AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆ ಅಬ್ಬರ ತಗ್ಗಿದರೂ ಬೆಳಗಾವಿಯಲ್ಲಿ ನಿಲ್ಲದ ಭೀತಿ; ಬೆಳೆ ಹಾನಿಗೆ ಪರಿಹಾರ ನೀಡುವಂತೆ ರೈತರ ಆಗ್ರಹ

ಕಳೆದ ಮೂರು ವರ್ಷದಿಂದಲೂ ಬೆಳೆ ಕಳೆದುಕೊಳ್ಳುತ್ತಿದ್ದೇವೆ. ಹೀಗಾಗಿ ಇಂದು ಬೆಳಗಾವಿಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಭೇಟಿ ಹಿನ್ನಲೆ, ಸೂಕ್ತ ಪರಿಹಾರ ನೀಡಿ ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.

ಮಳೆ ಅಬ್ಬರ ತಗ್ಗಿದರೂ ಬೆಳಗಾವಿಯಲ್ಲಿ ನಿಲ್ಲದ ಭೀತಿ; ಬೆಳೆ ಹಾನಿಗೆ ಪರಿಹಾರ ನೀಡುವಂತೆ ರೈತರ ಆಗ್ರಹ
ಡ್ರೋನ್​ ಕ್ಯಾಮರಾದಲ್ಲಿ ಪ್ರವಾಹದ ದೃಶ್ಯ ಸೇರೆ
TV9 Web
| Edited By: |

Updated on:Jul 25, 2021 | 10:11 AM

Share

ಬೆಳಗಾವಿ: ಭಾರೀ ಮಳೆಯಿಂದಾಗಿ (Karnataka Rains) ಕರ್ನಾಟಕದ ಹಲವೆಡೆ ಪ್ರವಾಹ ಭೀತಿ ಎದುರಾಗಿದೆ. ನದಿ, ಕೆರೆ, ಹಳ್ಳ, ಕಾಲುವೆಗಳು ಉಕ್ಕಿ ಹರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೆ ಮಳೆಯಿಂದಾಗಿ ನೂರಾರು ಎಕರೆ ಬೆಳೆ ಹಾನಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಇದೇ ತರಹದ ಪರಿಸ್ಥಿತಿ ನಿರ್ಮಾಣವಾಗಿದೆ. ಪಶ್ಚಿಮ ಘಟ್ಟದಲ್ಲಿ ಮಳೆ ಅಬ್ಬರ ಕೊಂಚ ತಗ್ಗಿದೆ. ಆದರೆ ಮಾರ್ಕಂಡೇಯ ನದಿಯಲ್ಲಿ ನೀರಿನ ಹರಿವು ಇಳಿಕೆಯಾಗದೆ, ನದಿಯ ನೀರು ನುಗ್ಗಿ ನೂರಾರು ಎಕರೆಯಲ್ಲಿದ್ದ ಬೆಳೆ ಹಾನಿಯಾಗಿದೆ.

ಬೆಳಗಾವಿಯ ಕಂಗ್ರಾಳಿ, ಕಡೋಲಿ ಭಾಗದಲ್ಲಿ ಹೆಚ್ಚಿನ ಹಾನಿಯಾಗಿದ್ದು, ಸಾವಿರಕ್ಕೂ ಅಧಿಕ‌ ಎಕರೆ ಭತ್ತ ಹಾಗೂ ಕಬ್ಬು ನಾಶವಾಗಿದೆ. ಕಳೆದ ಮೂರು ವರ್ಷದಿಂದಲೂ ಬೆಳೆ ಕಳೆದುಕೊಳ್ಳುತ್ತಿದ್ದೇವೆ. ಹೀಗಾಗಿ ಇಂದು ಬೆಳಗಾವಿಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಭೇಟಿ ಹಿನ್ನಲೆ, ಸೂಕ್ತ ಪರಿಹಾರ ನೀಡಿ ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ವೇದಗಂಗಾ, ಹಿರಣ್ಯಕೇಶಿ ನದಿ ಪಾತ್ರದಲ್ಲಿ ಪ್ರವಾಹ ಸಂಕಷ್ಟ ಎದುರಾಗಿದ್ದು, ಗ್ರಾಮಗಳು ಮುಳುಗಡೆಯಾಗಿವೆ. ಜಮೀನುಗಳ ಪರಿಸ್ಥಿತಿ ಹೇಗಿದೆ? ಅಲ್ಲಿನ ಜನರ ಪರದಾಟ ಏನು? ಎಂಬುದರ ಬಗ್ಗೆ ಡ್ರೋನ್​ ಕ್ಯಾಮರಾದಲ್ಲಿ ದೃಶ್ಯಗಳು ಸೇರೆಯಾಗಿವೆ.

ಅಡಿಬಟ್ಟಿ ಗ್ರಾಮದಲ್ಲಿ ಸಿಲುಕಿದ್ದ 7 ಜನರ ರಕ್ಷಣೆ ಕಳೆದ ಒಂದು ವಾರದಿಂದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆ ಹಿನ್ನೆಲೆ‌, ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಅಡಿಬಟ್ಟಿ ಗ್ರಾಮಕ್ಕೆ ಘಟಪ್ರಭಾ ನದಿ ನೀರು ನುಗ್ಗಿತ್ತು. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಸಂಪೂರ್ಣ ಮುಳುಗಡೆಯಾಗಿತ್ತು. ಹೀಗಾಗಿ ನಡುಗಡ್ಡೆಯಾಗಿ ಪರಿಣಮಿಸಿದ ಅಡಿಬಟ್ಟಿ ಗ್ರಾಮದಲ್ಲಿ ನಿನ್ನೆಯಿಂದ ರಕ್ಷಣೆಗಾಗಿ ಮೊರೆ ಇಡುತ್ತಿದ್ದರು. ಸದ್ಯ ಮನೆಯಲ್ಲಿ ಸಿಲುಕಿದ್ದ ಓರ್ವ ಮಹಿಳೆ ಸೇರಿ 7 ಜನರನ್ನು ಇಂದು ರಕ್ಷಣೆ ಮಾಡಲಾಗಿದೆ.

water in road

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಸಂಪೂರ್ಣ ಮುಳುಗಡೆ

ಇದನ್ನೂ ಓದಿ: BS Yediyurappa: ಬೆಳಗಾವಿ ಜಿಲ್ಲೆಯಲ್ಲಿಂದು ನೆರೆ ಹಾನಿ ವೀಕ್ಷಿಸಲಿರುವ ಸಿಎಂ, ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ

ಮಳೆಗೆ ತತ್ತರಿಸಿದ ಬಾಗಲಕೋಟೆ; 38 ಕುಟುಂಬಗಳ ಸ್ಥಳಾಂತರ, ಮುಳುಗುವ ಭೀತಿಯಲ್ಲಿ ಸಂಗಮೇಶ್ವರ ದೇಗುಲ

Published On - 8:59 am, Sun, 25 July 21