ಉದ್ಘಾಟನೆಗೊಂಡ ಒಂದೇ ದಿನಕ್ಕೆ ಕಿತ್ತು ಹೋಯ್ತು 30 ಕೋಟಿ ರೂ. ವೆಚ್ಚದ ರಸ್ತೆ; ಕಮರ್ಷಿಯಲ್​ ಸ್ಟ್ರೀಟ್​ನ ಹೊಸ ರಸ್ತೆಗೆ ದುರಸ್ತಿ ಭಾಗ್ಯ

ಈ ಕಾಮಗಾರಿಗೆ ಬರೋಬ್ಬರಿ 30 ಕೋಟಿ ರೂಪಾಯಿ ವೆಚ್ಚ ತಗುಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೇ ಕರೆಯಿಸಿ ಉದ್ಘಾಟನೆಯನ್ನೂ ಮಾಡಲಾಗಿತ್ತು. ಆದರೆ, ಬಹುಕೋಟಿ ವೆಚ್ಚದ ಕಾಮಗಾರಿಯಲ್ಲಾದ ಲೋಪ ದೋಷಗಳನ್ನು ಬೆಂಗಳೂರಿನ ಮಳೆ ಬಯಲು ಮಾಡಿದೆ.

ಉದ್ಘಾಟನೆಗೊಂಡ ಒಂದೇ ದಿನಕ್ಕೆ ಕಿತ್ತು ಹೋಯ್ತು 30 ಕೋಟಿ ರೂ. ವೆಚ್ಚದ ರಸ್ತೆ; ಕಮರ್ಷಿಯಲ್​ ಸ್ಟ್ರೀಟ್​ನ ಹೊಸ ರಸ್ತೆಗೆ ದುರಸ್ತಿ ಭಾಗ್ಯ
ಮಳೆಗೆ ಸಿಲುಕಿ ಹಾಳಾದ ಹೊಸ ರಸ್ತೆ

ಬೆಂಗಳೂರು: ಕರ್ನಾಟಕದಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲೂ ಪ್ರತಿನಿತ್ಯ ಸುರಿಯುತ್ತಿರುವ ಮಳೆಯಿಂದ (Bengaluru Rain) ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದರ ನಡುವೆ ಕಳಪೆ ಕಾಮಗಾರಿಯ ಕಾರಣಕ್ಕೆ ಹೊಸದಾಗಿ ಮಾಡಿದ ರಸ್ತೆಗಳು ಕೂಡಾ ಮಳೆಗೆ ಕೊಚ್ಚಿ ಹೋಗುತ್ತಿದ್ದು, ಓಡಾಟಕ್ಕೆ ಮತ್ತಷ್ಟು ಅಡೆತಡೆ ಉಂಟಾಗಿದೆ. ಬೆಂಗಳೂರಿನ ಕಮರ್ಷಿಯಲ್​ ಸ್ಟ್ರೀಟ್​ನಲ್ಲಿ (Commercial Street) ಮೊನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ (CM B.S Yediyurappa) ಖುದ್ದು ಹಾಜರಾಗಿ ಉದ್ಘಾಟಿಸಿದ್ದ ರಸ್ತೆ ಒಂದೇ ದಿನಕ್ಕೆ ಮಳೆಯಿಂದ ಹಾಳಾಗಿ ಹೋಗಿದೆ. ಭಾರೀ ಖರ್ಚು ಮಾಡಿ ನಿರ್ಮಿಸಿದ್ದ ರಸ್ತೆ ಒಂದು ಮಳೆಗೆ ಕಿತ್ತು ಹೋಗಿರುವುದು (Damage) ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.

ಕಮರ್ಷಿಯಲ್​ ಸ್ಟ್ರೀಟ್​ನಲ್ಲಿ ಓಡಾಟಕ್ಕೆ ಅನುವಾಗಲೆಂದು ಹೊಸದಾಗಿ ರಸ್ತೆ ನಿರ್ಮಿಸಿ ಅದಕ್ಕೆ ಇಂಟರ್​ಲಾಕ್​ ನಮೂನೆಯ ಕಲ್ಲುಗಳನ್ನು ಜೋಡಿಸಲಾಗಿತ್ತು. ಈ ಕಾಮಗಾರಿಗೆ ಬರೋಬ್ಬರಿ 30 ಕೋಟಿ ರೂಪಾಯಿ ವೆಚ್ಚ ತಗುಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೇ ಕರೆಯಿಸಿ ಉದ್ಘಾಟನೆಯನ್ನೂ ಮಾಡಲಾಗಿತ್ತು. ಆದರೆ, ಬಹುಕೋಟಿ ವೆಚ್ಚದ ಕಾಮಗಾರಿಯಲ್ಲಾದ ಲೋಪ ದೋಷಗಳನ್ನು ಬೆಂಗಳೂರಿನ ಮಳೆ ಬಯಲು ಮಾಡಿದೆ. ಒಂದೇ ಒಂದು ಮಳೆಗೆ ರಸ್ತೆಗೆ ಹಾಕಲಾಗಿದ್ದ ಕಲ್ಲುಗಳೆಲ್ಲಾ ಕಿತ್ತೆದ್ದು ಬಂದಿದ್ದು, ಕಳಪೆ ಕಾಮಗಾರಿ ಮಾಡಿರುವುದು ಬಹಿರಂಗವಾಗಿದೆ.

