AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BS Yediyurappa: ಬೆಳಗಾವಿ ಜಿಲ್ಲೆಯಲ್ಲಿಂದು ನೆರೆ ಹಾನಿ ವೀಕ್ಷಿಸಲಿರುವ ಸಿಎಂ, ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ

ರಾಜ್ಯ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಬಡಿದಾಟ ಕ್ಲೈಮ್ಯಾಕ್ಸ್ ಸ್ಟೇಜ್ಗೆ ತಲುಪಿದೆ. ಬಿಎಸ್ವೈ ರಾಜೀನಾಮೆ ಕೊಡ್ತಾರಾ ಅಥವಾ ಅವರೇ ಮುಂದುವರಿಯುತ್ತಾರಾ ಅನ್ನೋ ಚರ್ಚೆಯೂ ಜೋರಾಗಿ ನಡೀತಿದೆ. ಇಡೀ ರಾಜ್ಯ ಕಮಲ ಪಾಳಯದ ಕಡೆ ನೋಡ್ತಿದೆ. ಇಷ್ಟೆಲ್ಲಾ ಟೆನ್ಷನ್ ಇದ್ರೂ ಸಿಎಂ ಬಿ.ಎಸ್.ಯಡಿಯೂರಪ್ಪ ಇವತ್ತು ಬೆಳಗಾವಿಗೆ ವಿಸಿಟ್ ಕೊಡ್ತಿದ್ದಾರೆ. ಜನರ ಕಷ್ಟ ಕೇಳಿ, ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ.

BS Yediyurappa: ಬೆಳಗಾವಿ ಜಿಲ್ಲೆಯಲ್ಲಿಂದು ನೆರೆ ಹಾನಿ ವೀಕ್ಷಿಸಲಿರುವ ಸಿಎಂ, ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
TV9 Web
| Updated By: ಆಯೇಷಾ ಬಾನು|

Updated on:Jul 25, 2021 | 8:12 AM

Share

ಬೆಳಗಾವಿ: ಎರಡೇ ಎರಡು ದಿನ ವರುಣ ಅಬ್ಬರಿಸಿದ್ದಕ್ಕೆ ಬೆಳಗಾವಿಯ ಚಿತ್ರಣವೇ ಬದಲಾಗಿದೆ ಹೋಗಿದೆ. ಜಲಾಸುರನ ದಾಳಿಗೆ ಬೆಳಗಾವಿ ನಲುಗುತ್ತಿದೆ. ಯಾವ ರೇಂಜ್ಗೆ ಅಂದ್ರೆ, ಜಲ ಪ್ರವಾಹದಿಂದ ಗ್ರಾಮಕ್ಕೆ ಗ್ರಾಮವೇ ಮುಳುಗಡೆ ಆಗಿದೆ. ಸಾವಿರಾರು ಜನ ಇರೋ ಮನೆ ಬಿಟ್ಟು ಕಾಳಜಿ ಕೇಂದ್ರ ಸೇರಿದ್ದಾರೆ. ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೀಗೆ ರಣ ಮಳೆಗೆ ಅಕ್ಷರಶಃ ತತ್ತರಿಸಿ ಹೋಗಿರೋ ಬೆಳಗಾವಿ ಜಿಲ್ಲೆಗೆ ಇವತ್ತು ಸ್ವತಃ ಸಿಎಂ ಯಡಿಯೂರಪ್ಪ ಬರ್ತಿದ್ದಾರೆ. ನಾಯಕತ್ವ ಬದಲಾವಣೆ ಬಡಿದಾಟ ಕ್ಲೈಮ್ಯಾಕ್ಸ್ ಹಂತ ತಲುಪಿರುವಾಗ್ಲೇ ಸಿಎಂ ಬೆಳಗಾವಿಯಲ್ಲಿ ಪ್ರವಾಹ ಸ್ಥಳಕ್ಕೆ ವಿಸಿಟ್ ಕೊಡ್ತಿರೋದು ಮತ್ತಷ್ಟು ಕುತೂಹಲ ಕೆರಳಿಸಿದೆ.

