿಡ್ -19 ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ, ದೆಹಲಿ ಮತ್ತು ಹರಿಯಾಣಗಳು ತಮ್ಮ ನಿರಂತರ ನಿರ್ಬಂಧಗಳಲ್ಲಿ ಮತ್ತಷ್ಟು ಸಡಿಲಿಕೆ ನೀಡಿದೆ.

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಶನಿವಾರ ರಾಜಧಾನಿಯಲ್ಲಿ ಈಜುಕೊಳಗಳು, ಮಲ್ಟಿಪ್ಲೆಕ್ಸ್‌ಗಳು, ಸಭಾಂಗಣಗಳು ಮತ್ತು ಮನರಂಜನಾ ಉದ್ಯಾನವನಗಳನ್ನು ಮತ್ತೆ ತೆರೆಯಲು ಅವಕಾಶ ನೀಡುವುದಾಗಿ ಪ್ರಕಟಿಸಿದೆ. ಆದೇಶದ ಪ್ರಕಾರ, ಸಿನೆಮಾ ಹಾಲ್‌ಗಳು, ಮಲ್ಟಿಪ್ಲೆಕ್ಸ್‌ಗಳು, ಸಭಾಂಗಣಗಳು ಮತ್ತು ಅಸೆಂಬ್ಲಿ ಹಾಲ್‌ಗಳು ಕೇವಲ 50 ಶೇಕಡಾ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ದೆಹಲಿ ಮೆಟ್ರೋ ಮತ್ತು ಸಾರ್ವಜನಿಕ ಬಸ್‌ಗಳಿಗೆ ಶೇಕಡಾ 100 ರಷ್ಟು ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು.

ಹರ್ಯಾಣ ಸರ್ಕಾರವು ಆಗಸ್ಟ್ 2 ರವರೆಗೆ ನಡೆಯುತ್ತಿರುವ ನಿರ್ಬಂಧಗಳನ್ನು ಮತ್ತೊಂದು ವಾರ ವಿಸ್ತರಿಸಿದ್ದು ಸೋಮವಾರದಿಂದ ಅರ್ಧದಷ್ಟು ಆಸನ ಸಾಮರ್ಥ್ಯದೊಂದಿಗೆ ಸ್ವತಂತ್ರ ರೆಸ್ಟೋರೆಂಟ್‌ಗಳು ಬೆಳಿಗ್ಗೆ 8 ರಿಂದ ರಾತ್ರಿ 11 ರವರೆಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಶಾಪಿಂಗ್ ಮಾಲ್‌ಗಳು ಮತ್ತು ಹೋಟೆಲ್‌ಗಳಲ್ಲಿನ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳು ಬೆಳಿಗ್ಗೆ 10 ರಿಂದ ರಾತ್ರಿ 11 ರವರೆಗೆ ತೆರೆದಿರುತ್ತವೆ ಎಂದು ಶನಿವಾರ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ರಾಜ್ಯದ ಎಲ್ಲಾ ಅಂಗಡಿಗಳು ಬೆಳಿಗ್ಗೆ 9 ರಿಂದ ರಾತ್ರಿ 8 ರವರೆಗೆ ಮುಂದುವರಿಯಲಿವೆ.

ಏತನ್ಮಧ್ಯೆ, ಹೆಚ್ಚಿನ ಸಂಖ್ಯೆಯ ಕೊವಿಡ್ -19 ಪ್ರಕರಣಗಳು ಹೊಂದಿರುವ ಮಹಾರಾಷ್ಟ್ರವು ಸಕಾರಾತ್ಮಕ ದರವು ಶೇಕಡಾ 0.1 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ನಿರ್ಬಂಧ ಸಡಿಲಿಕೆ ನೀಡುವ ಯೋಜನೆಯನ್ನು ರೂಪಿಸುತ್ತಿದೆ. ಆದಾಗ್ಯೂ, ದೈನಂದಿನ ಪ್ರಕರಣಗಳಲ್ಲಿ ಗಮನಾರ್ಹ ಕುಸಿತ ಕಂಡುಬರದ ಹೊರತು ರಾಜ್ಯ ಸರ್ಕಾರವು ಕೊವಿಡ್ -19 ವಿರುದ್ಧ ತನ್ನ ನಿರ್ಬಂಧಗಳನ್ನು ಸಡಿಲಿಸಲು ಬಿಡಬಾರದು ಎಂದು ತಜ್ಞರು ಸೂಚಿಸಿದ್ದಾರೆ.

ಇದನ್ನೂ ಓದಿ: Maharashtra Rains: ಮಹಾರಾಷ್ಟ್ರದಲ್ಲಿ ಮಳೆ, ಪ್ರವಾಹ..ಭೂಕುಸಿತ; ಸಹಾಯಕ್ಕೆ ಧಾವಿಸಿದ ಭಾರತೀಯ ವಾಯುಸೇನೆ

ಇದನ್ನೂ ಓದಿ: ಉದ್ಘಾಟನೆಗೊಂಡ ಒಂದೇ ದಿನಕ್ಕೆ ಕಿತ್ತು ಹೋಯ್ತು 30 ಕೋಟಿ ರೂ. ವೆಚ್ಚದ ರಸ್ತೆ; ಕಮರ್ಷಿಯಲ್​ ಸ್ಟ್ರೀಟ್​ನ ಹೊಸ ರಸ್ತೆಗೆ ದುರಸ್ತಿ ಭಾಗ್ಯ

(India registered 39,742 new Covid-19 cases 535 more deaths in the last 24 hours )

Published On - 10:45 am, Sun, 25 July 21

ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್