Shocking Video: ನೈಟ್ಕ್ಲಬ್ನಲ್ಲಿ ಕುಡಿದ ಯುವತಿಯ ಪರಿಸ್ಥಿತಿ ನೋಡಿದ್ರೆ ಆಘಾತವಾಗುತ್ತೆ!
18 ವರ್ಷದ ಯುವತಿ ಮಿಲ್ಲಿ ಟ್ಯಾಪ್ಲಿನ್ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆಕೆಗೆ ಕೈಗಳನ್ನು ಅಲುಗಾಡಿಸಲು ಸಾಧ್ಯವಾಗುತ್ತಿಲ್ಲ. ಮುಖದ ಸ್ನಾಯುಗಳನ್ನು ಅಲುಗಾಡಿಸಲು ಆಕೆ ಕಷ್ಟಪಡುತ್ತಿರುವುದು ವಿಡಿಯೋದಲ್ಲಿ ಗೋಚರವಾಗುತ್ತಿದೆ.
ವಿಲಕ್ಷಣ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೈಟ್ಕ್ಲಬ್ನಲ್ಲಿ ಡ್ರಿಂಕ್ಸ್ ಮಾಡಿದ ಬಳಿಕ ನನ್ನ ಮಗಳು ‘ಫ್ರೀಜ್’ ಆಗಿದ್ದಾಳೆ ಎಂದು ಯುವತಿಯ ತಾಯಿ ಹೇಳಿಕೆ ನೀಡಿದ್ದಾರೆ. ಈ ಗೊಂದಲದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 18 ವರ್ಷದ ಯುವತಿ ಮಿಲ್ಲಿ ಟ್ಯಾಪ್ಲಿನ್ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆಕೆಗೆ ಕೈಗಳನ್ನು ಅಲುಗಾಡಿಸಲು ಸಾಧ್ಯವಾಗುತ್ತಿಲ್ಲ. ಮುಖದ ಸ್ನಾಯುಗಳನ್ನು ಅಲುಗಾಡಿಸಲು ಆಕೆ ಕಷ್ಟಪಡುತ್ತಿರುವುದು ವಿಡಿಯೋದಲ್ಲಿ ಗೋಚರವಾಗುತ್ತಿದೆ.
ಯುವತಿಗೆ ಕೆಲ ಗಂಟೆಗಳ ಕಾಲ ನಡೆದಾಡಲು ಸಾಧ್ಯವಾಗಲಿಲ್ಲ. ಅದಾಗ್ಯೂ ಆಕೆ ಅಸ್ವಸ್ಥಳಾಗಿದ್ದಳು. ಅವಳು ತನ್ನ ಸ್ನೇಹಿತರೊಂದಿಗೆ ನೈಟ್ಕ್ಲಬ್ಗೆ ತೆರಳಿದ್ದಳು. ಸೌಥನ್ನ ಮೂ ಮೂ ನೈಟ್ ಕ್ಲಬ್ನಲ್ಲಿ ಈ ಘಟನೆ ನಡೆದಿದೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.
ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ರೀತಿಯ ಔಷಧಿಗಳನ್ನು ನೀಡಲಾಯಿತು. ಅವಳಿಕೆ ಪಾರ್ಶ್ವವಾಯು ಸಮಸ್ಯೆ ಕಾಡತೊಡಗಿದೆ ಎಂಬುದು ವೈದ್ಯರಿಂದ ತಿಳಿದು ಬಂತು ಎಂದು ಯುವತಿಯ ತಾಯಿ ಕ್ಲೇರ್ ಹೇಳಿದ್ದಾರೆ. ಇತರರಿಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಹಾಗೂ ಇತರರನ್ನು ರಕ್ಷಿಸುವ ಸಲುವಾಗಿ ವಿಡಿಯೋವನ್ನು ಆನ್ಲೈನ್ನಲ್ಲಿ ಹರಿಬಿಟ್ಟಿದ್ದೇನೆ ಎಂದು ಕ್ಲೇರ್ ಪ್ರತಿಕ್ರಿಯಿಸಿದ್ದಾರೆ.
ನನಗೆ ತುಂಬಾ ಚಿಂತೆ ಕಾಡತೊಡಗಿತು. ನನ್ನ ಮಗಳಿಗೆ ಏನು ಕುಡಿಸಿರಬಹುದು? ಎಂದು ನಾನು ಗಂಭೀರವಾಗಿ ಯೋಚಿಸಲು ಪ್ರಾರಂಭಿಸಿದೆ. ನಾನು ನನ್ನ ಜೀವನದಲ್ಲಿ ಇಲ್ಲಿಯವರೆಗೂ ಇಂಥದ್ದನ್ನು ನೋಡಿಲ್ಲ. ಆಕೆಯನ್ನು ನೋಡಿದರೆ ಭಯವಾಗುತ್ತಿತ್ತು. ವಿಡಿಯೋ ನೋಡುವುದರ ಮೂಲಕ ಇತತರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಕ್ಲೇರ್ ಹೇಳಿದ್ದಾರೆ. ಈ ಕುರಿತಾದ ಮಾಹಿತಿಗಳು ವರದಿಗಳಿಂದ ತಿಳಿದು ಬಂದಿದೆ.
ಆದರೆ ಆಶ್ಚರ್ಯವೇನೆಂದರೆ ಅವಳಿಗೆ ಎಲ್ಲವೂ ತಿಳಿಯುತ್ತಿತ್ತು ಎಂದು ಕ್ಲೇರ್ ಹೇಳಿದ್ದಾರೆ. ನಾನು ಡ್ರಿಂಕ್ಸ್ ಒಂದೆರಡು ಸಿಪ್ ಸೇವಿಸಿ ಧೂಮಪಾನ ಮಾಡುವ ಜಾಗಕ್ಕೆ ಹೋದೆ. ಹಿಂತಿರುಗಿ ಬಂದ ತಕ್ಷಣ ತುಂಬಾ ಕುಡಿದಿದ್ದೇನೆ ಎಂದು ಭಾಸವಾಗ ತೊಡಗಿತು. ನನ್ನ ಕೈ ಕಾಲುಗಳು ನಿಯಂತ್ರಣ ತಪ್ಪುತ್ತಿದ್ದಂತೆಯೇ ಸ್ನೇಹಿತರು ನನ್ನ ಅಕ್ಕನಿಗೆ ದೂರವಣಿ ಕರೆ ಮಾಡಿ ವಿಷಯ ತಿಳಿಸಿದರು. ಬಳಿಕ ದಂಪತಿ ಬಂದು ನನ್ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಮಿಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:
Shocking: ರೈತನ ಹೊಟ್ಟೆ ಬಗೆದು ಸಾಯಿಸಿದ ಕಾಡುಪ್ರಾಣಿ; ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ದುರ್ಘಟನೆ