ಬೆಳಗಾವಿ ಜಿಲ್ಲೆಯಲ್ಲಿ 113ಹಳ್ಳಿಗಳು ಈಗಾಗಲೇ ಜಲಾವೃತಗೊಂಡಿವೆ. 13 ಸಾವಿರ ಜನ ಬೀದಿಗೆ ಬಂದಿದ್ದಾರೆ. 200ಕ್ಕೂ ಅಧಿಕ ಮನೆಗಳು ನೆಲಸಮ ಆಗಿವೆ. ಜಲ ಪ್ರವಾಹದ ಹೊಡೆತಕ್ಕೆ ಇಬ್ಬರು ಜೀವ ಬಿಟ್ಟಿದ್ದಾರೆ. ಹೀಗಾಗಿ ಇವತ್ತು ಸಿಎಂ ನೆರೆ ಸಂತ್ರಸ್ತರನ್ನ ಭೇಟಿ ಮಾಡಿ, ಅವರ ನೋವು ಕೇಳಲಿದ್ದಾರೆ. ಹಾಗಾದ್ರೆ, ಬಿಎಸ್ವೈ ಯಾವ ಯಾವ ಸ್ಥಳಗಳಿಗೆ ಭೇಟಿ ಕೊಡ್ತಾರೆ.. ಎಷ್ಟು ಗಂಟೆಗೆ ಬೆಳಗಾವಿಗೆ ವಿಸಿಟ್ ಕೊಡ್ತಾರೆ ಅನ್ನೋದರ ಡಿಟೈಲ್ಸ್ ಇಲ್ಲಿದೆ.

ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಪ್ರಯಾಣ ಮಾಡಲಿರೋ ಬಿಎಸ್ವೈ ಇವತ್ತು ಬೆಳಗ್ಗೆ ಹತ್ತು ಗಂಟೆಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ತಲುಪಲಿದ್ದಾರೆ. ಬಳಿಕ ವಿಮಾನ‌ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ 11ಗಂಟೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಮುಳುಗಡೆಯಾದ ಮಠ ಗಲ್ಲಿ, ಕುಂಬಾರ ಓಣಿಗಳಲ್ಲಿ ಮುಳುಗಡೆ ಆದ ಪ್ರದೇಶಗಳನ್ನ ವೀಕ್ಷಣೆ ಮಾಡಲಿದ್ದಾರೆ. ಇದಾದ ನಂತ್ರ ಸಂಕೇಶ್ವರ ಪಟ್ಟಣದಲ್ಲೇ ತೆರೆಯಲಾಗಿರುವ ಶಂಕರಲಿಂಗ ಕಾರ್ಯಾಲಯದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ನೆರೆ ಸಂತ್ರಸ್ತರ ಸಮಸ್ಯೆ ಆಲಿಸಲಿದ್ದಾರೆ. ಬಳಿಕ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಯಮಗರಣಿ ಗ್ರಾಮದ ಹತ್ತಿರ ಮುಳುಗಡೆಯಾದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ವೀಕ್ಷಣೆ ಮತ್ತು ಯಮಗರಣಿ ಗ್ರಾಮದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ನೆರೆ ಸಂತ್ರಸ್ತರ ನೋವು ಆಲಿಸಲಿದ್ದಾರೆ. ಅಲ್ದೆ, ಯಮಗರಣಿಯಿಂದ ನಿಪ್ಪಾಣಿ ತಾಲೂಕಿನ ಕೋಡನಿ ಗ್ರಾಮದಲ್ಲಿ ಹಾನಿಗೊಳಗಾದ ಪ್ರದೇಶವನ್ನ ಸಿಎಂ ವೀಕ್ಷಣೆ ಮಾಡಲಿದ್ದಾರೆ.

