ಭಾರಿ ಮಳೆಗೆ ಬೆಳಗಾವಿ, ಉತ್ತರ ಕನ್ನಡ, ಮಲೆನಾಡಲ್ಲಿ ಹೆಚ್ಚು ಅನಾಹುತ; ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ

ಕರಾವಳಿ ಭಾಗಗಳಲ್ಲಿ ಇನ್ನು ಮೂರು ದಿನ ಮಳೆಯಾಗುತ್ತದೆ ಎಂದು ತಿಳಿಸಿದ ಆರ್.ಅಶೋಕ್, 31,360 ಜನರನ್ನ ಸ್ಥಳಾಂತರ ಮಾಡಲಾಗಿದೆ. 153 ಜನರನ್ನ ರಕ್ಷಣೆ ಮಾಡಲಾಗಿದೆ. 9 ಜನರು ಸಾವನ್ನಪ್ಪಿದ್ದಾರೆ.

ಭಾರಿ ಮಳೆಗೆ ಬೆಳಗಾವಿ, ಉತ್ತರ ಕನ್ನಡ, ಮಲೆನಾಡಲ್ಲಿ ಹೆಚ್ಚು ಅನಾಹುತ; ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ
ಆರ್ ಅಶೋಕ್ (ಸಂಗ್ರಹ ಚಿತ್ರ)

ಬೆಂಗಳೂರು: ಮಳೆಯ ಆರ್ಭಟಕ್ಕೆ ಬೆಳಗಾವಿ, ಉತ್ತರ ಕನ್ನಡ, ಮಲೆನಾಡಲ್ಲಿ ಹೆಚ್ಚು ಅನಾಹುತವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ (R Ashok) ತಿಳಿಸಿದ್ದಾರೆ. ಪರಿಸ್ಥಿತಿ ನಿಭಾಯಿಸಲು 7 ಎನ್​ಡಿಆರ್​ರಫ್​ (NDRF) ಮತ್ತು 15 ಎಸ್​ಡಿಇಆರ್​ಎಫ್​ (SDRF) ತಂಡವನ್ನು ನಿಯೋಜನೆ ಮಾಡಲಾಗಿದೆ. 16 ಕಡೆ ಭೂಕುಸಿತವಾಗಿದ್ದು, ರಾಷ್ಟ್ರೀಯ ಹೆದ್ದಾರಿ 73 ಕುಸಿದಿದೆ. ಒಂದು ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ತಿ ಮಾಡುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ಕರಾವಳಿ ಭಾಗಗಳಲ್ಲಿ ಇನ್ನು ಮೂರು ದಿನ ಮಳೆಯಾಗುತ್ತದೆ ಎಂದು ತಿಳಿಸಿದ ಆರ್.ಅಶೋಕ್, 31,360 ಜನರನ್ನ ಸ್ಥಳಾಂತರ ಮಾಡಲಾಗಿದೆ. 153 ಜನರನ್ನ ರಕ್ಷಣೆ ಮಾಡಲಾಗಿದೆ. 9 ಜನರು ಸಾವನ್ನಪ್ಪಿದ್ದಾರೆ. 24,417 ಜನರಿಗೆ ಊಟ ವಸತಿ ಸೇರಿದಂತೆ ಆಶ್ರಯ ಕಲ್ಪಿಸಲಾಗಿದೆ. 3 ಜನ ನಾಪತ್ತೆಯಾಗಿದ್ದಾರೆ. 134 ಮನೆಗಳು ಸಂಪೂರ್ಣ ಹಾನಿಯಾಗಿವೆ. ಪ್ರವಾಹಕ್ಕೆ ತುತ್ತಾಗಿ 78 ಜಾನುವಾರು ಮೃತಪಟ್ಟಿವೆ. 45 ತಾಲೂಕುಗಳ 383 ಗ್ರಾಮಗಳ ಜನರಿಗೆ ಸಂಕಷ್ಟ ಎದುರಾಗಿದೆ ಎಂದು ತಿಳಿಸಿದರು.

ಕಾಫಿ ತೋಟ, ಅಡಿಕೆ ತೋಟ ಸೇರಿದಂತೆ ಸಾಕಷ್ಟು ಹಾನಿಯಾಗಿದೆ. ವರದಿ ಬಂದ ತಕ್ಷಣ ಪರಿಹಾರ ನೀಡಲಾಗುತ್ತದೆ. 555 ಕಿ.ಮೀ ರಸ್ತೆ ಹಾಳಾಗಿದೆ. 3,501 ವಿದ್ಯುತ್ ಕಂಬಗಳು ಹಾಳಾಗಿವೆ. ಎಲೆಕ್ಟ್ರಿಸಿಟಿ ವ್ಯವಸ್ಥೆ ಸರಿ ಮಾಡೋದಕ್ಕೆ ತಿಳಿಸಲಾಗಿದೆ. ಕೇಂದ್ರಕ್ಕೆ ನಿಖರವಾದ ಮಾಹಿತಿ ನೀಡಬೇಕಾಗಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ

ಮಳೆ ಅಬ್ಬರ ತಗ್ಗಿದರೂ ಬೆಳಗಾವಿಯಲ್ಲಿ ನಿಲ್ಲದ ಭೀತಿ; ಬೆಳೆ ಹಾನಿಗೆ ಪರಿಹಾರ ನೀಡುವಂತೆ ರೈತರ ಆಗ್ರಹ

ಕಪಿಲಾ ನದಿ ಪಾತ್ರದಲ್ಲಿ ಮುಂದುವರಿದ ಪ್ರವಾಹ ಭೀತಿ; ಎಚ್ಚರಿಕೆಯಿಂದಿರಲು ಸೂಚನೆ

(R Ashok informs about heavy rains in Belgaum Uttara Kannada and Malanad)

Click on your DTH Provider to Add TV9 Kannada