Crime News: ಗಂಡನ ಜತೆ ಜಗಳವಾಡಿ 4 ಅಪ್ರಾಪ್ತ ಹೆಣ್ಣು ಮಕ್ಕಳನ್ನು ಕೊಳಕ್ಕೆ ನೂಕಿದ ಮಹಿಳೆ; 3 ಸಾವು

ಪತಿ ಅಸ್ಲಾಂ ಅಲಂ ಅಬ್ರಾಡ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ದೂರವಾಣಿ ಕರೆಯಲ್ಲಿ ಇವರಿಬ್ಬರ ಮಧ್ಯೆ ಮನಸ್ಥಾಪ ಉಂಟಾಗಿದೆ.

Crime News: ಗಂಡನ ಜತೆ ಜಗಳವಾಡಿ 4 ಅಪ್ರಾಪ್ತ ಹೆಣ್ಣು ಮಕ್ಕಳನ್ನು ಕೊಳಕ್ಕೆ ನೂಕಿದ ಮಹಿಳೆ; 3 ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shruti hegde

Updated on: Jul 25, 2021 | 11:52 AM

ನಾಲ್ಕು ಅಪ್ರಾಪ್ತ ಹೆಣ್ಣು ಮಕ್ಕಳನ್ನು ತಾಯಿಯೇ ಕೊಳದಲ್ಲಿ ಎಸೆದ ಮನಕಲಕುವ ಘಟನೆಯೊಂದು ನಡೆದಿದೆ. ಅಬ್ರೋಡ್​ನಲ್ಲಿದ್ದ ತನ್ನ ಪತಿಯೊಡನೆ(Husband) ಪತ್ನಿ(Wife) ದೂರವಾಣಿ ಕರೆ ಮಾಡಿ ಮಾತನಾಡಿದ್ದಾಳೆ. ಅವರಿಬ್ಬದ ನಡುವೆ ನಡೆದ ಸಣ್ಣ ಮನಸ್ತಾಪ ವಿಪರೀತಗೊಂಡು ಜಗಳಕ್ಕೆ ಕಾರಣವಾಗಿದೆ. ಬಳಿಕ ತಾಯಿ ಹೆಣ್ಣು ಮಕ್ಕಳನ್ನು(Daughters) ಕೊಳಕ್ಕೆ ನೂಕಿದ್ದಾಳೆ. ಮೂರು ಹೆಣ್ಣು ಮಕ್ಕಳು ಸಾವಿಗೀಡಾಗಿದ್ದಾರೆ(Death). ಒಂದು ಮಗುವನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.

ನೂರ್ಜಹಾನ್ ನಿಸಾನ್ ಮತ್ತು ಅಸ್ಲಾಮ್ ಅಲಂ ಇಬ್ಬರು ದಂಪತಿಗಳು. ಇವರಿಗೆ 4 ಜನ ಹೆಣ್ಣು ಮಕ್ಕಳು. ನೂರ್ಜಹಾನ್ ನಿಸಾನ್ ತನ್ನ ನಾಲ್ಕು ಜನ ಹೆಣ್ಣು ಮಕ್ಕಳೊಂದಿಗೆ ಬಿಹಾರ ಗೋಪಾಲಗಂಜ್​ ಜಿಲ್ಲೆಯಲ್ಲಿ ವಾಸಿಸುತ್ತಿರುತ್ತಾಳೆ. ಪತಿ ಅಸ್ಲಾಂ ಅಲಂ ಅಬ್ರಾಡ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ದೂರವಾಣಿ ಕರೆಯಲ್ಲಿ ಇವರಿಬ್ಬರ ಮಧ್ಯೆ ಮನಸ್ಥಾಪ ಉಂಟಾಗಿದೆ.

ಬಳಿಕವೇ ನಿಸಾನ್ ತಡ ಮಾಡದೇ ಬ್ಯಾಗ್​ಪ್ಯಾಕ್​ ಮಾಡಿಕೊಂಡು ತನ್ನ ಮೂಲ ನೆಲೆಯಾದ ಉತ್ತರಪ್ರದೇಶದ ಖುಷಿ ನಗರಕ್ಕೆ ಹೊರಟಿದ್ದಾರೆ. ಹೊರಡುವ ಮುನ್ನ ಮನೆಯ ಹತ್ತಿರದಲ್ಲಿದ್ದ ಕೊಳದಲ್ಲಿ ತನ್ನ ನಾಲ್ಕೂ ಹೆಣ್ಣು ಮಕ್ಕಳನ್ನು ನೂಕಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ. ಒಂದು ಮಗುವಿನ ಜೀವ ಉಳಿದಿದ್ದು, ಇನ್ನು ಮೂರ್ವರು ಶವವಾಗಿ ಪತ್ತೆಯಾಗಿದ್ದಾರೆ.

ಗಿಲಬ್ಸಾ (8), ಅಫ್ರಿನಾ ಖತೂನ್ (5), ನುಸಬಾ ಖತೂನ್(3) ಮತ್ತು ಸಹೆಬಾ ಖತೂನ್ (2.5) ಇವರನ್ನು ತಾಯಿ ನಿಸಾನ್ ಕೊಳಕ್ಕೆ ನೂಕಿರುವ ವಿಷಯ ತಿಳಿದು ಬಂದಿದೆ. ಇವರಲ್ಲಿ ಗಿಲಬ್ಸಾ, ನುಸಬಾ ಮತ್ತು ಸಹೆಬಾ ಸಾವಿಗೀಡಾಗಿದ್ದಾರೆ ಮತ್ತು ಅಫ್ರೀನಾಳನ್ನು ಸ್ಥಳಿಯರು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಘಟನೆಯ ಬಳಿಕ ತಾಯಿ ನಿಸಾನ್​ರನ್ನು ಬಂಧಿಸಲಾಗಿದೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಈ ಕುರಿತಂತೆ ವರದಿಗಳಿಂದ ಮಾಹಿತಿ ತಿಳಿದು ಬಂದಿದೆ.

ಇದನ್ನೂ ಓದಿ:

Crime News: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ; ಆರೋಪಿಗೆ ಗಲ್ಲು ಶಿಕ್ಷೆ

Crime News: 26 ವರ್ಷದ ಹಿಂದಿನ ಕೊಲೆ ಆರೋಪ ಸಾಬೀತು; ಬಿಜೆಪಿ ನಾಯಕನಿಗೆ ಜೀವಾವಧಿ ಶಿಕ್ಷೆ

(Crime News women through 4 daughter in ponda after fight with husband at bihar)

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್