ಮಳೆಗೆ ತತ್ತರಿಸಿದ ಬಾಗಲಕೋಟೆ; 38 ಕುಟುಂಬಗಳ ಸ್ಥಳಾಂತರ, ಮುಳುಗುವ ಭೀತಿಯಲ್ಲಿ ಸಂಗಮೇಶ್ವರ ದೇಗುಲ

ಮಳೆ ತಂದ ಅವಾಂತರ ಒಂದೆರೆಡಲ್ಲ. ಕೊರೊನಾದಿಂದ ಚೇತರಿಕೆ ಕಾಣುತ್ತಿದ್ದ ಜನರ ಬಾಳಲ್ಲಿ ಮಳೆ ದೊಡ್ಡ ಆಘಾತ ತಂದಿದೆ. ಬೋಟ್‌ಗಳ ಸಹಾಯದಿಂದ ಜಾನುವಾರು, ಅಗತ್ಯವಸ್ತುಗಳ ಸಮೇತ ಜನರ ಸ್ಥಳಾಂತರ ಮಾಡಲಾಗಿದೆ. ಬೋಟ್ಗೆ ಕಟ್ಟಿದ್ದರಿಂದ ನದಿಯಲ್ಲಿ ಈಜುತ್ತಾ ಕೆಲ ಜಾನುವಾರುಗಳು ಸಾಗಿದೆ.

ಮಳೆಗೆ ತತ್ತರಿಸಿದ ಬಾಗಲಕೋಟೆ; 38 ಕುಟುಂಬಗಳ ಸ್ಥಳಾಂತರ, ಮುಳುಗುವ ಭೀತಿಯಲ್ಲಿ ಸಂಗಮೇಶ್ವರ ದೇಗುಲ
ಬಾಗಲಕೋಟೆಯ ಮಿರ್ಜಿ ಗ್ರಾಮಕ್ಕೆ ನೀರು ನುಗ್ಗಿತ್ತು (ಸಂಗ್ರಹ ಚಿತ್ರ)

ಬಾಗಲಕೋಟೆ: ಕರ್ನಾಟಕದ ಕೆಲ ಭಾಗಗಳಲ್ಲಿ ಭಾರಿ ಮಳೆ ಸಂಭವಿಸುತ್ತಿದ್ದು ಜನ ಜೀವನ ತತ್ತರಿಸಿದೆ. ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನಡುಗಡ್ಡೆಯಾದ ಗ್ರಾಮದಲ್ಲಿ ಸಿಲುಕಿದ್ದ ಜನರನ್ನು ಸ್ಥಳಾಂತರಿಸಲಾಗಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿ ಮುತ್ತೂರಿನಲ್ಲಿದ್ದ 38 ಕುಟುಂಬಗಳ ಸ್ಥಳಾಂತರ ಕಾರ್ಯ ನಡೆದಿದೆ.

ಮಳೆ ತಂದ ಅವಾಂತರ ಒಂದೆರೆಡಲ್ಲ. ಕೊರೊನಾದಿಂದ ಚೇತರಿಕೆ ಕಾಣುತ್ತಿದ್ದ ಜನರ ಬಾಳಲ್ಲಿ ಮಳೆ ದೊಡ್ಡ ಆಘಾತ ತಂದಿದೆ. ಬೋಟ್‌ಗಳ ಸಹಾಯದಿಂದ ಜಾನುವಾರು, ಅಗತ್ಯವಸ್ತುಗಳ ಸಮೇತ ಜನರ ಸ್ಥಳಾಂತರ ಮಾಡಲಾಗಿದೆ. ಬೋಟ್ಗೆ ಕಟ್ಟಿದ್ದರಿಂದ ನದಿಯಲ್ಲಿ ಈಜುತ್ತಾ ಕೆಲ ಜಾನುವಾರುಗಳು ಸಾಗಿದೆ.

20 ಶೆಡ್‌ಗಳು ಜಲಾವೃತ
ಇನ್ನು ಮತ್ತೊಂದೆಡೆ ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಕ್ಕೆ ಮಳೆ ನೀರು ನುಗ್ಗಿದ್ದು ಕುಂಬಾರಗಲ್ಲಿಯಲ್ಲಿ 20 ಶೆಡ್‌ಗಳು ಜಲಾವೃತಗೊಂಡಿವೆ. ನಿವಾಸಿಗಳು ವಸ್ತುಗಳನ್ನು ತೆಗೆದುಕೊಂಡು ಬೇರೆಡೆ ಹೊರಟಿದ್ದಾರೆ.

bgk rain

ಶೆಡ್‌ಗಳು ಜಲಾವೃತ

ತ್ರಿವಳಿ ನದಿಗಳ ಅಬ್ಬರದಿಂದಾಗಿ ತ್ರಿವೇಣಿ ಸಂಗಮದಲ್ಲಿ ಭೀತಿ ಹೆಚ್ಚಾಗಿದೆ. ಯಾವುದೇ ಕ್ಷಣದಲ್ಲಾದರೂ ಪ್ರಸಿದ್ದ ಐತಿಹಾಸಿಕ ಕೂಡಲಸಂಗಮದ ಸಂಗಮೇಶ್ವರ ದೇಗುಲ ಜಲಾವೃತವಾಗುವ ಸಾಧ್ಯತೆ ಇದೆ. ದೇವಸ್ಥಾನ ಜಲಾವೃತಕ್ಕೆ ಇನ್ನೂ ಮೂರೇ ಮೆಟ್ಟಿಲು ಬಾಕಿ ಇದೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳು ಸಂಗಮ ಆಗಿರುವ ಕ್ಷೇತ್ರವಿದು. ಇನ್ನು ಕೂಡಲಸಂಗಮದ 13 ಗ್ರಾಮಗಳಿಗೆ ನೀರು ನುಗ್ಗುವ ಅಪಾಯವಿದೆ. ಕೆಂಗಲ್, ಕಜಗಲ್, ವರಗೊಡದಿನ್ನಿ, ಹೂವನೂರ, ನಂದನೂರ, ಗಂಜಿಹಾಳ, ಇದ್ದಲಗಿ, ಕಮದತ್ತ, ಅಡವಿಹಾಳ, ಎಮ್ಮೆಟ್ಟಿ, ಚವಡಕಮಲದಿನ್ನಿ, ಬಿಸಲದಿನ್ನಿ, ವಳಕಲದಿನ್ನಿ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ಇನ್ನು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಘಟಪ್ರಭಾ ನದಿ ನೀರು ಮಿರ್ಜಿ ಗ್ರಾಮಕ್ಕೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಗ್ರಾಮ ಜಲಾವೃತ ಹಿನ್ನೆಲೆ ಸುರಕ್ಷಿತ ಸ್ಥಳಕ್ಕೆ ಜನರು ತೆರಳ್ತಿದ್ದಾರೆ.

bgk rain

ಅಗತ್ಯವಸ್ತುಗಳ ಸಮೇತ ಜನರ ಸ್ಥಳಾಂತರ

ಇದನ್ನೂ ಓದಿ: ಉದ್ಘಾಟನೆಗೊಂಡ ಒಂದೇ ದಿನಕ್ಕೆ ಕಿತ್ತು ಹೋಯ್ತು 30 ಕೋಟಿ ರೂ. ವೆಚ್ಚದ ರಸ್ತೆ; ಕಮರ್ಷಿಯಲ್​ ಸ್ಟ್ರೀಟ್​ನ ಹೊಸ ರಸ್ತೆಗೆ ದುರಸ್ತಿ ಭಾಗ್ಯ

Click on your DTH Provider to Add TV9 Kannada