ಟಂಡ್ರಾ ಪ್ರದೇಶದಲ್ಲಿ ಸಿಲುಕಿ ಏಳು ರಾತ್ರಿ ಕರಡಿಯಿಂದ ಹಿಂಸೆ ಅನುಭವಿಸಿದ ವ್ಯಕ್ತಿಯನ್ನು ರಕ್ಷಿಸಿದ ಕರಾವಳಿ ರಕ್ಷಕ ಪಡೆ..

ಹೆಲಿಕಾಪ್ಟರ್​ನ್ನು ಅಲ್ಲಿ ಲ್ಯಾಂಡ್​​ ಮಾಡಿದ ಕೂಡಲೇ ಆ ಗಣಿಗಾರ ಮೊದಲು ಹೇಳಿದ್ದು ತನಗೆ ವೈದ್ಯಕೀಯ ಚಿಕಿತ್ಸೆ ಬೇಕು. ಸತತ ಏಳುದಿನಗಳಿಂದ ಕರಡಿಯಿಂದ ದಾಳಿಗೆ ಒಳಗಾಗಿದ್ದೇನೆ. ಕಾಲಿಗೆ ಗಾಯವಾಗಿದೆ ಎಂದು ಮನವಿ ಮಾಡಿಕೊಂಡಿದ್ದಾನೆ.

ಟಂಡ್ರಾ ಪ್ರದೇಶದಲ್ಲಿ ಸಿಲುಕಿ ಏಳು ರಾತ್ರಿ ಕರಡಿಯಿಂದ ಹಿಂಸೆ ಅನುಭವಿಸಿದ ವ್ಯಕ್ತಿಯನ್ನು ರಕ್ಷಿಸಿದ ಕರಾವಳಿ ರಕ್ಷಕ ಪಡೆ..
ಗಣಿಗಾರಿಕಾ ಕ್ಯಾಂಪ್​
Follow us
TV9 Web
| Updated By: Lakshmi Hegde

Updated on: Jul 25, 2021 | 3:29 PM

ಏಳು ರಾತ್ರಿಯಿಂದ ಕರಡಿಯಿಂದ ಹಿಂಸೆಗೆ ಒಳಗಾದ ವ್ಯಕ್ತಿಯೊಬ್ಬನನ್ನು ಕರಾವಳಿ ರಕ್ಷಕ ಪಡೆಯ ಹೆಲಿಕಾಪ್ಟರ್ (Coast Guard Helicopter)ವೊಂದು ರಕ್ಷಣೆ ಮಾಡಿದೆ. ಅಂದಹಾಗೆ ಈ ಘಟನೆ ನಡೆದದ್ದು ಯುಎಸ್​ನ ಅಲೆಸ್ಕಾ ನಗರದ ನೊಮೆ ಸಮೀಪದ ಟಂಡ್ರಾ ಪ್ರದೇಶದಲ್ಲಿ. ಈ ವ್ಯಕ್ತಿ ಒಬ್ಬ ಗಣಿಗಾರನಾಗಿದ್ದು, ಟಂಡ್ರಾ ಪ್ರದೇಶದಲ್ಲಿರುವ ಗಣಿಗಾರಿಕೆ ಕ್ಯಾಂಪ್​​ನ ಮೇಲ್ಭಾಗಕ್ಕೆ ಬಂದು ಸಹಾಯಕ್ಕಾಗಿ ಎದುರು ನೋಡುತ್ತಿದ್ದರು.

ಈ ಹೆಲಿಕಾಪ್ಟರ್​​ ಕೊಟ್ಜೆಬ್ಯೂದಿಂದ ಕೊಡಿಯಾಕ್​ಗೆ ಹೋಗುತ್ತಿತ್ತು. ಗಣಿಗಾರ ತನ್ನ ಕ್ಯಾಂಪ್ ಮೇಲ್ಭಾಗದಲ್ಲಿ SOS (ಅಂತಾರಾಷ್ಟ್ರೀಯ ಆರೋಗ್ಯ ಮತ್ತು ಭದ್ರತಾ ಸೇವೆಗಳ ಸಂಸ್ಥೆ) ಮಾರ್ಕ್​ ಹಾಕಿದ್ದ. ಅಂದರೆ ತಾನು ಅಪಾಯದಲ್ಲಿದ್ದೇನೆ..ರಕ್ಷಿಸಿ ಎಂಬ ಅರ್ಥದಲ್ಲಿ ಗುರುತು ಹಾಕಿಕೊಂಡಿದ್ದ. ಅದನ್ನು ನೋಡಿದ ಹೆಲಿಕಾಪ್ಟರ್​ ಸಿಬ್ಬಂದಿ ಆ ಕ್ಯಾಂಪ್​​ನ ಸುತ್ತಲೂ ರೌಂಡ್​ ಹಾಕಿದರು. ಆಗ ಅಲ್ಲಿ ಈ ವ್ಯಕ್ತಿ ತನ್ನ ಕೈ ಬೀಸುತ್ತ ನಿಂತಿರುವುದು ಕಂಡು, ಹೆಲಿಕಾಪ್ಟರ್​ ಕೆಳಗಿಳಿಸಿ ರಕ್ಷಣೆ ಮಾಡಲಾಗಿದೆ.

ಹೆಲಿಕಾಪ್ಟರ್​ನ್ನು ಅಲ್ಲಿ ಲ್ಯಾಂಡ್​​ ಮಾಡಿದ ಕೂಡಲೇ ಆ ಗಣಿಗಾರ ಮೊದಲು ಹೇಳಿದ್ದು ತನಗೆ ವೈದ್ಯಕೀಯ ಚಿಕಿತ್ಸೆ ಬೇಕು. ಸತತ ಏಳುದಿನಗಳಿಂದ ಕರಡಿಯಿಂದ ದಾಳಿಗೆ ಒಳಗಾಗಿದ್ದೇನೆ. ಕಾಲಿಗೆ ಗಾಯವಾಗಿದೆ ಎಂದು ಮನವಿ ಮಾಡಿಕೊಂಡಿದ್ದಾನೆ. ಬೇರಿಂಗ್​ ಸಮುದ್ರದ ಕರಾವಳಿ ಅಂಚಾಗಿರುವ ನೋಮೆ, ಅಲಸ್ಕಾದ ಅಂಕಾರೇಜ್​ನ ವಾಯುವ್ಯಕ್ಕೆ 535 ಮೈಲು ದೂರದಲ್ಲಿದೆ.

ಇದನ್ನೂ ಓದಿ‘ಮನೋಜ್​ ಬಾಜ್​ಪೇಯಿ ಪಾರ್ನ್​ ಸಿನಿಮಾದಲ್ಲಿ ನಟಿಸಿದ್ದಾರೆ’; ಗಂಭೀರ ಆರೋಪ ಮಾಡಿದ ಬಾಲಿವುಡ್​ ಕಾಮಿಡಿಯನ್​

Helicopter rescues man after 7 days struggle with bear In Alaska