BENGALURU

ರಸ್ತೆಗೆ ಹಾಕಲಾದ ಕಲ್ಲುಗಳು ಕಿತ್ತೆದ್ದು ಹೋಗಿವೆ

ಭಾರೀ ಖರ್ಚು ಮಾಡಿ ಮೇಲ್ನೋಟಕ್ಕೆ ಅತ್ಯಾಕರ್ಷಕವಾಗಿ ಕಾಣುವಂತೆ ರಸ್ತೆ ನಿರ್ಮಿಸಿ ಕಳಪೆ ಕೆಲಸ ಮಾಡುವ ಬದಲು, ಅಚ್ಚುಕಟ್ಟಾಗಿ ಕೆಲಸ ಮಾಡಿ ಜನರ ಓಡಾಟಕ್ಕೆ ತೊಂದರೆಯಾಗದಂತೆ ಸುಭದ್ರ ರಸ್ತೆಗಳನ್ನು ನಿರ್ಮಾಣ ಮಾಡುವುದು ಉತ್ತಮ. ಕೋಟಿ ಕೋಟಿ ಖರ್ಚು ಮಾಡಿ, ಒಂದೇ ಮಳೆಗೆ ಅದರ ಅಸಲಿ ಬಣ್ಣ ಬಯಲಾಗುವುದಾರೆ ಇಂತಹ ಕಾಮಗಾರಿಗಳು ಏಕೆ ಬೇಕು ಎಂದು ಸಾರ್ವಜನಿಕರು ಈ ರಸ್ತೆಯ ಅವ್ಯವಸ್ಥೆಯನ್ನು ನೋಡಿ ಪ್ರಶ್ನೆ ಎತ್ತಿದ್ದಾರೆ.

ನೆರೆ ಹಾನಿ ವೀಕ್ಷಣೆಗೆ ತೆರಳಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಬೆಳಗಾವಿ: ಭಾರೀ ಮಳೆಯಿಂದ ಹಾನಿಗೊಳಗಾಗಿರುವ ಬೆಳಗಾವಿ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡುತ್ತಿದ್ದಾರೆ. ಬೆಳಗ್ಗೆ 9ಕ್ಕೆ ಬೆಂಗಳೂರಿನಿಂದ ಬೆಳಗಾವಿಯತ್ತ ಪ್ರಯಾಣ ಬೆಳೆಸುತ್ತಿರುವ ಅವರು, ಬೆಳಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೆ ನೆರೆ ಹಾನಿ ವೀಕ್ಷಣೆ ಮಾಡಲಿದ್ದಾರೆ. ಜತೆಗೆ, ಮಳೆ, ನೆರೆಯಿಂದ ಹಾನಿಯಾದ ಪ್ರದೇಶಗಳಿಗೆ ತೆರಳಲಿದ್ದು, ಸಾಂತ್ವನ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ 2.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವಗೋವಿಂದ ಕಾರಜೋಳ, ಸಂಸದರು, ಶಾಸಕರು, ಜಿಲ್ಲಾಡಳಿತದ ಜತೆ ಬೆಳಗಾವಿಯ ಸರ್ಕ್ಯೂಟ್​ಹೌಸ್​ನಲ್ಲಿ ಸಭೆ ನಡೆಸಿ, ಸಂಜೆ 4ಕ್ಕೆ ಬೆಳಗಾವಿಯಿಂದ ಬೆಂಗಳೂರಿಗೆ ವಾಪಾಸ್ಸಾಗಲಿದ್ದಾರೆ.

ಇದನ್ನೂ ಓದಿ:
20 ವರ್ಷ ಆದ್ರೂ ಗುಂಡಿ ಬೀಳದಂತೆ ರಸ್ತೆ ಅಭಿವೃದ್ಧಿ ಆಗಿದೆ; ಬೆಂಗಳೂರು ಸಿಟಿ ರೌಂಡ್ಸ್ ವೇಳೆ ಬಿಎಸ್ ಯಡಿಯೂರಪ್ಪ ಹೇಳಿಕೆ

ಮಲೆನಾಡಿನಲ್ಲಿ ಭಾರೀ ಮಳೆ: ಸೋರುತ್ತಿದೆ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆ, ಮುಳುಗುತ್ತಿವೆ ಜಮೀನು, ರಸ್ತೆ; ಎಲ್ಲೆಲ್ಲೂ ಅವ್ಯವಸ್ಥೆ

(Poor construction leads to damage of new road in Commercial street Bengaluru due to Rain)

Click on your DTH Provider to Add TV9 Kannada