ಇಷ್ಟೆಲ್ಲಾ ರೌಂಡ್ಸ್ ಹಾಕಿದ ಬಳಿಕ ಮಧ್ಯಾಹ್ನ ಬೆಳಗಾವಿಯ ನ್ಯೂ ಸರ್ಕ್ಯೂಟ್ ಹೌಸ್ನಲ್ಲಿ ಊಟ ಮಾಡಿಕೊಂಡು 2.30ಕ್ಕೆ ಸರ್ಕ್ಯೂಟ್ ಹೌಸ್ ಸಭಾಂಗಣದಲ್ಲಿ ಬಿಎಸ್ವೈ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಚಿವರು, ಶಾಸಕರು ಮತ್ತು ಸಂಸದರು ಕೂಡ ಭಾಗಿಯಾಗಲಿದ್ದಾರೆ. ಸಭೆ ಮುಗಿದ ಬಳಿಕ ಮತ್ತೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಮರಳುವ ಸಿಎಂ ಯಡಿಯೂರಪ್ಪ ಅಲ್ಲಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

ಇನ್ನು, ಬೆಳಗಾವಿಗೆ ಬರ್ತಿರೋ ಸಿಎಂ ಸುಮ್ಮನೆ ಬರ್ತಿಲ್ಲ. ವಿಶೇಷ ಪ್ಯಾಕೇಜ್ ಘೋಷಣೆ ಮಾಡ್ತಾರೆ ಮತ್ತು ತಕ್ಷಣ ಇಂತಿಷ್ಟು ಹಣ ಬಿಡುಗಡೆ ಮಾಡ್ತಾರೆ ಅಂತಾ ಜನ ನಿರೀಕ್ಷೆ ಮಾಡ್ತಿದ್ದಾರೆ. ಇತ್ತ, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಬೆಳಗಾವಿಗೆ ವಿಶೇಷ ಪ್ಯಾಕೇಜ್ ಕೊಡಿ ಅಂತಾ ಆಗ್ರಹಿಸ್ತಿದ್ದಾರೆ.

ಸದ್ಯ, ಅಧಿಕಾರ ಇರುತ್ತೋ ಹೋಗುತ್ತೋ ಗೊತ್ತಿಲ್ಲ.. ಆದ್ರೆ, ಖುದ್ದು ಸಿಎಂ ಯಡಿಯೂರಪ್ಪ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡ್ತಿರೋದು, ಜಿಲ್ಲೆಯ ಜನರಿಗೆ ಸಮಾಧಾನ ತಂದಿದೆ. ಇತ್ತ, ಸಿಎಂ ರೌಂಡ್ಸ್ ಹಾಕುವಾಗ್ಲೇ ಹೈಕಮಾಂಡ್ನಿಂದ ರಾಜೀನಾಮೆ ಸಂದೇಶ ಬರಬಹುದು. ರಾಜ್ಯದ ನೆರೆ ಪರಿಸ್ಥಿತಿ ಗಮನಿಸಿದ್ರೆ, ಬಿಎಸ್‌ವೈಗೆ ನೀವೇ ಮುಂದುವರಿಯಿರಿ ಅನ್ನೋ ಸಂದೇಶವೂ ಬರಬಹುದು. ಒಂದ್ವೇಳೆ ಕಂಟಿನ್ಯೂ ಮಾಡುವಂತೆ ಮೆಸೇಜ್ ಬಂದ್ರೆ, ಮಹಾಮಳೆಯಿಂದ ಬಿಎಸ್‌ವೈಗೆ ಬೋನಸ್ ಸಿಕ್ಕಂತಾಗುತ್ತೆ.

ಇದನ್ನೂ ಓದಿ: ಮಳೆಗೆ ತತ್ತರಿಸಿದ ಬಾಗಲಕೋಟೆ; 38 ಕುಟುಂಬಗಳ ಸ್ಥಳಾಂತರ, ಮುಳುಗುವ ಭೀತಿಯಲ್ಲಿ ಸಂಗಮೇಶ್ವರ ದೇಗುಲ

Published On - 8:07 am, Sun, 25 July 21